ಊಟಿಸುತ್ತಿದೆ

ಅನುವಾದಗಳು [29]

ಹುತ್ತದ ಉಪಮೆ ಸುತ್ತ

1. ಕುಮಾರ ಕಶ್ಯಪರಿಂದ ದೇವತೆಯ ಪ್ರಶ್ನೆಗಳಿಗೆ ಉತ್ತರ

ಹೀಗೆ ನಾನು ಕೇಳಿದ್ದೇನೆ.248 ಒಂದುಸಲ ಭಗವಾನರು ಶ್ರಾವಸ್ಥಿಯ ಜೇತವನದಲ್ಲಿನ ಅನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಅದೇ ಸಮಯದಲ್ಲಿ ಆಯುಷ್ಮಂತ ಕುಮಾರ ಕಶ್ಯಪರು ಅಂಧವನದಲ್ಲಿ ತಂಗಿದ್ದರು.275 ಆಗ ಒಬ್ಬ ದೇವತೆಯು ರಾತ್ರಿ ಕಳೆಯುತ್ತಿದ್ದಾಗ, ವಿಶೇಷವಾದ ಕಾಂತಿಯಿಂದ, ಇಡೀ ಅಂಧವನವನ್ನು ಬೆಳಕಿನಿಂದ ತುಂಬುತ್ತಾ ಆಯುಷ್ಮಂತ ಕುಮಾರ ಕಶ್ಯಪರಿದ್ದಲ್ಲಿಗೆ ಬಂದನು; ಅಲ್ಲಿಗೆ ಬಂದು ಒಂದೆಡೆ ನಿಂತನು.276 ಒಂದೆಡೆ ನಿಂತು ಆ ದೇವನು ಆಯುಷ್ಮಂತ ಕುಮಾರ ಕಶ್ಯಪನಿಗೆ ಹೀಗೆ ಹೇಳಿದನು- ಭಿಕ್ಷು, ಭಿಕ್ಷು ಈ ಹುತ್ತ ರಾತ್ರಿಯಲ್ಲಿ ಹೊಗೆಯಾಡುತ್ತದೆ, ಹಗಲಿನಲ್ಲಿ ಪ್ರಜ್ವಲಿಸುತ್ತದೆ.277 ಬ್ರಾಹ್ಮಣ ಹೀಗೆ ಹೇಳಿದ- ಉಪಕರಣ (ಗುದ್ದಲಿ) ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ತಡೆ ಕಂಡಿತು. ತಡೆ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ತಡೆ ತೆಗೆದುಹಾಕು; ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ಕಪ್ಪೆ ಕಂಡಿತು. ಕಪ್ಪೆ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಕಪ್ಪೆ ತೆಗೆದುಹಾಕು; ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ಅಡ್ಡದಾರಿಗಳು ಕಂಡಿತು.

ಅಡ್ಡದಾರಿ, ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಅಡ್ಡದಾರಿ ತೆಗೆದುಹಾಕು, ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ಸೋಸುವ ಪಾತ್ರೆ ಕಂಡಿತು. ಸೋಸುವ ಪಾತ್ರೆ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಸೋಸುವ ಪಾತ್ರೆ ತೆಗೆದು ಹಾಕು, ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ಆಮೆ ಕಂಡಿತು. ಆಮೆ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಆಮೆ ತೆಗೆದು ಹಾಕು; ಉಪಕರಣ ತಂದು ಸುಮೇಧ ಅಗೆ ಎಂದು. ಉಪಕರಣ ತಂದು ಸುಮೇಧ ಅಗೆದಾಗ ಮರದ ತುಂಡು, ಮಾಂಸ ಕೊಚ್ಚ ಕತ್ತಿ ಕಂಡಿತು. ಮರದ ತುಂಡು, ಮಾಂಸ ಕೊಚ್ಚುವ ಕತ್ತಿ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಮರದ ತುಂಡು, ಮಾಂಸ ಕೊಚ್ಚುವ ಕತ್ತಿ ತೆಗೆದುಹಾಕು; ಉಪಕರಣ ತಂದು ಸುಮೇಧ ಅಗೆ ಎಂದು. ಉಪಕರಣ ತಂದು ಸುಮೇಧ ಅಗೆದಾಗ ಮಾಂಸದ ತುಂಡು ಕಂಡಿತು. ಮಾಂಸದ ತುಂಡು ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಮಾಂಸದ ತುಂಡು ತೆಗೆದುಹಾಕು; ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು, ಸುಮೇಧ ಅಗೆದಾಗ ನಾಗಸರ್ಪ ಕಂಡಿತು. ನಾಗಸರ್ಪ ಭಂತೇ ಎಂದು. ಬ್ರಾಹ್ಮಣ ಹೀಗೆ ಹೇಳಿದ- ಇರಲಿ ನಾಗಸರ್ಪ, ನಾಗಸರ್ಪವನ್ನು ಹಿಂಸಿಸಬೇಡ, ನಾಗಸರ್ಪಕ್ಕೆ ನಮಿಸು ಎಂದು.

ಭಿಕ್ಷು, ನೀನು ಈ ಎಲ್ಲಾ ಪ್ರಶ್ನೆಗಳನ್ನು ಭಗವಂತರೆಡೆಗೆ ಸಾರಿ ಕೇಳು, ಭಗವಾನರು ಯಾವ ಪ್ರಕಾರ ವಿವರಿಸುವರೋ ಅದೇ ಪ್ರಕಾರವಾಗಿ ಮನಸ್ಸಿನಲ್ಲಿಟ್ಟುಕೋ ಎಂದು. ಭಿಕ್ಷು ಬೇರೆ ಯಾರನ್ನೂ ಕಾಣುವುದಿಲ್ಲ. ಈ ಲೋಕದಲ್ಲಿ ದೇವತೆಗಳಲ್ಲಿ, ಮಾರರಲ್ಲಿ, ಬ್ರಹ್ಮರಲ್ಲಿ, ಶ್ರಮಣ ಬ್ರಾಹ್ಮಣರಲ್ಲಿ, ಜನರಲ್ಲಿ, ರಾಜ-ಮನುಷ್ಯರಲ್ಲಿಯೂ ಸಹ, ತಥಾಗತರನ್ನು ಬಿಟ್ಟು, ತಥಾಗತರ ಶಿಷ್ಯರನ್ನು ಬಿಟ್ಟು, ಅಥವಾ ಅವರಿಂದ ಕೇಳಿ ತಿಳಿದವರನ್ನು ಬಿಟ್ಟು ಬೇರೆಯವರು ಯಾರೂ ಈ ಪ್ರಶ್ನೆಗಳಿಗೆ, ವಿವರಣೆಯನ್ನು ನೀಡಿ, ಚಿತ್ತವನ್ನು ಪೂರ್ಣವಾಗಿ ಸಂತೋಷಪಡಿಸಬಲ್ಲಂತಹವರನ್ನು ಕಂಡಿಲ್ಲ ಎಂದು. ಹೀಗೆ ಆ ದೇವನು ಹೇಳಿದನು. ಹೀಗೆ ಹೇಳಿದ ನಂತರ ಅಲ್ಲಿಯೇ ಅಂತಧರ್ಾನನಾದನು.

2. ಆಗ ಆಯುಷ್ಮಂತ ಕುಮಾರ ಕಶ್ಯಪ ಆ ರಾತ್ರಿ ಕಳೆದಮೇಲೆ ಭಗವಾನರಿದ್ದಲ್ಲಿಗೆ ಬಂದ. ಸಮೀಪ ಬಂದು, ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತು, ಆಯುಷ್ಮಂತ ಕುಮಾರ ಕಶ್ಯಪ ಭಗವಾನರಿಗೆ ಹೀಗೆ ಕೇಳಿದ- ಭಂತೇ ಈ ರಾತ್ರಿಯ ನಡುಕಾಲದಲ್ಲಿ, ಒಬ್ಬ ದೇವ, ವಿಶೇಷವಾದ ಕಾಂತಿಯಿಂದ ಇಡೀ ಅಂಧವನವನ್ನು ಬೆಳಕಿನಿಂದ ತುಂಬುತ್ತಾ ಸಮೀಪಿಸಿದನು. ಸಮೀಪಿಸಿದ ನಂತರ ಒಂದೆಡೆ ನಿಂತನು. ಒಂದೆಡೆ ನಿಂತು, ಭಂತೇ, ಆ ದೇವ ಹೀಗೆ ನುಡಿದನು- ಭಿಕ್ಷು, ಭಿಕ್ಷು ಈ ಹುತ್ತ ರಾತ್ರಿಯಲ್ಲಿ ಹೊಗೆಯಾಡುತ್ತದೆ, ಹಗಲಿನಲ್ಲಿ ಪ್ರಜ್ವಲಿಸುತ್ತದೆ. ಬ್ರಾಹ್ಮಣ ಹೀಗೆ ಹೇಳಿದನು- ಉಪಕರಣ ತಂದು, ಸುಮೇಧ ಅಗೆ ಎಂದು. ಉಪಕರಣ ತಂದು ಸುಮೇಧ ಅಗೆದಾಗ..... ಬಲ್ಲಂತಹವನ್ನು ಕಂಡಿಲ್ಲ ಎಂದು ಹೀಗೆ ಆ ದೇವನು ಹೇಳಿದನು. ಹೀಗೆ ಹೇಳಿದ ನಂತರ ಅಲ್ಲಿಯೇ ಅಂತಧರ್ಾನನಾದನು.

ಭಂತೇ, ಯಾವುವು ಆ ಹುತ್ತ, ರಾತ್ರಿಯ ಹೊಗೆಯಾಡುವಿಕೆ ಏನು, ಹಗಲಿನ ಪ್ರಜ್ವಲನವೇನು, ಬ್ರಾಹ್ಮಣ ಯಾರು, ಸುಮೇಧ ಯಾರು, ಎಂಥಹುದು ಉಪಕರಣ, ಏನನ್ನು ಅಗೆಯಬೇಕು. ತಡೆಯಾವುದು, ಕಪ್ಪೆಯಾವುದು, ಅಡ್ಡದಾರಿಗಳೇನು, ಸೋಸುವ ಪಾತ್ರೆ ಯಾವುದು, ಆಮೆ ಏನು, ಮರದ ತುಂಡು ಮಾಂಸ ಕೊಚ್ಚುವ ಕತ್ತಿ ಏನು, ಮಾಂಸದ ತುಂಡು ಏನು, ನಾಗಸರ್ಪ ಯಾರು? ಎಂದು.

2. ತಥಾಗತರಿಂದ ಪ್ರಶ್ನೆಗಳಿಗೆ ವಿವರಣೆ

3. ಭಿಕ್ಷು, ಹುತ್ತವೆಂದರೆ, ನಾಲ್ಕು ಮಹಾ ಭೌತಿಕಧಾತುಗಳಿಂದಾದ ತಂದೆ ತಾಯಿಗಳಿಂದ ಸಂಭವಿಸಿದ, ಅಕ್ಕಿ ರಾಗಿ ರಸಗಳಿಂದ ಪೋಷಿತವಾದ, ಯಾವಾಗಲೂ ಅನಿತ್ಯವಾದ, ಸವೆಯುವ, ಪ್ರಯಾಸದ ಒತ್ತುಗಳುಳ್ಳ, ಮುರಿದುಹೋಗುವ, ನಾಶವಾಗುವ, ಶರೀರದ ಸಂಕೇತ.278 (ಪಯರ್ಾಯ ಪದ.)*

ಭಿಕ್ಷು, ಯಾವುದು ಹಗಲಿನಲ್ಲಿ ಮಾಡಬೇಕಾದ ಕಾರ್ಯ ಅದನ್ನು ರಾತ್ರಿ ಆಲೋಚಿಸುವುದು, ಮಂಥನ ಮಾಡುವುದು- ಇದೇ ರಾತ್ರಿಯಲ್ಲಿ ಹೊಗೆಯಾಡುವಿಕೆ. ಭಿಕ್ಷು, ಯಾವುದು ರಾತ್ರಿಯಲ್ಲಿ ಚಿಂತಿಸಿದ, ಮಂಥಿಸಿದ ಕಾರ್ಯ. ಅದನ್ನು ಹಗಲಿನಲ್ಲಿ ಕಾಯದ ಮೂಲಕ, ಮಾತಿನ ಮೂಲಕ, ಮನಸ್ಸಿನ ಮೂಲಕ, ಕಾರ್ಯ ಪ್ರವರ್ತನಾಗುವುದು- ಇದೇ ಹಗಲಿನಲ್ಲಿ ಪ್ರಜ್ವಲಿಸುವಿಕೆ.

ಬ್ರಾಹ್ಮಣ, ಎಂದರೆ ಭಿಕ್ಷು, ಇದು ಅರಹಂತರಾದ, ಸಮ್ಮಾಸಂಬುದ್ಧರಾದ, ತಥಾಗತರ ಪಯರ್ಾಯ ಪದ. ಸುಮೇಧ ಎಂದರೆ ಭಿಕ್ಷು, ಸೇಖರಾದಂತಹ (ಆರ್ಯರು) ಭಿಕ್ಷುಗಳಿಗೆ ಪಯರ್ಾಯ ಪದ.

ಉಪಕರಣ, ಎಂದರೆ ಭಿಕ್ಷು, ಆರ್ಯರ ಪ್ರಜ್ಞೆಗೆ ಪಯರ್ಾಯ ಪದ. ಅಗೆಯುವುದು, ಎಂದರೆ ಭಿಕ್ಷು, ನಿರಂತರ ಪ್ರಯತ್ನಶೀಲತೆಗೆ ಪಯರ್ಾಯ ಪದ.

ತಡೆ, ಎಂದರೆ ಭಿಕ್ಷು, ಅವಿದ್ಯೆಯ ಪಯರ್ಾಯ.279 ತಡೆ ತೆಗೆದುಹಾಕು, ಅವಿದ್ಯೆಯನ್ನು ತೊಡೆದುಹಾಕು, ಉಪಕರಣ ತಂದು, ಸುಮೇಧ ಅಗೆ - ಇದು ಇದರ ಅರ್ಥ.

ಕಪ್ಪೆ, ಎಂದರ ಭಿಕ್ಷು, ಸಿಟ್ಟು ಹತಾಶೆಗೆ ಪಯರ್ಾಯ ಪದ. ಕಪ್ಪೆ ತೆಗೆದು ಹಾಕು, ಸಿಟ್ಟು ಹತಾಶೆ ತೊಡೆದುಹಾಕು, ಉಪಕರಣ ತಂದು, ಸುಮೇಧ ಅಗೆ - ಇದು ಇದರ ಅರ್ಥ.

ಅಡ್ಡದಾರಿಗಳು, ಎಂದರೆ ಭಿಕ್ಷು, ಸಂಶಯಕ್ಕೆ ಪಯರ್ಾಯ.280 ಅಡ್ಡದಾರಿ ತೆಗೆದುಹಾಕು, ಸಂಶಯ ತೊಡೆದುಹಾಕು, ಉಪಕರಣ ತಂದು ಸುಮೇಧ ಅಗೆ - ಇದು ಇದರ ಅರ್ಥ.

ಸೋಸುವ ಪಾತ್ರೆ ಎಂದರೆ ಭಿಕ್ಷು, ಐದು ವಿಧ ನೀವರಣೆಗಳಿಗೆ (ಅಡೆತಡೆ) ಪಯರ್ಾಯ - ಅವು ಯಾವುವೆಂದರೆ- ಕಾಯಚ್ಛಂದ ನೀವರಣ, ಬ್ಯಾಪಾದ ನೀವರಣ, ಥೀನಮಿದ್ದ ನೀವರಣ, ಉದ್ದುಚ್ಚ ನೀವರಣ, ಕುಕ್ಕುಚ ನೀವರಣ, ವಿಚಿಕಿಚ್ಚ ನೀವರಣ, ಸೋಸುವ ಪಾತ್ರೆ ತೆಗೆದು ಹಾಕು, ಐದು ನೀವರಣೆಗಳನ್ನು ತೊಡೆದುಹಾಕು. ಉಪಕರಣ ತಂದು, ಸುಮೇಧ ಅಗೆ ಎಂಬ - ಇದು ಅದರ ಅರ್ಥ.

ಆಮೆ ಎಂದರೆ ಭಿಕ್ಷು, ಐದು ವಿಧದ ಉಪಾದಾನ ಬಂಧ281 (ಸೆರೆ ಹಿಡಿದಿಡುವ ರಾಶಿಗಳು) ಗಳಿಗೆ ಪಯರ್ಾಯ ಪದ. ಅವು ಯಾವುವೆಂದರೆ: ರೂಪ ಉಪಾದಾನ ರಾಶಿ, ವೇದನಾ ಉಪಾದಾನ ರಾಶಿ, ಸಂಜ್ಞಾ ಉಪಾದಾನ ರಾಶಿ, ವಿಜ್ಞಾನ ಉಪಾದಾನ ರಾಶಿ, ಸಂಖಾರ ಉಪಾದಾನ ರಾಶಿ, ಆಮೆ ತೆಗೆದುಹಾಕು, ಐದು ಉಪಾದಾನ ರಾಶಿಗಳನ್ನು ತೊಡೆದುಹಾಕು - ಉಪಕರಣ ತಂದು, ಸುಮೇಧ ಅಗೆ ಎಂಬ ಇದು ಅದರ ಅರ್ಥ.

ಮರದ ತುಂಡು, ಮಾಂಸಕೊಚ್ಚುವ ಕತ್ತಿ, ಎಂದರೆ ಭಿಕ್ಷು, ಐದು ವಿಧ ಕಾಮಗುಣಗಳ282 (ಪಂಚೇಂದ್ರಿಯಗಳ ಬಾಹಿಕ ವಿಷಯಗಳು) ಪಯರ್ಾಯ. ಅವು ಯಾವುವೆಂದರೆ: ಕಣ್ಣಿನಿಂದ ತಿಳಿಯಬಹುದಾದ, ಇಷ್ಟವಾದ, ಅಪೇಕ್ಷಿತವಾದ, ಮುದಗೊಳಿಸುವ, ಪ್ರಿಯರೂಪವಾದ, ಕಾಮಸಂಬಂಧವಾದ, ರಾಗೋತ್ತೇಜನಗೊಳಿಸುವ ರೂಪಗಳು. ಕಿವಿಯಿಂದ ತಿಳಿಯಬಹುದಾದ ಶಬ್ದ... ಮೂಗಿನಿಂದ ತಿಳಿಯಬಹುದಾದ ವಾಸನೆ... ನಾಲಿಗೆಯಿಂದ ತಿಳಿಯಬಹುದಾದ ರಸ... ಕಾಯದಿಂದ ತಿಳಿಯಬಹುದಾದ ಸ್ಪರ್ಶಗಳು... ಮರದ ತುಂಡು, ಮಾಂಸ ಕೊಚ್ಚುವ ಕತ್ತಿ ತೆಗೆದುಹಾಕು, ಐದು ಕಾಮಗುಣ ತೊಡೆದುಹಾಕು, ಉಪಕರಣ ತಂದು, ಸುಮೇಧ ಅಗೆ ಎಂಬ ಇದು ಅದರ ಅರ್ಥ.

ಮಾಂಸದ ತುಂಡು, ಎಂದರೆ ಭಿಕ್ಷು, ವಿನೋದ ಭೋಗಾಸಕ್ತಿಯ ಪಯರ್ಾಯ.283 ಮಾಂಸದ ತುಂಡು ತೆಗೆದುಹಾಕು, ವಿನೋದ ಭೋಗಾಸಕ್ತಿ ತೊಡೆದುಹಾಕು; ಉಪಕರಣ ತಂದು, ಸುಮೇಧ ಅಗೆ ಎಂಬ ಇದು ಅದರ ಅರ್ಥ.

ನಾಗಸರ್ಪ, ಎಂದರೆ ಭಿಕ್ಷು, ಆಸವಗಳನ್ನು ಕ್ಷೀಣಿಸಿದ ಭಿಕ್ಷುಗಳಿಗೆ (ಅರಹಂತರಿಗೆ) ಪಯರ್ಾಯ.284 ಇರಲಿ ನಾಗಸರ್ಪ, ನಾಗಸರ್ಪ ಹಿಂಸಿಸಬೇಡ, ನಾಗಸರ್ಪಕ್ಕೆ ನಮಿಸು, ಇದು ಇದರ ಅರ್ಥ ಎಂದು.

ಭಗವಾನರು ಹೀಗೆ ಹೇಳಿದರು. ಸ್ಫೂರ್ತಿ ಗೊಂಡ ಆಯುಷ್ಮಂತ ಕುಮಾರಕಶ್ಯಪ ಭಗವಾನರ ಮಾತಿಗೆ ಆನಂದಗೊಂಡ.

ಇಲ್ಲಿಗೆ ಹುತ್ತದ ಉಪಮೆ ಸುತ್ತ ಮುಗಿಯಿತು

ಟಿಪ್ಪಣಿಗಳು [5]