ಹೀಗೇ ಕೇಳಿದ್ದೇನೆ; ಒಮ್ಮೆ ಭಗವಾನರು ಐನೂರು ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಶಾಕ್ಯರ ನಡುವೆ ಕಪಿಲವತ್ಥುವಿನ ಮಹಾವನದಲ್ಲಿ ತಂಗಿದ್ದರು. ಆ ಭಿಕ್ಷುಗಳೆಲ್ಲರೂ ಅರಹಂತರಾಗಿದ್ದರು. ದಶಲೋಕಧಾತುಗಳಿಂದ ದೇವತೆಗಳು ಭಗವಾನರನ್ನು ಮತ್ತು ಭಿಕ್ಷು ಸಂಘವನ್ನು ದರ್ಶನ ಮಾಡಲು ಆಗಾಗ ಬಂದು ಅಲ್ಲಿ ಸೇರುತ್ತಿದ್ದರು. ಆಗ ನಾಲ್ಕು ಸುದ್ಧವಾಸಕಾಯಕ ದೇವತೆಗಳಿಗೆ ಹೀಗೆನ್ನಿಸಿತು-
‘ಭಗವಾನರು ಐನೂರು ಅರಹಂತ ಭಿಕ್ಷುಗಳ ದೊಡ್ಡ ಸಮೂಹದೊಂದಿಗೆ ಶಾಕ್ಯರ ನಡುವೆ ಕಪಿಲವತ್ಥುವಿನ ಮಹಾವನದಲ್ಲಿ ತಂಗಿದ್ದಾರೆ. ದಶಲೋಕಧಾತುಗಳಿಂದ ದೇವತೆಗಳು ಆಗಾಗ ಬಂದು ಭಗವಾನರನ್ನು ಮತ್ತು ಭಿಕ್ಷು ಸಂಘವನ್ನು ದರ್ಶನಮಾಡಲು ಅಲ್ಲಿ ಸೇರುತ್ತಿದ್ದಾರೆ. ನಾವೂ ಭಗವಾನರ ಬಳಿಗೆ ಹೋಗಿ ಒಬ್ಬೊಬ್ಬರಾಗಿ ಗಾಥೆಯನ್ನು ಏಕೆ ಹೇಳಬಾರದು?’
ಆಗ ಸುದ್ಧವಾಸಕಾಯಕ ದೇವತೆಗಳು ಬಲಶಾಲಿಯಾದವನೊಬ್ಬನು ಮಡಿಚಿರುವ ತೋಳನ್ನು ಚಾಚುವಷ್ಟು ಕಾಲದಲ್ಲಿ ಅಥವಾ ಚಾಚಿರುವ ತೋಳನ್ನು ಮಡಿಚಿಕೊಳ್ಳುವಷ್ಟು ಕ್ಷಿಪ್ರಕಾಲದಲ್ಲಿ ಸುದ್ಧವಾಸದಿಂದ ಅಂತರ್ಧಾನರಾಗಿ ಭಗವಾನರ ಮುಂದೆ ಕಾಣಿಸಿಕೊಂಡರು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ನಿಂತುಕೊಂಡರು. ಹೀಗೆ ನಿಂತವರಲ್ಲಿ ಒಬ್ಬ ದೇವತೆಯು ಭಗವಾನರನ್ನು ಕುರಿತು ಈ ಒಂದು ಗಾಥೆಯನ್ನು ಹೇಳಿದನು-
“ಬಯಲಿನಲಿ ಸೇರಿರುವ ವಿಜಯ ದೇವತೆಗಳೊಡನೆ
ಸೇರಬಂದಿಹೆವು ನಾವು ಶ್ರೇಷ್ಠವಹಧಮ್ಮ ಸಮಯದಲಿ.”
ಇನ್ನೊಬ್ಬ ದೇವತೆಯು ಭಗವಾನರನ್ನು ಕುರಿತು ಈ ಗಾಥೆಯನ್ನು ಹೇಳಿದನು-
“ಅಲ್ಲಿರುವ ಭಿಕ್ಷುಗಳು ಆನಂದ ಚಿತ್ತದಲಿ ನಡೆಯುವರು
ನೇರದಾರಿಯಲಿ ಆನಂದ ಚಿತ್ತದಲಿ ವಿವೇಕಿಗಳವರು ರಕ್ಷಿಪರು ತಮ್ಮಿಂದ್ರಿಯಗಳ
ಸಾರಥಿಯು ಹಗ್ಗವನು ಹಿಡಿಯುವೋಲ್.”
ಇನ್ನೊಬ್ಬ ದೇವತೆಯು ಭಗವಾನರನ್ನು ಕುರಿತು ಈ ಗಾಥೆಯನ್ನು ಹೇಳಿದನು-
“ಮನವ ಬಿಗಿದಿರುವ ಕಟ್ಟುಗಳ ಕಡಿದು ಬಂಧಿಸಿದ ಸೆರೆಮನೆಯ ಬಾಗಿಲನೆ ಒಡೆದು
ನಡೆಯುವರು ಶುದ್ಧ ವಿಮಲರು ಅವರು ದಮಿಸಿದಾನೆಯ ತೆರದಿ.”
ನಾಲ್ಕನೆಯ ದೇವತೆಯು ಭಗವಾನರನ್ನು ಕುರಿತು ಈ ಗಾಥೆಯನ್ನು ಹೇಳಿದನು-
“ಬುದ್ಧರಿಗೆ ಶರಣು ಹೋಗುವ ಜನರು ಅಪಾಯ ಭೂಮಿಯನೆಂದು
ತುಳಿಯರು ದಿಟವು ದೇಹವನು ತೊರೆದನಂತರ ಅವರು ಪಡೆಯುವರು ದೇವಲೋಕವ ನಿಜದಿ.”
ದೇವತೆಗಳ ಸೇರುವಿಕೆ
ಆಗ ಭಗವಾನರು ಭಿಕ್ಷುಗಳನ್ನು ಕುರಿತು ಇಂತೆಂದರು- “ಭಿಕ್ಷುಗಳೇ, ತಥಾಗತನನ್ನು ಮತ್ತು ಭಿಕ್ಷು ಸಂಘವನ್ನು ನೋಡಲು ದಶಲೋಕಧಾತುಗಳಲ್ಲಿನ ದೇವತೆಗಳು ಆಗಾಗ ಸೇರುತ್ತಾರಷ್ಟೆ. ಹಿಂದೆ ಯಾವಾವ ಸಂಬುದ್ಧರಿದ್ದರೋ ಅವರನ್ನು ನೋಡಲು ದೇವತೆಗಳು ಸೇರುತ್ತಿದ್ದಂತೆ ಈಗ ನನ್ನನ್ನು ನೋಡಲು ಸೇರುತ್ತಿದ್ದಾರೆ. ಮುಂದೆ ಬರುವ ಅರಹಂತ ಸಂಬುದ್ಧರನ್ನು ನೋಡಲು ಇಂದು ನನ್ನನ್ನು ನೋಡಲು ದೇವತೆಗಳು ಸೇರುವಂತೆಯೇ ಮುಂದೆಯೂ ಆಗಾಗ ಸೇರುತ್ತಾರೆ. ಭಿಕ್ಷುಗಳೇ, ಆ ದೇವತೆಗಳ ಹೆಸರುಗಳನ್ನು ತಿಳಿಸುತ್ತೇನೆ, ಪ್ರಸ್ತುತಪಡಿಸುತ್ತೇನೆ ಮತ್ತು ನಿಮಗೆ ಹೇಳುತ್ತೇನೆ. ಅದನ್ನು ಕೇಳಿ ಅರ್ಥಮಾಡಿಕೊಳ್ಳುವುದು ಸಾಧುವಾದುದು, ಈಗ ಹೇಳುತ್ತೇನೆ.”
“ಹಾಗೆಯೇ ಆಗಲಿ ಭಂತೆ” ಎಂದು ಆ ದೇವತೆಗಳು ಹೇಳಿದರು.
ಭಗವಾನರು ಇಂತೆಂದರು-
“ಬುವಿಯೊಳಿರುವ ದೇವರುಗಳೆಲ್ಲ ಸಮಚಿತ್ತರಿಹರು ವರ್ಜಿಸಿಹರೆಲ್ಲ ಅಮಂಗಳವ
ಗಿರಿಗಹ್ವರಗಳವರ ನೆಲೆ, ಇದನೆ ಹೇಳುವೆ ನಾನು ಗಂಭೀರವಾಣಿಯಲಿ
“ಭಯದಿ ನಡುಗುವ ಮಿಗಗಡಣವನು
ಸುಲಭದೊಳು ಜಯಿಸಮಿಗರಾಜನಂತೆ
ಆ ಪರಿಶುದ್ಧರಿಹರು ಪ್ರಸನ್ನ ಚಿತ್ತದಲಿ”
“ಕಪಿಲವತ್ಥುವಿನೊಳಿರ್ಪ ವನದೊಳಗೆ ಸೇರಿರುವ
ಅರ್ಧಸಾವಿರ ಮೀರ್ದ ಶಿಷ್ಯಗಡಣವ ಕಂಡು
ಪೇಳ್ದನು ಗುರುವು ಜನರುದ್ಧಂತ ವಚನಗಳು”
“ಭಿಕ್ಷುಗಳ, ನೋಡಿರೀ ದೇವಕಾಯರನು
ತೇಜಸ್ಸಿಗಳು ಹೊಳೆಯುತಿಹರು ಅತಿಕಾಂತಿಯಿಂದ;
ಬುದ್ಧವಚನವ ಕೇಳಿದನುಯಾಯಿಗಳೆಲ್ಲ
ಅಕ್ಕರದಿ ಸೇರಿಹರು ಕಾಂತಿಯುತರನು ನೋಡೆ;
ಮನುಜರಿಗೆ ಕಾಣದಿಹ ಅರಿವವರಿಗೆ ಲಭಿಸಿ
ದೇವಗಡಣವನೆ ಕಂಡರಾ, ಭಿಕ್ಷುಗಳು ಸಾಧಕರು”
“ಕೆಲವರಿಗೆ ಕಾಣಿಸಿತು ನೂರು ದೇವರ ಗಡಣ
ಸಾವಿರವ ನೋಡಿದರು ಕೆಲರು
ದಶಸಾವಿರವ ಕಂಡರು ಕೆಲರು, ನೋಡಿದರು ಎಪ್ಪತ್ತು
ಸಾವಿರವ ಹಿರಿಯ ದೇವಸಮೂಹವನು
ಕಂಡ ಈ ಭಿಕ್ಷುಜನ ಕೆಲರು ಎಲ್ಲಕಡೆಯೊಳು ಇರ್ದ ಅನಂತಗಹಣವನು
ಅವರೆಲ್ಲರನು ನೋಡಿ ಅವರ ಮನವನು ತಿಳಿದ
ಪರಮ ಗುರು ಹೇಳಿದನು ಶಿಷ್ಯವೃಂದಕೆ ಶಾಸನವ”
“ಭಿಕ್ಷುಗಳೇ, ನೋಡಿರೀ ದೇವರಾರನು, ತೇಜವಂತರನು
ನಿಮಗೆ ತಿಳಿಹುವೆನವರ ಮಹಿಮೆಯನು ಗೀತೆಯಲಿ”
“ಯಕ್ಷರಿಹರೇಳ ಸಾವಿರ ಕಪಿಲವತ್ಥು ಭೂಮಿಯಲಿ
ಋದ್ಧಿವಂತರು ಅವರು ಅತಿಬಲರು
ಯಶವ ಪಡೆದಿಹ ವರ್ಣವಂತರು ನಿಜದಿ
ವನದಿ ನೆರೆದಿರುವ ಭಿಕ್ಷುಗಳನೀಕ್ಷಿಸಲು ಬಂದಿರುವರಿಲ್ಲಿ ಆನಂದದಿಂದ
“ಹಿಮಗಿರಿಯೋಳಿರ್ಪ ಯಕ್ಷರಾರು ಸಾವಿರ
ಇಳಿದಿಹರು ವಿವಿಧ ವರ್ಣವ ಪಡೆದ ಋದ್ಧಿಮಂತರು
ಅವರತಿಬಲರು ಕೀರ್ತಿ ತೇಜಸನು ಹೊಂದಿಹರು
ವನದಿ ನೆರೆದಿರುವ ಭಿಕ್ಷುಗಳನೀಕ್ಷಿಸಲು ಬಂದಿರುವರಿಲ್ಲಿ ಆನಂದದಿಂದ
“ಯಕ್ಷರಿಳಿದಿಹರು ಸಾತಗಿರಿಯಿಂದ
ವಿವಿಧವರ್ಣದೊಳಿರುವ ಮೂರುಸಾವಿರ ಮಂದಿ
ಋದ್ಧಿವಂತರು ಅವರು ಅತಿಬಲರು
ಯಶವ ಪಡೆದಿಹ ವರ್ಣವಂತರು ನಿಜದಿ
ವನದಿ ನೆರೆದಿರುವ ಭಿಕ್ಷುಗಳನೀಕ್ಷಿಸಲು ಬಂದಿಹರಿಲ್ಲಿ ಆನಂದದಿಂದ
“ನೀಪುಲ್ಲ ಗೃಹದಿಳಿರುವ ಕುಂಭೀರ ಯಕ್ಷ ಬಂದಿಹನು
ರಾಜಗಹ ನಗರದವನಿಗುಂಟು
ಲಕ್ಷ ಯಕ್ಷರ ಪಡೆಯು
ಬಂದಿಹನಿಲ್ಲಿಗೆ ತನ್ನ ಪಡೆಯನು ಕೂಡಿ
“ಮೂಡಲಿನೊಡಯನವ ಧತರಟ್ಠ ದೇವತೆಯು
ಗಂಧರ್ವರಧಿಪತಿಯು ಯಶಪಡೆದ ಅಭಿರಾಜ
ಧತರಟ್ಠ ದೇವನಿಗೆ ಸುತರು ಬಹುಮಂದಿ
ಮಹಾಬಲರುದ್ರನಿಗೆ ಸಮರು
“ಋದ್ಧಿವಂತರು ಅವರು ಅತಿಬಲರಿಂದ್ರಸಮರು
ಯಶವ ಪಡೆದಿಹ ವರ್ಣವಂತರು ನಿಜದಿ
ವನದಿ ನೆರೆದಿರುವ ಭಿಕ್ಷುಗಳನೀಕ್ಷಿಸಲು ಬಂದಿಹರು ಆನಂದದಿಂದ
“ವೇರುಲ್ಹ ದೇವನವ ತೆಂಕಲಿಗೆ ಒಡೆಯ ಕುಂಭಂಡರಧಿಪತಿಯು
ಯಶವನ್ನೆ ಹೊಂದಿರುವ ಮಹಾರಾಜ ಬಲಶಾಲಿ
ಮಹಾಬಲರಿಂದ್ರಸಮರು
ಋದ್ಧಿವಂತರು ಅವರು ವರ್ಣವಂತರು ನಿಜದಿ
ನೆರೆದಿರುವರಿಲ್ಲಿ ಸಡಗರದಿ ಭಿಕ್ಷುಗಳನೀಕ್ಷಿಸಲು
“ವಿರೂಪಕ್ಖ ದೇವನವ ಪಶ್ಚಿಮಕೆ ಒಡೆಯ
ನಾಗರಧಿಪತಿಯವನು ಮಹಾರಾಜ ಬಲಶಾಲಿ
ಅವಗುಂಟು ಬಹುಸುತರು ಮಹಾಬಲರಿಂದ್ರ ಸಮರು
ಋದ್ಧಿವಂತರು ಅವರು ವರ್ಣವಂತರು ನಿಜದಿ
ನೆರೆದಿರುವರಿಲ್ಲಿ ಸಹಚರದಿ ಭಿಕ್ಷುಗಳನೀಕ್ಷಿಸಲು
“ಕುಬೇರ ದೇವನವ ಬಡಗದಿಶೆಯೊಡೆದು
ಯಕ್ಷರಧಿಪತಿಯವನು ಮಹಾರಾಜ ಬಲಶಾಲಿ
ಅವಗುಂಟು ಬಹುಸುತರು ಮಹಾ ಬಲರಿಂದ್ರ ಸಮರು
ಋದ್ಧಿವಂತರು ಅವರು ಅತಿಬಲರು ಯಶವ ಪಡೆದಿಹ ವರ್ಣವಂತರು ನಿಜದಿ
ವನದಿ ನೆರೆದಿರುವ ಭಿಕ್ಷುಗಳನೀಕ್ಷಿಸಲು ಬಂದಿರುವರಿಲ್ಲಿ ಆನಂದದಿಂದ
“ಮೂಡಲಿಗೆ ಧತರಟ್ಠ ತೆಂಕಲಿಗೆ ವಿರೂಲ್ಹ
ಪಡವಲಿಗೆ ವಿರೂಪಕ್ಖ ಉತ್ತರಕೆ ಕುಬೇರ
ಮಹಾರಾಜ ಚತುಷ್ಟಯರೀ ಚತುರ್ದೆಶೆಯ ಕಾಯುವರು
ಕಾಂತಿಯನು ಹರಡುವರು ಎಂಟು ದಿಕ್ಕಿಗೆ ಅವರು
ಕಪಿಲವತ್ಥುವನವು ಶೋಭಿಸಿತು ಕಳೆಯಿಂದ.
“ಮಹಾರಾಜ ನಾಲ್ವರಿಗೆ ದಾಸರಿಹರು ಮಾಯಾವಿಗಳು
ವೇಷವನು ತಾಳುವರು ಇಚ್ಛಿಸದತರದಿ ಕುಟೀಂಡುವಿಟೇಂಡು ವಿಟು ಮಾಯಾ
ವುಟ್ಠಟ ಚಂದನ ಕಾಮಸೆಟ್ಠ ಕಿನ್ನಿಘಂಡು
ಪನೋಧ್ವಜಪವನು ಸೂತಮಾತಾಲಿ ಮೇಣ್, ನಿಘಂದು ಜಿನೇಸಭ
ಚಿತ್ತಸೇನಗಂಧರ್ವ ನಳರಾಜ ತಿಂಬರೂ ಪಂಚಸಿಖ ಸೂರಿಯವೆಚ್ಚಸರೆಂಬ
ಹೆಸರಿನ ದೇವದಾಸರುಗಳು ನೆರೆದಿರುವರಿಲ್ಲಿ ರಾಜರೊಂದಿಗೆ ಗಂಧರ್ವ ಸಖರೊಡನೆ
ಭಿಕ್ಷುಗಳನೀಕ್ಷಿಸಲು ಆನಂದದಿಂದ
“ನಾಗರೈತಿಂದಹುರು ನಾಗಲೋಕದಿಂದೊಳು ತಚ್ಛರ
ಕಂಬಳದಿಂ ಬಂದಿಹರು ವೇಸಾಲಿ ಪ್ರಯಾಗದಿಂ
ಬಂಧುಗಳ ಸಹಿತ ಬಂದಿಹರು ಸತ್ವಗಳು ಜೀವಿಗಳು
ಯಮುನಾಧತರಟ್ಠ ನಾಗ ಮಹಾನಾಗೈರಾವಣನು
ಎಲ್ಲರೈತಿಂದಹರು ಸೇರಿರುವರೀ ಕಾಡಿನೊಳಗೆ
“ಉತಮಾಕ್ಷಿಗಳಿರುವ ದ್ವಿಜರಾದ ಪಕ್ಷಿಗಳವು
ಸುಪಕ್ಖಚಿತ್ತರೆಂಬ ಹೆಸರಿನಾ ಪಕ್ಷಿಗಳವು
ನಾಗರಾಜನ ಸುಲಭದಿ ಕೊಲ್ವ ಅತುಳ ಬಲಶಾಲಿಗಳು
ಭರದಿಂದ ಬಂದಿಹರು ವನದೊಳಗೆ ಬಂದಿಹರು ದಿವ್ಯಲೋಕಗಳಿಂದ
ನಾಗರಾಜರಿಗಿಗಿತ್ತನಾ ಬುದ್ಧಸಂಬುದ್ಧ
ಅಭಯವಚನವ ಮೇಣ್ ಭಯನಿಲ್ಲದೆಡೆಯನ್ನು
“ಸುಪರ್ಣನಿಂದಾಗಲಿಲ್ಲವು ಅವಗೆ ನೋವು ಅಪಾಯಗಳು
ಗೆಳೆಯರಾಗಿಯೆ ಬುದ್ಧನೆಡೆಗೈ ತಂದರವರು ವಜ್ರಹಸ್ತಗೆ ಸೋತು
“ಸಮುದ್ರದೊಳು ವಾಸಿಸುವ ಸೋದರರು ವಾಸಸ್ಸವವನುಜರು
ಸುರರು ಆಗಿಹರು ಋದ್ಧಿವಂತರು ಯಶಸ್ವಿಗಳು.
“ಪೃಥ್ವಿ ಜಲದೇವತೆಗಳ್ತೇ ಜವಾಯ ಸಖರೊಡನೆ ಬಂದಿಹರು
ವರುಣವಾರುಣ ಸೋಮಯಸರವರೊಡನೆ ಸೇರಿಹರು
ಕರುಣ ದೇಹವನೆ ಹೊಂದಿರುವ ದೇವತೆಗಳೈತಿಂದಿಹರು
ದೇವತೆಗಳವರು ಯಶಸ್ವಿಗಳು
“ಎರಡೈದು ದೇವರಿವರು ವಿವಿಧಕಾಂತಿಯ ಪಡೆದು
ಋದ್ಧಿವಂತರು ಅತಿಬಲರು ಯಶವಂತ ವರ್ಣವಂತರೆ ಆಗಿ
ನೆರೆದಿಹರೀವನದಲ್ಲಿ ಭಿಕ್ಷುಗಳನೀಕ್ಷಿಸಲು ಆನಂದದಿಂದ
“ವಿಷ್ಣುದೇವ ಬಂದಿಹನು ಯಮದೇವರೊಡನೆ
ಸಹಲಿ ಎಂಬರೈತಿಂದಿಹರು ಅಸಮ ದೇವತೆಗಳೊಡನೆ
“ಚಂದ್ರನುಪಾಸಕರು ಸೂರ್ಯನುಪಾಸಕರು
ನಕ್ಷತ್ರಗಳ ಪೂಜಿಸುವ ಮಂದಲಾಹಕರು ಸೇರಿಪರರಿಲ್ಲಿ
ವಸುಗಳೊಡೆಯನು ಇಹನು ಇಹರು ಸಕ್ಕಪುರಿಂದರರು
ಎರಡಯದು ದೇವರಿವರು ವಿವಿಧ ಕಾಂತಿಯ ಪಡೆದು
ಋದ್ಧಿವಂತರು ಅತಿಬಲರು ಯಶೋವಂತ ವರ್ಣವಂತರೆ ಆಗಿ
ನೆರೆದಿಹರೀವನದಲ್ಲಿ ಭಿಕ್ಷುಗಳನೀಕ್ಷಿಸಲು ಆನಂದದಿಂದ
“ಸಹಭುದೇವರಿಹರಗ್ನಿಶಿಖೆಯಂತೆ
ಅರಟ್ಠಿಕರು ರೋಜ ದೇವತೆಗಳು ಶೋಭಿಪರು ಉಪಾಪುಷ್ಪದೊಲು
“ವರುಣ ದೇವನು ಸಹಧಮ್ಮ ಅಚ್ಚುತ ಅನೇಜಕರು
ಸೂಲಯ್ಯ ದೇವತೆಯು ರುಚಿರ ದೇವತೆಯು
ವಾಸವನೇಸಿ ದೇವತೆಯರೆಲ್ಲ ಸೇರಿಹರು
ಎರಡೈದು ದೇವರಿವರು ವಿವಿಧಕಾಂತಿಯ ಪಡೆದು
ಋದ್ಧಿವಂತರು ಅತಿಬಲರು ಯಶೋವಂತ ವರ್ಣವಂತರೆ ಆಗಿ
ನೆರೆದಿಹರೀವನದಲ್ಲಿ ಭಿಕ್ಷುಗಳನೀಕ್ಷಿಸಲು ಆನಂದದಿಂದ
“ಸಮಾನ ಸಮಾನೋತ್ತಮರು ಮಾನವರು ಮಾನವೋತ್ತಮರು
ಖಿಡ್ಡಾಪನೋದಿಕರು ಮೇಣ್ ದೇವತೆಗಳ ಮನೋಪರೋಸಿಕ ದೇವತೆಗಳ್
ಪರಗಮೇಣ್ ಪರಾಗ ದೇವತೆಗಳ್
ಹರಯ ದೇವತೆಗಳು ಲೋಹಿತವಾನನರು ಬಂದಿಹರು ನೋಡಿ
ಎರಡೈದು ದೇವರಿವರು ವಿವಿದಕಾಯೆಯ ಪಡೆದು
ಋದ್ಧಿವಂತರು ಅತಿಬಲರು ಯಶೋವಂತ ವರ್ಣವಂತರೆ ಆಗಿ
ನೆರೆದಿಹರೀವನದಲ್ಲಿ ಭಿಕ್ಷುಗಳನೀಕ್ಷಿಸಲು ಆನಂದದಿಂದ
“ಅರುಣಸಕ್ಕರು ಮೇಣ್ ಕರಂಭ ವೇಘನರರು
ಪ್ರಮುಖರಾಗಿಹ ಓದಾತಗಹ್ಯರ ಜೊತೆಗೆ ಬಂದಿಹರು
ವಿಚಕ್ಖಣ ಸದಾಮತ್ತರು ಮೇಣ್ ಮಿಸ್ಸಕರು ಹಾರಗಜರು
ಮಳೆರಾಯ; ಪಜ್ಜನ್ನ ದೇವತೆಯು
ಬಂದಿಹರಿಲ್ಲಿ ವನದಲ್ಲಿ ಸೇರಿಹರು
ಎರಡೈದು ದೇವರಿವರು ವಿವಿಧ ಕಾಂತಿಯ ಪಡೆದು
ನೆರಿದಿರ್ಪ ಭಿಕ್ಷುಗಡಣವನು ನೋಡಿರೈತಂದಿಹರು ಮುದದಿ
“ಖೇಮಿಯ ಮೇಣ್ ತುಸಿತ ದೇವತೆಗಳ್
ಸತ್ಕೀರ್ತಿ ಹೊಂದಿಹ ಯಾಮಕಟಕರು ಮತ್ತೆ
ಲಂಬೀತಕ ಲಾಮ ಶ್ರೇಷ್ಠರು ಆಸವರು ಚ್ಯೋತಿದೇವತೆಗಳು
ನಿಮ್ಮಾನರತಿಯರು ಪರನಿಮ್ಮಿತ ದೇವತೆಗಳು
ಬಂದಿಹರು ಇಲ್ಲಿ ವನದಲ್ಲಿ ಸೇರಿಹರು
“ಎರಡೈದು ದೇವರಿವರು ವಿವಿಧ ಕಾಂತಿಯ ಪಡೆದು
ಋದ್ಧಿವಂತರು ಅತಿಬಲರು ಯಶೋವಂತ ವರ್ನವಂತರೆ ಆಗಿ
ನೆರೆದಿರ್ಪ ಭಿಕ್ಷುಗಡಣವನು ನೋಡಲೈತಂದಿಹರು ಮುದದಿ
ವಿವಿಧಕಾಂತಿಯ ಪಡೆದಿರ್ಪರೀ ಅರವತ್ತು
ದೇವತೆಗಳೈತಿಂದಹರು ವಿವಿಧ ಬಳಗದ ಜೊತೆಗೆ
ಜನನ ಮರಣಗಳ ದಾಟಿಹ ಓಘತಿಣ್ಣನ ಗುರುವ
ಆಸವಗಳ ಜಯಿಸಿಹನ ಪಾಪಗಳ ದಹಿಸದನ
ಮೇಘಗಳ ದಾಟಿ ನಕ್ಷತ್ರಗಳಿಗೊಡೆಯನಾಗಿಹನ
ನೋಡೋಣ ಬನ್ನಿರೈ ಎನ್ನುತ್ತಬರುತಿಹರು
“ಸನಂಕುಮಾರ ಬಂದಿಹನು ಸುಬ್ರಹ್ಮ ಪರಮತ್ತ
ತಿಸ್ಸನೈತಂದಿಹನು ಸನಂಕುಮಾರನೊಡನೆ
ಸಾವಿರ ಬ್ರಹ್ಮಲೋಕಗಳ ದೊರೆಯಾಗಿರುವ ಮಹಾಬ್ರಹ್ಮ
ಜನಿಸಿದನು ಇಲ್ಲಿ ಭೀಷ್ಮಕಾಯನು ಅವನು ಯಳೋವಂತನತಿಬಲನು
ಐತಂದಿಹನು ಯಶೋವಂತ ಹತ್ತು ಈಶ್ವರರ ಕೂಡ
ಇಂದ್ರಬ್ರಹ್ಮರ ಸಹಚರವರೆಲ್ಲ ತೇಜಸ್ವಿಗಳು
ಓಡಿಬಂದಿತು ಆಗ ಮಾರನನುಯಾಯಿಗಡಣ
ಕಪ್ಪು ಮನಸಿನ ದುಷ್ಟ ಚಿತ್ತರ ಗಡಣ
ಸುತ್ತವರಿಯಿರಿ ಇವರ ಬಂಧಿಸಿರಿ ಬಿಡಬೇಡಿ
ಎಲ್ಲರನು ಕಟ್ಟುಬಿಡಿ ರಾಗ ಬಂಧನದಿಂದ
ಮಹಾಸೇನೆಯಧಿಪತಿಯು ಈ ಪರಿಯೆ ಹೇಳಿದನು
ಆ ಕಪ್ಪು ಸೈನ್ಯಕೆ ಕರದಿಂದ ಭುವಿಯನ ಪ್ರಳಿಸಿದ;
ನಗಾರಿಯನೆ ಹೊಡೆವಂತೆ
ಬಿರುಗಾಳಿ ಮಳೆಯೊಡನೆ ನಿಡಲಿ ಆರ್ಭಟಿಸುವಂತೆ
ಅದರಾಘೋರ ಕಳೆಕೊಂಡನೆಲ್ಲವನು ಬಿಸಸುಯೃತ್ತ ಓಡಿದನು ಹಂದೆ
“ತಿಳಿದನೆಲ್ಲವ ಗುರುವು ಜ್ಞಾನ ಚಕ್ಷುಗಳಿಂದ
ಹೇಳಿದನು ಶಿಷ್ಯವೃಂದಕೆ ಕೇಳಿ ಸಂತಸದ ಪಡುವವರ್ಗೆ
‘ಭಿಕ್ಷುಗಳೆ, ಬರುವುದತಿ ಬಲದ ಮಾರಸೇನೆ’
ಬುದ್ಧಶಾಸನ ಕೇಳಿ ಎಚ್ಚರದೊಳಿದ್ದರಾ ಭಿಕ್ಷುಗಳು
ರಾಗ ಭಯಗಳ ಸುಟ್ಟವರ ಕಂಡೋಡಿದನು ಅರಿಯು
ಹಿಂತಿರುಗಿ ನೋಡದೆಯೆ ಒಳತೋಟಿಯನೆ ಗೆದ್ದ ಭಯವನ್ನು ವರ್ಜಿಸಿದ
ಬುದ್ಧಶಿಷ್ಯರನುಭವಿಸುದರು ಆನಂದ ಹರ್ಷಗಳ
ಇಲ್ಲಿಗೆ ಮಹಾಸಮಯ ಏಳನೇ ಸುತ್ತ ಮುಗಿಯಿತು.
ಟಿಪ್ಪಣಿಗಳು [2]
English
Việt Ngữ