ಬ್ರಾಹ್ಮಣ ದೂತರ ವಿಷಯ
ಹೀಗೆ ಕೇಳಿದ್ದೇನೆ: ಒಮ್ಮೆ ಭಗವಾನರು ವೇಸಾಲಿಯ ಮಹಾವನದಲ್ಲಿನ ಕೂಟಗಾರ ಸಾಲೆಯಲ್ಲಿ ತಂಗಿದ್ದರು. ಆ ಸಮಯದಲ್ಲಿ ಕೋಸಲ ಮತ್ತು ಮಗಧಗಳಿಂದ ಯಾವುದೋ ಕಾರ್ಯಕ್ಕಾಗಿ ಬಂದಿದ್ದ ಬಹು ಬ್ರಾಹ್ಮಣ ದೂತರು ವೇಸಾಲಿಯಲ್ಲಿ ತಂಗಿದ್ದರು. ಕೋಸಲ ಮತ್ತು ಮಗಧಗಳಿಂದ ಬಂದಿದ್ದ ಆ ಬ್ರಾಹ್ಮಣ ದೂತರು ಶಾಕ್ಯಕುಲವನ್ನು ತೊರೆದಿರುವ ಶಾಕ್ಯ ಪುತ್ರನಾದ ಗೋತಮರು ವೇಸಾಲಿಯ ಮಹಾವನದಲ್ಲಿನ ಕೂಟಗಾರಸಾಲೆಯಲ್ಲಿ ತಂಗಿದ್ದಾರೆ.
ಭಗವಂತರಾದ ಗೋತಮರ ಕೀರ್ತಿಯು ಈ ಪ್ರಕಾರವಾಗಿ ಹರಡಿದೆ- ‘ಅವರು ಭಗವಾನರು, ಅರಹಂತರು, ವಿಜ್ಜಾಚರಣ ಸಂಪನ್ನರು, ಲೋಕ ಗಳನ್ನೆಲ್ಲಾ ತಿಳಿದವರು, ಮನುಷ್ಯರಿಗೆ ಒಳ್ಳೆಯ ದಾರಿಯನ್ನು ತೋರಿಸುವವರಲ್ಲಿ ಶ್ರೇಷ್ಠರು, ದೇವತೆಗಳಲ್ಲಿಯೂ ಮನಷ್ಯರಲ್ಲಿಯೂ ಬಹು ಉತ್ತಮರಾದವರು, ಬುದ್ಧರು, ಭಗವಾನರು, ಈ ಲೋಕವನ್ನು ದೇವತೆಗಳ, ಮಾರರ, ಬ್ರಹ್ಮರ ಸಮಣ ಬ್ರಾಹ್ಮಣರ ಪ್ರಜೆಗಳ ದೇವಮನುಷ್ಯರಿಂದ ಕೂಡಿದ ಲೋಕಗಳನ್ನೂ ಸ್ವಪ್ರಯತ್ನದಿಂದಲೇ ತಿಳಿದು ಪರರಿಗೂ ತಿಳಿಸಬಲ್ಲವರಾಗಿದ್ದಾರೆ. ಆದಿಯಲ್ಲಿ ಮಧ್ಯದಲ್ಲಿ ಅಂತ್ಯದಲ್ಲಿ ಕಲ್ಯಾಣವನ್ನುಂಟು ಮಾಡುವ ಧರ್ಮವನ್ನೂ ಅರ್ಥಪೂರ್ಣವಾಗಿ ಸ್ಪಷ್ಟವಾಗಿ ಬೋಧಿಸಬಲ್ಲವರಾಗಿದ್ದಾರೆ. ಪರಿಪೂರ್ಣವಾದ ಪರಿಶುದ್ಧನಾದ ಬ್ರಹ್ಮಚರ್ಯವನ್ನು ವಿವರಿಸಬಲ್ಲವರಾಗಿದ್ದಾರೆ, ಅವರ ದರ್ಶನ ಮಾಡುವುದು ಸಾಧುವಾದುದು’ ಎಂಬುದನ್ನು ಕೇಳಿದರು.
ಕೋಸಲದಿಂದ ಮತ್ತು ಮಗಧದಿಂದ ಬಂದಿದ್ದ ಆ ಬ್ರಾಹ್ಮಣ ದೂತರು ಮಹಾವನದಲ್ಲಿನ ಕೂಟಗಾರಸಾಲೆಯ ಕಡೆಗೆ ಹೊರಟರು. ಆ ಸಮಯದಲ್ಲಿ ಆಯಷ್ಮಂತನಾದ ನಾಗಿತನು ಭಗವಂತರ ಆಪ್ತ ಸೇವಕನಾಗಿದ್ದನು. ಕೋಸಲ ಮತ್ತು ಮಗಧಗಳಿಂದ ಬಂದಿದ್ದ ಆ ಬ್ರಾಹ್ಮಣ ದೂತರು ಆಯಷ್ಮಂತನಾದ ನಾಗಿತನ ಹತ್ತಿರಕ್ಕೆ ಬಂದರು. ಸಮೀಪಿಸಿದ ಮೇಲೆ ಅವನ್ನು ಕುರಿತು “ನಾಗಿತ, ಭಗವಂತ ಗೋತಮರು ಎಲ್ಲಿದ್ದಾರೆ? ನಾವು ಅವರ ದರ್ಶನಕ್ಕಾಗಿ ಬಂದಿದ್ದೇವೆ” ಎಂದು ಕೇಳಿದರು.
“ಸ್ನೇಹಿತರೆ, ಭಗವಂತರ ದರ್ಶನಕ್ಕೆ ಇದು ಅಕಾಲ. ಈಗ ಅವರು ಏಕಾಂತದಲ್ಲಿದ್ದಾರೆ.”
ಆಗ ಕೋಸಲ ಮಗಧಗಳಿಂದ ಬಂದಿದ್ದ ಬ್ರಾಹ್ಮಣದೂತರು ಅಲ್ಲಿಯೇ ಒಂದು ಕಡೆ ಕುಳಿತುಕೊಂಡರು. ‘ಭಗವಂತ ಗೋತಮರನ್ನು ನೋಡಿಯೇ ಹೋಗುತ್ತೇವೆ’ ಎಂದುಕೊಂಡರು.
ಲಿಚ್ಛವಿ ಓಟ್ಠದ್ಧನ ವಿಷಯ
ಲಿಚ್ಛವಿ ಮನೆತನಕ್ಕೆ ಸೇರಿದ ಓಟ್ಠದ್ಧ ಎಂಬುವನು ಆ ಮನೆತನಕ್ಕೆ ಸೇರಿದ ಅನೇಕ ಜನರೊಂದಿಗೆ ಮಹಾವನದಲ್ಲಿನ ಕೂಟಗಾರ ಸಾಲೆಗೇ ನಾಗಿತನನ್ನು ಕಾಣಲು ಬಂದನು. ಅವನಲ್ಲಿಗೆ ಹೋಗಿ ಅವನಿಗೆ ಅಭಿವಂದಿಸಿ ಒಂದು ಕಡೆ ನಿಂತುಕೊಂಡನು. ಆಮೇಲೆ ಆ ಒಟ್ಠದ್ಧನು ಆಯುಷ್ಮಂತ ನಾಗಿತನನ್ನು ಕುರಿತು “ಭಂತೆ ನಾಗಿತ, ಅರಹಂತರೂ ಸಮ್ಮಾ ಸಂಬುದ್ಧರೂ ಆದ ಭಗವಾನರು ಈಗ ಎಲ್ಲಿದ್ದಾರೆ? ಅರಹಂತರೂ, ಸಮ್ಮಾ ಸಂಬುದ್ಧರೂ ಆದ ಭಗವಾನರ ದರ್ಶನಕ್ಕಾಗಿ ನಾವು ಬಂದಿದ್ದೇವೆ ” ಎಂದು ಹೇಳಿದನು. “ಮಹಾಲಿ11 ಭಗವಾನರ ದರ್ಶನಕ್ಕೆ ಇದು ಅಕಾಲ ಅವರು ಏಕಾಂತದಲ್ಲಿದ್ದಾರೆ.” ಒಟ್ಠದ್ಧ ಲಿಚ್ಛವಿಯು ಅಲ್ಲಿಯೇ ಒಂದುಕಡೆ ಕುಳಿತುಕೊಂಡನು. ‘ಅರಹಂತರೂ ಸಮ್ಮಾ ಸಂಬುದ್ಧರೂ ಅದ ಭಗವಾನರನ್ನು ನೋಡಿಕೊಂಡೇ ಹೋಗುತ್ತೇನೆ’ ಎಂದುಕೊಂಡನು.
ಆಗ ಸಮಣೋದ್ದೇಶನಾಗಿದ್ದ (ಮುಂದೆ ಸಮಣನಾಗಬೇಕೆಂದು ಉದ್ದೇಶವಿರುವವನು) ಸೀಹನು ನಾಗಿತನ ಹತ್ತಿರಕ್ಕೆ ಬಂದನು. ಆಯುಷ್ಮಂತನಾದ ನಾಗಿತನಿಗೆ ಅಭಿವಂದಿಸಿ ಒಂದುಕಡೆ ಕುಳಿತುಕೊಂಡನು. ಅಮೇಲೆ ಸಮಣುದ್ದೇಶ ಸೀಹನು ಆಯಷ್ಮಂತ ನಾಗಿತನನ್ನು ಕುರಿತು “ಭಂತೆ, ಕಸ್ಸಪ12 ಕೋಸಲ ಮತ್ತು ಮಗಧಗಳಿಂದ ಬಹುಜನ ಬ್ರಾಹ್ಮಣದೂತರು ಭಗವಾನರ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಒಟ್ಠದ್ಧ ಲಿಚ್ಛವಿಯೂ ಅನೇಕ ಲಿಚ್ಛವಿ ಬಂಧುಗಳೊಂದಿಗೆ ಭಗವಂತನ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದಾನೆ. ಭಂತೆ, ಕಸ್ಸಪ, ಈ ಜನಕ್ಕೆಲ್ಲಾ ಭಗವಾನರ ದರ್ಶನವನ್ನೊದಗಿಸುವುದು ಸಾಧುವಾದು” ಎಂದನು.
“ಸೀಹಿ, ನೀನೇ ಭಗವಾನರಿಗೆ ಹೇಳು. ”
“ಆಗಬಹುದು, ಭಂತೆ, ಎಂದು ಉತ್ತರವಿತ್ತು ಆ ಸಮಣುದ್ದೇಶ ಸೀಹಿಯು ಆಯುಷ್ಮಂತ ನಾಗಿತನು ಹೇಳಿದಂತೆ ಭಗವಾನರಲ್ಲಿಗೆ ಹೋದನು. ಭಗವಾನರಿಗೆ ಅಭಿವಂದಿಸಿ ಒಂದು ಕಡೆ ನಿಂತುಕೊಂಡನು. ಆಮೇಲೆ ಆ ಸಮಣುದ್ದೇಶ ಸೀಹಿಯು ಭಗವಾನರನ್ನು ಕುರಿತು “ಭಂತೆ ಭಗವಾನರ ದರ್ಶನಕ್ಕಾಗಿ ಕೋಸಲ ಮತ್ತು ಮಗಧಗಳಿಂದ ಬಹುಜನ ಬ್ರಾಹ್ಮಣದೂತರು ಇಲ್ಲಿಗೆ ಬಂದಿದ್ದಾರೆ. ಒಟ್ಟದ್ಧ ಲಿಚ್ಛವಿಯೂ ಅನೇಕ ಲಿಚ್ಛವಿ ಬಂಧುಗಳೊಂದಿಗೆ ಭಗವಾನರನ್ನು ನೋಡಲು ಇಲ್ಲಿಗೆ ಬಂದಿದ್ದಾನೆ. ಈ ಜನಕ್ಕೆಲ್ಲಾ ಭಗವಾನರ ದರ್ಶನಕೊಡುವುದು ಸಾಧುವಾದುದು ಭಂತೆ” ಎಂದು ಹೇಳಿದನು.
“ಆಗಲಿ, ಸೀಹ, ವಿಹಾರದ ಮುಂದಿರುವ ನೆರಳಿನಲ್ಲಿ ಆಸನವನ್ನು ಸಿದ್ದಪಡಿಸು.”
“ಹಾಗೆಯೇ ಆಗಲಿ, ಭಂತೆ” ಎಂದ ಸಮಣುದ್ದೇಶ ಸೀಹನು ಭಗವಾನರು ಹೇಳಿದಂತೆ ವಿಹಾರದ ಮುಂದಿದ್ದ ನೆರಳಿನಲ್ಲಿ ಆಸನವನ್ನು ಸಿದ್ದಪಡಿಸಿದನು.
ಆಗ ಭಗವಾನರು, ವಿಹಾರವನ್ನು ಬಿಟ್ಟು ಮುಂದಿದ್ದ ನೆರಳಿನಲ್ಲಿ ಸಿದ್ಧಪಡಿಸಿದ್ದ ಆಸನದಲ್ಲಿ ಕುಳಿತರು. ಕೋಸಲ ಮತ್ತು ಮಗಧಗಳಿಂದ ಬ್ರಾಹ್ಮಣದೂತರು ಭಗವಾನರ ಸಮೀಪಕ್ಕೆ ಬಂದರು; ಅವರಿಗೆ ಗೌರವ ತೋರಿಸಿ ಕುಶಲ ಪ್ರಶ್ನೆ ಮಾಡಿ ಒಂದು ಕಡೆ ಕುಳಿತುಕೊಂಡರು. ಒಟ್ಠಿದ್ಧ ಲಿಚ್ಛವಿಯೂ ಅನೇಕ ಲಿಚ್ಛವಿಬಂಧುಗಳೊಂದಿಗೆ ಭಗವಾನರಲ್ಲಿಗೆ ಬಂದನು. ಭಗವಾನರಿಗೆ ಅಭಿವಂದಿಸಿ ಒಂದು ಕಡೆ ಕುಳಿತುಕೊಂಡನು.
ಒಂದು ಕಡೆ ಕುಳಿತಕೊಂಡ ಮೇಲೆ ಓಟ್ಠದ್ಧ ಲಿಚ್ಛವಿಯು ಭಗವಾನರಿಗೆ ಹೀಗೆ ಹೇಳಿದನು- “ಭಂತೆ, ಕೆಲವು ದಿವಸಗಳ ಹಿಂದೆ ಲಿಚ್ಛವಿ ಕುಲಕ್ಕೆ ಸೇರಿದ ಸುನಕ್ಕತ್ತನು ನನ್ನಲ್ಲಿಗೆ ಬಂದನು. ಆಮೇಲೆ ನನ್ನನ್ನು ಕುರಿತು ‘ಮಹಾಲಿ, ಭಗವಾನರಲ್ಲಿಗೆ ನಾನು ಹೋಗಿ ಮೂರು ವರ್ಷಗಳಾಗಿಲ್ಲ’ ಆದರೂ ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿ ಮಾಡುವ ರಂಜನೀಯವಾದ ದಿವ್ಯರೂಪಗಳನ್ನೂ ನೋಡಬಲ್ಲವನಾಗಿದ್ದೇನೆ. ಪ್ರಿಯವನ್ನುಂಟು ಮಾಡುವ ಇಷ್ಟ ಪೂರ್ತಿ ಮಾಡುವ ರಂಜನೀಯವಾದ ದಿವ್ಯ ಶಬ್ಧಗಳನ್ನು ಮಾತ್ರ ಕೇಳ ಲಾಗುತ್ತಿಲ್ಲ.’ ಎಂದನು. ಭಂತೆ, ಲಿಚ್ಛವಿಕುಲದ ಸುನಕ್ಕತ್ತನು ಕೇಳಲಾಗದ ಆದರ ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿ ಮಾಡುವ ಮತ್ತು ರಂಜನೀಯ ವಾದ ದಿವ್ಯ ಶಬ್ಧಗಳು ಇರುವುವೋ ಅಥವಾ ಇಲ್ಲವೇ ಇಲ್ಲವೋ?”
ಸ್ವಾಭಾವಿಕವಾಗಿ ಪಡೆದಂತಹ ಮನಸ್ಸಿನ ಏಕಾಗ್ರತೆ
“ಮಹಾಲಿ, ಅವು ಇವೆ. ಲಿಚ್ಛವಿಕುಲದ ಸುನಕ್ಕತ್ತನು ಕೇಳಲಾಗದ ಆದರೆ ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳು ಇಲ್ಲದಿಲ್ಲ.”
“ಭಂತೆ, ಪ್ರಿಯವನ್ನುಂಟು ಮಾಡುವ, ಇಷ್ಟಪೂರ್ತಿಗೊಳಿಸುವ ಮತ್ತು ರಂಜನೀಯವಾದ ಶಬ್ದಗಳು ಇದ್ದರೂ ಲಿಚ್ಛವಿಕುಲದ ಸುನಕ್ಕತ್ತನು ಕೇಳದಿರಲು ಕಾರಣವೇನು?”
“ಮಹಾಲಿ, ಭಿಕ್ಷುವೊಬ್ಬನು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿ ಗೊಳಿಸುವ ಮತ್ತು ರಂಜನೀಯವಾದ ದಿವ್ಯ ಶಬ್ದಗಳನ್ನು ಕೇಳುವುದಕ್ಕೆ ಸಾಧ್ಯವಿಲ್ಲದ ಆದರೆ ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ರೂಪಗಳನ್ನು ಪೂರ್ವದಿಕ್ಕಿನಿಂದ ನೋಡಲು ಮಾತ್ರ ಸಾಧ್ಯವಾದಂಥ ಸಮಾಧಿಯನ್ನು ಪಡೆಯುತ್ತಾನೆನ್ನು. ಅವನು ಪ್ರಿಯವನ್ನು ಉಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ರೂಪ ಗಳನ್ನು ಪೂರ್ವದಿಕ್ಕಿನಿಂದ ನೋಡಬಹುದಾದ ಸಮಾಧಿಯಲ್ಲಿದ್ದು ಅವುಗಳನ್ನು ನೋಡುತ್ತಾನೆ. ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯ ವಾದ ದಿವ್ಯ ಶಬ್ಧಗಳನ್ನು ಕೇಳಲಾರ. ಇದಕ್ಕೆ ಕಾರಣವೇನು? ಮಹಾಲಿ, ಆ ಭಿಕ್ಷುವು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯ ವಾದ ದಿವ್ಯಶಬ್ಧಗಳನ್ನು ಕೇಳಲಾಗದ ಆದರೆ ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯರೂಪಗಳನ್ನು ಪೂರ್ವದಿಕ್ಕಿ ನಿಂದ ನೋಡಲು ಮಾತ್ರ ಸಾಧ್ಯವಾದಂಥ ಸಮಾಧಿಯಲ್ಲಿರುವುದೇ ಕಾರಣ.
“ಮಹಾಲಿ, ಭಿಕ್ಷುವೊಬ್ಬನು ದಕ್ಷಿಣ ದಿಕ್ಕಿನಿಂದ.... ಪಶ್ಚಿಮ ದಿಕ್ಕಿನಿಂದ... ಉತ್ತರದಿಕ್ಕಿನಿಂದ... ಊರ್ಧ್ವಅಧೋ ದಿಕ್ಕುಗಳಿಂದ ಅಥವಾ ಉದ್ದಗಲ ದೆಸೆಯಿಂದ ನೋಡಬಲ್ಲ ಸಮಾಧಿಯನ್ನು ಪಡೆಯುತ್ತಾನೆನ್ನು. ಅವನು ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ರೂಪಗಳನ್ನು ಊರ್ಧ್ವ ಅಧೋ (ಮೇಲೆ-ಕೆಳಗೆ) ದಿಕ್ಕುಗಳಿಂದಲೂ ಉದ್ದಗಲ ದೆಸೆಯಿಂದಲೂ ನೋಡಬಹುದಾದ ಸಮಾಧಿಯಲ್ಲಿದ್ದು ಅವುಗಳನ್ನು ನೋಡುತ್ತಾನೆ, ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ಧಗಳನ್ನು ಕೇಳಲಾರ. ಇದಕ್ಕೆ ಕಾರಣವೇನು? ಮಹಾಲಿ, ಆ ಭಿಕ್ಷುವು ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ಧಗಳನ್ನು ಕೇಳಲಾಗದ ಆದರೆ ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯರೂಪಗಳನ್ನು ಊರ್ಧ್ವ ಅಧೋ ದಿಕ್ಕುಗಳಿಂದಲೂ ತಿರ್ಯಕ್ ದೆಸೆಯಿಂದಲೂ ನೋಡಲು ಮಾತ್ರ ಸಾಮರ್ಥ್ಯವಿರುವ ಸಮಾಧಿಯಲ್ಲಿರುವುದೇ ಕಾರಣ.
“ಮಹಾಲಿ, ಭಿಕ್ಷುವೊಬ್ಬನು ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯರೂಪಗಳನ್ನು ನೋಡಲು ಸಾಧ್ಯವಾಗದ ಆದರೆ ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಶಶಬ್ದಗಳನ್ನು ಪೂರ್ವದಿಕ್ಕಿನಿಂದ ಕೇಳಲು ಮಾತ್ರ ಸಾಮರ್ಥ್ಯವಿರುವ ಸಮಾಧಿಯನ್ನು ಪಡೆಯುತ್ತಾನೆನ್ನು. ಅವನು ಪ್ರಿಯವನ್ನು ಉಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳನ್ನು ಪೂರ್ವದಿಕ್ಕಿನಿಂದ ಕೇಳಬಲ್ಲ ಸಮಾಧಿಯಲ್ಲಿದ್ದು ಅವುಗಳನ್ನು ಕೇಳುತ್ತಾನೆ. ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯ ವಾದ ದಿವ್ಯರೂಪಗಳನ್ನು ನೋಡಲಾರ, ಇದಕ್ಕೆ ಕಾರಣವೇನು? ಮಹಾಲಿ, ಆ ಭಿಕ್ಷುವು ಪ್ರಿಯವನ್ನುಂಟು ಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯ ವಾದ ದಿವ್ಯರೂಪಗಳನ್ನು ನೋಡಲಾಗದ ಆದರೆ ಪ್ರಿಯವನ್ನುಂಟು ಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯಶಬ್ದಗಳನ್ನು ಪೂರ್ವ ದಿಕ್ಕಿ ನಿಂದ ಕೇಳಲು ಮಾತ್ರ ಸಾಧ್ಯವಾದಂಥ ಸಮಾಧಿಯಲ್ಲಿರುವುದೇ ಕಾರಣ.
“ಮಹಾಲಿ, ಭಿಕ್ಷುವೊಬ್ಬನು... ದಕ್ಷಿಣದಿಕ್ಕಿನಿಂದ... ಪಶ್ಚಿಮ ದಿಕ್ಕ್ಕಿನಿಂದ... ಉತ್ತರ ದಿಕ್ಕಿನಿಂದ... ಊರ್ಧ್ವ ಅಧೋ ದಿಕ್ಕುಗಳಿಂದ ಅಥವಾ ತಿರ್ಯಕ್ ದೆಸೆಯಿಂದ ದಿವ್ಯ ಶಬ್ದಗಳನ್ನು ಕೇಳಬಲ್ಲ ಸಮಾಧಿಯನ್ನು ಪಡೆಯುತ್ತಾನೆನ್ನು. ಅವನು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳನ್ನು ಊರ್ಧ್ವದಿಕ್ಕೂಗಳಿಂದಲೂ ತಿರ್ಯಕ್ ದೆಸೆಯಿಂದಲೂ ಕೇಳಬಹುದಾದ ಸಮಾಧಿಯಲ್ಲಿದ್ದು ಅವುಗಳನ್ನು ಕೇಳುತ್ತಾನೆ ಇದಕ್ಕೆ ಕಾರಣವೇನು? ಆ ಭಿಕ್ಷುವು ಪ್ರಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ರೂಪಗಳನ್ನು ನೋಡಲಾಗದ ಆದರೆ ಪ್ರಿಯವನ್ನುಂಟು ಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ಶಬ್ದಗಳನ್ನು ಊರ್ಧ್ವ ಅಧೋದಿಕ್ಕುಗಳಿಂದಲೂ ತಿರ್ಯಕ್ ದೆಸೆಯಿಂದಲೂ ಕೇಳಬಹುದಾದ ಸಮಾಧಿ ಯಲ್ಲಿರುದೇ ಕಾರಣ.
“ಮಹಾಲಿ, ಭಿಕ್ಷುವೊಬ್ಬನು ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿ ಗೊಳಿಸುವ ರಂಜನೀಯವಾದ ದಿವ್ಯ ರೂಪಗಳನ್ನು ಪೂರ್ವ ದಿಕ್ಕಿನಿಂದ ನೋಡಬಲ್ಲ ಮತ್ತು ಪ್ರಿಯವನ್ನುಂಟುಮಾಡುವ ಇಷ್ಟಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳನ್ನು ಪೂರ್ವದಿಕ್ಕಿನಿಂದ ಕೇಳಬಲ್ಲ ಎರಡೂ ಬಗೆಯ ಸಾಮಾರ್ಥ್ಯಗಳಿರುವ ಸಮಾಧಿಯನ್ನು ಪಡೆಯುತ್ತಾನೆನ್ನು. ಅವನು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ರೂಪಗಳನ್ನು ಪೂರ್ವ ದಿಕ್ಕಿನಿಂದ ನೋಡಬಲ್ಲ ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳನ್ನು ಪೂರ್ವದಿಕ್ಕಿನಿಂದ ಕೇಳಬಲ್ಲ ಎರಡೂ ಬಗೆಯ ಸಾಮರ್ಥಯಗಳಿರುವ ಸಮಾಧಿಯಲ್ಲಿದ್ದು ಅವುಗಳನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ. ಇದಕ್ಕೇನು ಕಾರಣ? ಮಹಾಲಿ, ಆ ಭಿಕ್ಷುವು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ರೂಪಗಳನ್ನು ಪೂರ್ವ ದಿಕ್ಕಿನಿಂದ ನೋಡಬಲ್ಲ ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ದಗಳನ್ನು ಪೂರ್ವ ದಿಕ್ಕಿನಿಂದ ಕೇಳಬಲ್ಲ ಎರಡೂ ಬಗೆಯ ಸಾಮಾರ್ಥ್ಯ ಗಳಿರುವ ಸಮಾಧಿಯಲ್ಲಿರುವುದೇ ಕಾರಣ.
“ಮಾಹಲಿ, ಭಿಕ್ಷುವೊಬನು... ದಕ್ಷಿಣ ದಿಕ್ಕಿನಿಂದ... ಪಶ್ಚಿಮ ದಿಕ್ಕಿನಿಂದ... ಉತ್ತರ ದಿಕ್ಕಿನಿಂದ ಊರ್ಧ್ವ ಅಧೋ ದಿಕ್ಕುಗಳಿಂದ ಅಥವಾ ತಿರ್ಯಕ್ ದೆಸೆಯಿಂದ ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ರೂಪಗಳನ್ನು ದಿವ್ಯ ಶಬ್ದಗಳನ್ನು ನೋಡಲು ಮತ್ತು ಕೇಳಲು ಎರಡೂ ಬಗೆಯ ಸಾಮಾರ್ಥ್ಯಗಳಿರುವ ಸಮಾಧಿಯಲ್ಲಿದ್ದು ಅವುಗಳನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ. ಇದಕ್ಕೆ ಕಾರಣವೇನು? ಮಹಾಲಿ, ಆ ಭಿಕ್ಷುವು ಪ್ರಿಯವನ್ನು ಉಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ರೂಪಗಳನ್ನು ಊರ್ಧ್ವ ಮತ್ತು ಅಧೋ ದಿಕ್ಕುಗಳಿಂದ ಅಥವ ತಿರ್ಯಕ್ ದೆಸೆಯಿಂದ ನೋಡಬಲ್ಲ ಮತ್ತು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ಶಬ್ಧಗಳನ್ನು ಊರ್ಧ್ವ ಅಧೋ ದಿಕ್ಕುಗಳಿಂದ ಅಥವಾ ತಿರ್ಯಕ್ ದೆಸೆಯಿಂದಲೂ ಕೇಳಬಲ್ಲ ಎರಡೂ ಬಗೆಯ ಸಾಮರ್ಥ್ಯಗಳಿರುವ ಸಮಾಧಿಯಲ್ಲಿರುವುದೇ ಕಾರಣ. ಮಹಾಲಿ, ಲಿಚ್ಛವಿ ವಂಶದ ಸುನಕ್ಖತ್ತನು ಪ್ರಿಯವನ್ನುಂಟುಮಾಡುವ ಇಷ್ಟ ಪೂರ್ತಿಗೊಳಿಸುವ ರಂಜನೀಯವಾದ ದಿವ್ಯ ಶಬ್ಧಗಳನ್ನು ಕೇಳುವುದಕ್ಕೆ ಸಾಧ್ಯವಾಗದಿರಲು ಇದೇ ಕಾರಣವಾಗಿದೆ.”
“ಹಾಗಾದರೆ, ಭಂತೆ, ಭಗವಾನರಲ್ಲಿಗೆ ಹೋಗಿ ಬ್ರಹ್ಮಚರ್ಯವನ್ನು ಪಾಲಿಸುವುದು ಇಂಥ ಸಮಾಧಿಯನ್ನು ಪಡೆಯುವ ಕಾರಣದಿಂದಲೇನು?’
“ಅಲ್ಲ, ಮಹಾಲಿ ನನ್ನಲ್ಲಿಗೆ ಭಿಕ್ಷುಗಳು ಬಂದು ಬ್ರಹ್ಮಚರ್ಯವನ್ನು ಪಾಲಿಸುವುದು ಇಂಥ ಸಮಾಧಿಯನ್ನು ಪಡೆಯುವ ಕಾರಣದಿಂದಲ್ಲ. ಇದಕ್ಕಿಂತ ಉತ್ತಮವಾದ ಮತ್ತು ಶ್ರೇಷ್ಟವಾದ ಬೇರೊಂದು ಧರ್ಮವಿದೆ. ಅದನ್ನು ಸಾಧಿಸುವುದಕ್ಕೋಸ್ಕರ ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ.”
ನಾಲ್ಕು ಶ್ರೇಷ್ಠ ಫಲಗಳು
“ಭಂತೆ, ಯಾವ ಉತ್ತಮವಾದ ಮತ್ತು ಶ್ರೇಷ್ಠವಾದ ಧರ್ಮವನ್ನು ಪಡೆಯಲು ಭಗವಾನರ ಹತ್ತಿರಕ್ಕೆ ಭಿಕ್ಷುಗಳು ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ?”
“ಮಹಾಲಿ, ಭಿಕ್ಷುವೊಬ್ಬನು ಮೂರು ಸಂಕೋಲೆಗಳನ್ನು ಕತ್ತರಿಸಿ ಕೊಂಡು ಸೋತಪನ್ನನಾಗುತ್ತಾನೆ; ಅದರಿಂದ ಮತ್ತೊಮ್ಮೆ ಹೀನಸ್ಥಿತಿಗೆ ಇಳಿಯದವನೂ ಸಂಬೋಧಿಪರಾಯಣ ಆಗುತ್ತಾನೆ. ಮಹಾಲಿ, ಈ ಉತ್ತಮವಾದ ಮತ್ತು ಶ್ರೇಷ್ಠವಾದ ಧರ್ಮವನ್ನು ಸಾಧಿಸಲೋಸುಗ ಭಿಕ್ಷುವೊಬ್ಬನು ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ.
“ಮತ್ತೆ ಮಹಾಲಿ, ಭಿಕ್ಷುವೊಬ್ಬನು ಮೂರು ಸಂಕೋಲೆಗಳನ್ನು ಕತ್ತರಿಸಿದ ಮೇಲೆ, ರಾಗ, ದೋಸ, ಮೋಹಗಳ ಸಂಕೋಲೆಗಳನ್ನು ಕ್ಷೀಣಿಸಿಕೊಂಡು ಸಕದಾಗಾಮಿಯಾಗುತ್ತಾನೆ. ಈ ಲೋಕಕ್ಕೆ ಬಂದು ದುಃಖವನ್ನು ಸಂಪೂರ್ಣವಾಗಿ ನಾಶ ಮಾಡಿಕೊಳ್ಳುತ್ತಾನೆ. ಮಹಾಲಿ, ಉತ್ತಮವಾದ ಮತ್ತು ಶ್ರೇಷ್ಠವಾದ ಈ ಧರ್ಮವನ್ನು ಸಾಧಿಸಲು ಭಿಕ್ಷುವೊಬ್ಬನು ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ.
“ಮತ್ತೆ ಮಹಾಲಿ, ಐದು ಸಂಕೋಲೆಗಳನ್ನು ಕತ್ತರಿಸಿಕೊಂಡು ಅನಾಗಾಮಿಯಾಗುತ್ತಾನೆ. ಈ ಲೋಕಕ್ಕೆ ಇನ್ನೊಮ್ಮೆ ಬರದವನಾಗುತ್ತಾನೆ. ಮಹಾಲಿ, ಭಿಕ್ಷುವೊಬ್ಬನು ಉತ್ತಮವಾದ ಮತ್ತು ಶ್ರೇಷ್ಠವಾದ ಈ ಧರ್ಮವನ್ನು ಸಾಧಿಸಲು ಭಿಕ್ಷುವೊಬ್ಬನು ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ.
“ಮತ್ತೆ, ಮಹಾಲಿ, ಭಿಕ್ಷುವೊಬ್ಬನು ಆಸವಗಳನ್ನು ನಾಶಮಾಡಿಕೊಂಡು ಅನಾಸವನಾಗಿ ಚಿತ್ತವಿಮುಕ್ತಿಯನ್ನು ಹೊಂದಿ ಪಞ್ಞಾವಿಮುಕ್ತಿಯನ್ನು ಹೊಂದಿ ತಾನೇ ಧರ್ಮವನ್ನು ಅರಿತವನಾಗಿ ಲೋಕದ ಕಾಮಗಳನ್ನು ಮೀರಬಲ್ಲ ಧರ್ಮದೃಷ್ಟಿಯನ್ನು ಸ್ವಪ್ರಯತ್ನದಿಂದ ತಿಳಿದವನಾಗಿ ಆ ಸ್ಥಿತಿಯಲ್ಲಿ ವಿಹರಿಸುವವನಾಗಿರುತ್ತಾನೆ. ಮಹಾಲಿ, ಉತ್ತಮವಾದ ಮತ್ತು ಶ್ರೇಷ್ಠವಾದ ಈ ಧರ್ಮವನ್ನು ಪಡೆಯಲು ಭಿಕ್ಷುವೊಬ್ಬನು ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ. ಮಹಾಲಿ, ಉತ್ತಮವಾದ ಮತ್ತು ಶ್ರೇಷ್ಠವಾದ ಈ ಧರ್ಮಗಳನ್ನು ಸಾಧಿಸಲು ಭಿಕ್ಷುಗಳು ನನ್ನಲ್ಲಿಗೆ ಬಂದು ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ.
ಆರ್ಯ ಅಷ್ಠಾಂಗ ಮಾರ್ಗಗಳು
“ಆದರೆ, ಭಂತೆ, ಇಂಥ ಧರ್ಮವನ್ನು ಸಾಧಿಸಲು ಮಾರ್ಗವಿದೆಯೇ? ಮಾರ್ಗದಲ್ಲಿ ಹೋಗುವ ರೀತಿ ಇದೆಯೇ?”
“ಮಹಾಲಿ, ಇಂಥ ಧರ್ಮವನ್ನು ಸಾಧಿಸಲು ಮಾರ್ಗವೂ ಇದೆ; ಇದರಲ್ಲಿ ಹೋಗಬೇಕಾದ ಕ್ರಮವೂ ಇದೆ.”
“ಭಂತೆ, ಈ ಧರ್ಮವನ್ನು ಸಾಧಿಸಲು ಇರುವ ಮಾರ್ಗಯಾವುದು? ಹೋಗಬೇಕಾದ ಕ್ರಮ ಯಾವುದು?”
“ಇರುವುದು ಅಟ್ಠಂಗ ಮಗ್ಗವೊಂದೇ. ಅದು ಯಾವುದೆಂದರೆ- ಸಮ್ಮಾದಿಟ್ಠಿ, ಸಮ್ಮಸಂಕಪ್ಪ, ಸಮ್ಮಾವಾಚಾ, ಸಮ್ಮಾಕಮ್ಮಾಂತ, ಸಮ್ಮಾಜೀವ, ಸಮ್ಮಾವಾಯಾಮ, ಸಮ್ಮಾಸತಿ ಮತ್ತು ಸಮ್ಮಾಸಮಾಧಿ (ಸರಿಯಾದ ತಿಳುವಳಿಕೆ, ಸರಿಯಾದ ಆಲೋಚನೆ, ಸರಿಯಾದ ಮಾತು, ಸರಿಯಾದ ಕೆಲಸ, ಸರಿಯಾದ ಜೀವನೋಪಾಯ, ಸರಿಯಾದ ಪ್ರಯತ್ನ, ಸರಿಯಾದ ಸ್ಮೃತಿ ಮತ್ತು ಸರಿಯಾದ ಮನಸ್ಸಿನ ಏಕಾಗ್ರತೆ). ಮಹಾಲಿ, ಧರ್ಮವನ್ನು ಸಾಧಿಸಲು ಇರುವ ಮಾರ್ಗವೂ ಕ್ರಮವೂ ಇದು.
ಇಬ್ಬರು ಪರಿವ್ರಾಜಕರ ವಿಷಯ
“ಮಹಾಲಿ, ಒಂದು ದಿನ ಕೋಸಂಬಿಯ ಘೋಸಿತರಾಮದಲ್ಲಿ ತಂಗಿದ್ದೆ. ಆಗ ಪರಿಬ್ಬಾಜಕ ಮುಂಡಿಯ ಮತ್ತು ದಾರುಪತ್ತಿಕನ ಆಪ್ತ ಶಿಷ್ಯ, ಜಾಲಿಯ ಎಂಬ ಇಬ್ಬರು ಪಬ್ಬಜಿತರು ನನ್ನ ಬಳಿಗೆ ಬಂದರು, ಬಂದು ನನಗೆ ಗೌರವ ತೋರಿಸಿ, ಕುಶಲವನ್ನು ಹೇಳಿ, ವಿನಯ ಪೂರತಾಗಿ ಒಂದು ಕಡೆ ನಿಂತುಕೊಂಡರು. ಹೀಗೆ ನಿಂತುಕೊಂಡಮೇಲೆ ಆ ಇಬ್ಬರೂ ಪಬ್ಬಜಿತರು ನನ್ನನ್ನು ಹೀಗೆ ಕೇಳಿದರು- ‘ಗೋತಮರೆ, ಜೀವವೂ ಶರೀರವೂ ಒಂದೇಯೇ ಅಥವಾ ಜೀವವೂ ಶರೀರವೂ ಬೇರೆ ಬೇರೆಯೇ?”
“ನಾನು ಹೇಳುವುದನ್ನು ಮನಸ್ಸ್ಸಿಟ್ಟು ಕೇಳಿ.” ಆ ಇಬ್ಬರು ಪಬ್ಬಜಿತರೂ ‘ಆಗಬಹುದು’ ಎಂದು ಹೇಳಿದರು. ಆಗ ಹೀಗೆ ಹೇಳಿದೆ: ”ಈ ರೀತಿಯಲ್ಲಿ ಅರಹಂತನೂ ಸಮ್ಮಾಸಂಬುದ್ಧನೂ ಆದ ತಥಾಗತನು ಈ ಲೋಕದಲ್ಲಿ ಉದಯಿಸುತ್ತಾನೆ (ಸಾಮಞ್ಞ ಫಲ) ಸುತ್ತದಲ್ಲಿರುವಂತೆಯೇ ವಿಸ್ತರಿಸಬೇಕು) ಹೀಗೆ, ಗೆಳೆಯ, ಭಿಕ್ಷುವು ಶೀಲಸಂಪನ್ನನಾಗುತ್ತಾನೆ... ಚತುರ್ಥ ಧ್ಯಾನವನ್ನು ಪ್ರವೇಶಿಸಿ ಅಲ್ಲಿ ವಿಹರಿಸುತ್ತಿರುತ್ತಾನೆ. (ಪ್ಯಾರಾ 41 ರಿಂದ 83 ರವರೆಗೆ). ಗೆಳೆಯ, ಭಿಕ್ಷುವು ಹೀಗೆ ತಿಳಿದು ಈ ರೀತಿಯಲ್ಲಿ ನೋಡುವವನಾಗಿರುವಾಗ ಜೀವವೂ ಶರೀರವೂ ಒಂದೆಯೇ ಅಥವಾ ಜೀವವೂ ಬೇರೆ ಶರೀರವೂ ಬೇರೆಯೆ- ಎಂಬ ಪ್ರಶ್ನೆಯನ್ನು ಪರಿಶೀಲಿಸಬಲ್ಲವನಾಗಿರುತ್ತಾನೆಯೇ?’ ‘ಅಹುದು, ಇದನ್ನು ತಿಳಿದ ಹೀಗೆ ನೊಡಬಲ್ಲ ಭಿಕ್ಷುವು ಜೀವವೂ ಶರೀರವೂ ಒಂದೆಯೇ, ಅಥವಾ ಜೀವವೇ ಬೇರೆ.ಶರೀರವೇ ಬೇರೆಯೇ ಆಗಿವೆಯೆ ಎಂಬುದನ್ನು ಪರಿಶೀಲಿಸ ಬಲ್ಲವನಾಗಿರುತ್ತಾನೆ.’
‘ಗೆಳೆಯ, ನಾನು ಹೀಗೆ ತಿಳಿದಿದ್ದೇನೆ, ಹೀಗೆ ನೋಡಬಲ್ಲವನಾಗಿದ್ದೇನೆ. ಆದರೂ ಜೀವವೂ ಶರೀರವೂ ಒಂದೇ ಅಥವಾ ಜೀವವೂ ಶರೀರವೂ ಬೇರೆ ಬೇರೆ ಎಂದು ನಾನು ಹೇಳುವುದಿಲ್ಲ.. (ಸಾಮಞ್ಞಫಲ ಸುತ್ತದ 85ನೆಯ ಪ್ಯಾರಾದಂತೆ) ಜ್ಞಾನದಿಂದ ಬಂದ ದರ್ಶನದ ಕಡೆಗೆ ತನ್ನ ಮನಸ್ಸನ್ನು ತಿರುಗಿಸಿ ಕೇಂದ್ರೀಕರಿಸುತ್ತಾನೆ. ಗೆಳೆಯ, ಅಂಥ ಭಿಕ್ಷುವು ಜೀವವೂ, ಶರೀರವೂ ಒಂದೆಯೇ ಅಥವಾ ಜೀವವೂ, ಶರೀರವೂ ಬೇರೆ ಬೇರೆಯೇ ಎಂಬುದನ್ನು ಪರಿಶೀಲಿಸಬಲ್ಲವನಾಗಿರುತ್ತಾನೆಯೆ.?
“ಗೆಳೆಯ, ಹೀಗೆ ತಿಳಿದಿರುವ ಮತ್ತು ಹೀಗೆ ನೊಡಬಲ್ಲ ಅಂಥ ಭಿಕ್ಷುವು ಜೀವವೂ ಶರೀರವೂ ಒಂದೇ ಅಥವಾ ಜೀವವೂ ಶರೀರವೂ ಬೇರೆ ಬೇರೆ ಎಂಬುದನ್ನು ಪರಿಶೀಲಿಸಬಲ್ಲವನಾಗಿರುತ್ತಾನೆ.
“ಗೆಳೆಯ, ನಾನು ಹಾಗೆ ತಿಳಿದಿರುವ ಮತ್ತು ಹಾಗೆ ನೊಡಬಲ್ಲವ ನಾಗಿದ್ದೇನೆ. ಆದರೆ ನಾನು ‘ಜೀವವೂ ಶರೀರವೂ ಒಂದೇ ಅಥವಾ ಜೀವವೇ ಬೇರೆ ಶರೀರವೇ ಬೇರೆ’ ಎಂದು ಹೇಳುವುದಿಲ್ಲ.. (ಸಾಮಞ್ಞಫಲ ಸುತ್ತದ 98ನೆಯ ಪ್ಯಾರಾದವರೆಗೆ).(99ನೆಯ ಪ್ಯಾರಾದಲ್ಲಿರುವಂತೆ) ಇನ್ನು ಮೇಲೆ ಜನ್ಮವಿಲ್ಲ, ಎಂಬುದನ್ನು ತಿಳಿದಿದ್ದಾನೆ. ಹೀಗೆ ತಿಳಿದಿರುವ ಹೀಗೆ ನೋಡಬಲ್ಲ ಭಿಕ್ಷುವು ಜೀವವು ಶರೀರವೂ ಒಂದೇಯೆ, ಅಥವಾ ಜೀವವು ಶರೀರವು ಬೇರೆ ಬೇರೆಯೇ ಎಂಬುದನ್ನು ಪರಿಶೀಸಬಲ್ಲನೇ?”
“ಗೆಳೆಯ, ಹೀಗೆ ತಿಳಿದಿರುವ ಮತ್ತು ಹೀಗೆ ನೋಡಬಲ್ಲ ಭಿಕ್ಷುವು ಜೀವವೂ ಶರೀರವೂ ಒಂದೇಯೇ ಅಥವಾ ಜೀವವೂ ಶರೀರವೂ ಬೇರೆ ಬೇರೆಯೇ ಎಂಬುದನ್ನು ಪರಿಶೀಲಿಸಬಲ್ಲವನಾಗಿರುತ್ತಾನೆ.”
“ಗೆಳೆಯ, ನಾನು ಹೀಗೆ ತಿಳಿದಿದ್ದೇನೆ, ಹೀಗೆ ನೋಡಬಲ್ಲವನಾಗಿದ್ದೇನೆ. ಆದರೂ ಜೀವವೂ, ಶರೀರವೂ ಒಂದೇ ಅಥವಾ ಜೀವವೂ ಬೇರೆ ಶರೀರವೇ ಬೇರೆ ಎಂದು ಹೇಳುವುದಿಲ್ಲ.”
ಭಗವಾನರು ಹೀಗೆ ಹೇಳಿದರು: ಲಿಚ್ಛವಿಕುಲದ ಒಟ್ಠದ್ಧನು ಭಗವಾನರ ಮಾತಿನಿಂದ ಸುಪ್ರೀತನಾಗಿ ಅವರಿಗೆ ಅಭಿನಂಧಿಸಿದನು.
ಇಲ್ಲಿಗೆ ಮಹಾಲಿ ಸುತ್ತ ಮುಗಿಯಿತು.
ಟಿಪ್ಪಣಿಗಳು [3]
English
Deutsch
Việt Ngữ