1. ಐದು ರೀತಿಯ ಸಾರತೆಯುಳ್ಳ ಮನುಷ್ಯರು
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಭಗವಾನರು ಶ್ರಾವಸ್ತಿಯ ಹತ್ತಿರ ಅನಾಥಪಿಂಡಿಕನ ಜೇತವನದಲ್ಲಿನ ವಿಹಾರದಲ್ಲಿ ತಂಗಿದ್ದರು. ಆಗ ಅಲ್ಲಿ ಪಿಂಗಲಕೊಚ್ಛ ಎಂಬ ಬ್ರಾಹ್ಮಣನು ಭಗವಾನರಿದ್ದಲ್ಲಿಗೆ ಬಂದನು. ಸಮೀಪಕ್ಕೆ ಬಂದನಂತರ ಭಗವಾನರೊಂದಿಗೆ ಕುಶಲದ ಮಾತುಗಳನ್ನು ಆಡಿದನು. ಕುಶಲದ ಗೌರವಾದರದ ಮಾತುಗಳು ಮುಗಿದನಂತರ ಒಂದುಕಡೆ ಕುಳಿತನು. ಒಂದೆಡೆ ಕುಳಿತ ಬ್ರಾಹ್ಮಣ ಪಿಂಗಲಕೊಚ್ಛನು ಭಗವಾನರಿಗೆ ಹೀಗೆಂದನು- “ಪೂಜ್ಯ ಗೌತಮರೇ, ಗುಂಪುಗಳಿರುವ, ಪಂಥಗಳಿರುವ, ಅನುಯಾಯಿಗಳಿರುವ, ಶ್ರಮಣ-ಬ್ರಾಹ್ಮಣ ಮುಖ್ಯರಿದ್ದಾರೆ. ಹಾಗೂ ಅವರುಗಳು ಪ್ರಸಿದ್ಧರೂ ಯಶಸ್ವಿಗಳೂ ಆದ ತತ್ವವಾದಿಗಳಾಗಿದ್ದಾರೆ. ಅಲ್ಲದೇ ಬಹು ಜನತೆಯಿಂದ ಸಾಧುಸಂತರೆಂದು ಗೌರವಿಸಲ್ಪಟ್ಟಿದ್ದಾರೆ. ಅವರೆಂದರೆ: ಪೂರಣ ಕಶ್ಯಪ, ಮಕ್ಖಲಿ ಗೋಸಾಲ, ಅಜಿತ ಕೇಸಕಂಬಲಿ, ಪಕುಧ ಕಾತ್ಯಾಯನ, ಸಂಜಯ ಬೇಲಟ್ಠಪುತ್ರ ಮತ್ತು ನಿಘಂಟನಾಥಪುತ್ರ.54 ಅವರೆಲ್ಲಾ ಹೇಳುವಂತೆ ಅವರುಗಳು ಸಾಕ್ಷಾತ್ ಸತ್ಯದರ್ಶಿಗಳೇ? ಅಥವಾ ಅವರಲ್ಲಿ ಯಾರೂ ಸತ್ಯದರ್ಶಿಗಳಿಲ್ಲವೆ? ಅಥವಾ ಕೆಲವರು ಮಾತ್ರ ಸತ್ಯದರ್ಶಿಗಳು ಮತ್ತು ಕೆಲವರು ಅಲ್ಲವೇ?” ಎಂದು.
“ಆಯಿತು ಬ್ರಾಹ್ಮಣ, ಅದು ಹಾಗಿರಲಿ, ಅವರೆಲ್ಲ ಹೇಳುವಂತೆ ಅವರುಗಳು ಸಾಕ್ಷಾತ್ ಸತ್ಯದರ್ಶಿಗಳೇ ಅಥವಾ ಅವರಲ್ಲಿ ಯಾರೂ ಸತ್ಯದರ್ಶಿಗಳಿಲ್ಲವೇ ಅಥವಾ ಕೆಲವರು ಮಾತ್ರ ಸತ್ಯದರ್ಶಿಗಳು ಮತ್ತು ಕೆಲವರು ಅಲ್ಲ ಎಂಬುದು ಹಾಗಿರಲಿ ಬ್ರಾಹ್ಮಣ, ನಾನು ಧರ್ಮವನ್ನು ಉಪದೇಶಿಸುತ್ತೇನೆ, ಅದನ್ನು ಕೇಳು, ಚೆನ್ನಾಗಿ ಮನಸ್ಸಿನಲ್ಲಿ ಉಳಿಸಿಕೋ. ಈಗ ಉಪದೇಶಿಸುತ್ತೇನೆ” 55 ಎಂದು. “ಆಗಲಿ ಪೂಜ್ಯರೇ” ಎಂದು ಆ ಬ್ರಾಹ್ಮಣ ಪಿಂಗಲಕೊಚ್ಛ ಭಗವಾನರಿಗೆ ಉತ್ತರಿಸಿದನು. ಭಗವಾನರು ಹೀಗೆ ಹೇಳಿದರು-
2. “ಬ್ರಾಹ್ಮಣ ಅದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ ದೃಢವಾದ ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ ಆ ದಿಂಡನ್ನು ಗಮನಿಸದೆ ಮುಂದುವರೆದು, ಮರದ ಮೆದುಭಾಗವನ್ನು ಗಮನಿಸದೆ ಮುಂದುವರೆದು ತೊಗಟೆ ಭಾಗವನ್ನು ಗಮನಿಸಿದೆ ಮುಂದುವರೆದು, ಚಿಗುರಿರುವ ರೆಂಬೆಗಳನ್ನು ಗಮನಿಸದೆ ಮುಂದುವರೆದು ಮರದ ರೆಂಬೆ ಮತ್ತು ಕೊಂಬೆಗಳನ್ನು ಕಡಿದುಕೊಂಡವನಾಗಿ ಇವುಗಳೇ ಮರದ ರೆಂಬೆ ಮತ್ತು ಕೊಂಬೆಗಳನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಅದನ್ನು ಕಂಡ ಜ್ಞಾನಿಯಾದ ಮನುಷ್ಯ ಈ ರೀತಿಯಲ್ಲಿ ಹೇಳಬಹುದು- ‘ಈ ಒಳ್ಳೆಯ ಮನುಷ್ಯ ಮರದ ಸಾರವಾದ ದಿಂಡನ್ನು ತಿಳಿದಿಲ್ಲ ಮೆದು ಭಾಗವನ್ನು ತಿಳಿದಿಲ್ಲ, ತೊಗಟೆಯ ಭಾಗವನ್ನು ತಿಳಿದಿಲ್ಲ, ಚಿಗುರಿರುವ ಭಾಗವನ್ನು ತಿಳಿದಿಲ್ಲ, ರೆಂಬೆ ಮತ್ತು ಕೊಂಬೆಗಳನ್ನು ತಿಳಿದಿಲ್ಲ. ಆದ್ದರಿಂದ ಒಳ್ಳೆಯ ಮನುಷ್ಯ ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನು ಗಮನಿಸದೇ ಮುಂದುವರೆದು, ಮರದ ಮೆದು ಭಾಗವನ್ನು ಗಮನಿಸಿದೇ ಮುಂದುವರೆದು, ತೊಗಟೆ ಭಾಗವನ್ನು ಗಮನಿಸದೇ ಮುಂದುವರೆದು, ಚಿಗುರಿರುವ ರೆಂಬೆಗಳನ್ನು ಗಮನಿಸದೇ ಮುಂದುವರೆದು, ಮರದ ರೆಂಬೆ ಮತ್ತು ಕೊಂಬೆಗಳನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ, ಏನು ಒಳ್ಳೆಯದನ್ನು ದಿಂಡಿನಿಂದ ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ’ ಎಂದು.
3. “ಬ್ರಾಹ್ಮಣ, ಈ ರೀತಿಯಲ್ಲಿ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನು ಗಮನಿಸದೆ ಮುಂದುವರೆದು, ಮೆದುಭಾಗವನ್ನು ಗಮನಿಸದೇ ಮುಂದುವರೆದು ತೊಗಟೆ ಭಾಗವನ್ನು ಗಮನಿಸದೇ ಮುಂದುವರೆದು, ಚಿಗುರಿರುವ ರೆಂಬೆ ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಅದನ್ನು ಕಂಡು ಜ್ಞಾನಿಯಾದ ಮನುಷ್ಯ ಈ ರೀತಿಯಲ್ಲಿ ಹೇಳಬಹುದು- ‘ಈ ಒಳ್ಳೆಯ ಮನುಷ್ಯ ಚಿಗುರಿರುವ ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ, ಯಾವ ಒಳ್ಳೆಯದನ್ನು ದಿಂಡಿನಿಂದ ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ’ ಎಂದು.
4. “ಬ್ರಾಹ್ಮಣ ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು ಮುಂದುವರೆದು ತೊಗಟೆ ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಅದನ್ನು ಕಂಡ ಜ್ಞಾನಿಯಾದ ಮನುಷ್ಯ ಈ ರೀತಿಯಲ್ಲಿ ಹೇಳಬಹುದು- ‘ಈ ಒಳ್ಳೆಯ ಮನುಷ್ಯ ಮೆದು ಭಾಗವನ್ನು ಗಮನಿಸದೆ, ತೊಗಟೆ ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆಯಲಾಗಲಿಲ್ಲ’ ಎಂದು.
5. “ಬ್ರಾಹ್ಮಣ, ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮೆದು ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಅದನ್ನು ಕಂಡು ಜ್ಞಾನಿಯಾದ ಮನುಷ್ಯ ಈ ರೀತಿಯಲ್ಲಿ ಹೇಳಬಹುದು- ‘ಈ ಒಳ್ಳೆಯ ಮನುಷ್ಯ ಪುನರುಚ್ಚರಿಸಿ ದಿಂಡನ್ನು ಗಮನಿಸದೆ ಮುಂದುವರೆದು, ಮೆದು ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ’ ಎಂದು.
6. “ಬ್ರಾಹ್ಮಣ, ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ, ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನೇ ಕಡಿದುಕೊಂಡವನಾಗಿ ಇದೇ ಮರದ ಸಾರದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಅದನ್ನು ಕಂಡು ಜ್ಞಾನಿಯಾದ ಮನುಷ್ಯ ಈ ರೀತಿಯಾಗಿ ಹೇಳಬಹುದು- ‘ಈ ಒಳ್ಳೆಯ ಮನುಷ್ಯ ಮರದ ಸಾರವಾದ ದಿಂಡನ್ನು ತಿಳಿದಿದ್ದಾನೆ. ಮೆದು ಭಾಗವನ್ನು ತಿಳಿದಿದ್ದಾನೆ, ತೊಗಟೆಯ ಭಾಗವನ್ನು ತಿಳಿದಿದ್ದಾನೆ, ಚಿಗುರಿರುವ ರೆಂಬೆ ಭಾಗವನ್ನು ತಿಳಿದಿದ್ದಾನೆ, ರೆಂಬೆ ಮತ್ತು ಕೊಂಬೆಗಳನ್ನು ತಿಳಿದಿದ್ದಾನೆ. ಆದ್ದರಿಂದ ಈ ಒಳ್ಳೆಯ ಮನುಷ್ಯ ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನೇ ಕಡಿದುಕೊಂಡವನಾಗಿ, ಇದೇ ಮರದ ಸಾರದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ, ಯಾವ ಒಳ್ಳೆಯದನ್ನು ದಿಂಡಿನಿಂದ ಪಡೆಯಬಹುದೋ ಅದನ್ನು ಅವನು ಪಡೆದುಕೊಳ್ಳುತ್ತಾನೆ’ ಎಂದು.
2. ಲಾಭ, ಗೌರವ, ಕೀರ್ತಿಯ ಪರಿಪೂರ್ಣಸಿದ್ಧಿಯ ಸಾರ ದಿಂಡಿನ ಮೊದಲ ಉಪಮೆ
7. “ಬ್ರಾಹ್ಮಣ, ಇದು ಹೇಗೆಂದರೆ- ‘ಹುಟ್ಟಿನಿಂದ, ಮುಪ್ಪಿನಿಂದ, ಮರಣದಿಂದ, ಶೋಕದಿಂದ, ಕ್ರಂದನದಿಂದ ಶಾರೀರಿಕ ವೇದನೆಯಿಂದ, ಮಾನಸಿಕ ವೇದನೆಯಿಂದ ಕಳವಳದಿಂದ ಮುತ್ತಿಗೆ ಹಾಕಲ್ಪಟ್ಟಿದ್ದೇನೆ. ದುಃಖದಿಂದ ಮುತ್ತಿಗೆ ಹಾಕಲ್ಪಟ್ಟಿದ್ದೇನೆ, ದುಃಖಮಯನಾಗಿದ್ದೇನೆ. ಹೀಗಿರುವಂತಹ ಈ ದುಃಖದ ರಾಶಿಯನ್ನು ಪರಿಪೂರ್ಣವಾಗಿ ಅಂತ್ಯಗೊಳಿಸುವುದನ್ನು ತೋರಿಸಬಹುದು’ ಎಂದು. ಯಾರಾದರೊಬ್ಬ ಮನುಷ್ಯನು ಶ್ರದ್ಧಾವಂತನಾಗಿ ಮನೆಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ. ಅವನು ಈ ರೀತಿಯಾಗಿ ಶ್ರಮಣನಾಗಿರುವುದರಿಂದ ಲಾಭ, ಗೌರವ, ಕೀರ್ತಿ ಲಭಿಸುತ್ತವೆ. ಅವನು ಈ ಎಲ್ಲ ಲಾಭ, ಗೌರವ, ಕೀರ್ತಿಗಳನ್ನು ಪಡೆದದ್ದರಿಂದ ತೃಪ್ತನಾಗುತ್ತಾನೆ, ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುತ್ತಾನೆ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ತಾನು ಮೆರೆಯುತ್ತಾನೆ, ಇತರರನ್ನು ಹೀಗಳೆಯುತ್ತಾನೆ- ‘ನಾನು ಮಾತ್ರವೇ ಲಾಭ, ಗೌರವ, ಕೀರ್ತಿಗೆ ಪಾತ್ರನಾಗಿದ್ದೇನೆ. ಆದರೆ ಉಳಿದ ಇತರ ಭಿಕ್ಷುಗಳು ಕಡಿಮೆ ಪ್ರಸಿದ್ಧ, ಕಡಿಮೆ ಗೌರವ ಪಡೆದವರಾಗಿದ್ದಾರೆ’ ಎಂದು. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುವುದಿಲ್ಲ, ಯತ್ನಶೀಲನಾಗುವುದಿಲ್ಲ, ಅದಲ್ಲದೆ, ಅವನು ಉದಾಸೀನನಾಗುತ್ತಾನೆ, ಅಸಡ್ಡೆವುಳ್ಳವನಾಗುತ್ತಾನೆ.56 ಬ್ರಾಹ್ಮಣ ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನು ಗಮನಿಸದೇ ಮುಂದುವರೆದು, ಮರದ ಮೆದು ಭಾಗವನ್ನು ಗಮನಿಸದೆ ಮುಂದುವರೆದು, ತೊಗಟೆ ಭಾಗವನ್ನು ಗಮನಿಸದೆ ಮುಂದುವರೆದು, ಚಿಗುರಿರುವ ರೆಂಬೆಗಳನ್ನು ಗಮನಿಸದೆ ಮುಂದುವರೆದು, ಮರದ ರೆಂಬೆ ಮತ್ತು ಕೊಂಬೆಗಳನ್ನು ಕಡಿದುಕೊಂಡವನಾಗಿ ಇವುಗಳೇ, ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಹಾಗೆ ಆದ್ದರಿಂದ ಅವನು ಮರದ ದಿಂಡಿನಿಂದ, ಯಾವ ಒಳ್ಳೆಯದನ್ನು ದಿಂಡಿನಿಂದ ಪಡೆಯಬಹುದೋ, ಅದನ್ನು ಅವನು ಪಡೆಯಲಾಗುವುದಿಲ್ಲ. ಬ್ರಾಹ್ಮಣ, ಈ ಉಪಮೆಯ ರೀತಿಯಿಂದಾಗಿ ಈ ಮನುಷ್ಯನನ್ನು ಹೀಗೆ ಕರೆಯುತ್ತೇನೆ.”
3. ಶೀಲಸಂಪನ್ನತೆಯ ಪರಿಪೂರ್ಣ ಸಿದ್ಧಿಯ ಸಾರ ದಿಂಡಿನ ಎರಡನೆಯ ಉಪಮೆ
8. “ಆದರೆ ಬ್ರಾಹ್ಮಣ, ಇಲ್ಲಿ ಒಬ್ಬಾನೊಬ್ಬ ಮನುಷ್ಯನು ಶ್ರದ್ಧಾವಂತನಾಗಿ ಮನೆ ಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ. ಅವನು ಈ ರೀತಿಯಾಗಿ ಶ್ರಮಣನಾಗಿರುವುದರಿಂದ ಲಾಭ, ಗೌರವ, ಕೀರ್ತಿ ಲಭಿಸುತ್ತವೆ. ಅವನು ಈ ಎಲ್ಲ ಲಾಭ, ಗೌರವ, ಕೀರ್ತಿಗಳನ್ನು ಪಡೆದದ್ದರಿಂದ ತೃಪ್ತನಾಗುವುದಿಲ್ಲ, ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಲಾಬ, ಗೌರವ, ಕೀರ್ತಿಗಳಿಂದಾಗಿ ತಾನು ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ, ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ. ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ, ಅವನು ಶೀಲಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಈ ಶೀಲಸಂಪನ್ನತೆಯಿಂದ ತೃಪ್ತನಾಗುತ್ತಾನೆ, ಸಂಕಲ್ಪಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುತ್ತಾನೆ. ಅವನು ಈ ಶೀಲ ಸಂಪನ್ನತೆಯಿಂದಾಗಿ ತಾನು ಮೆರೆಯುತ್ತಾನೆ, ಇತರರನ್ನು ಹೀಗಳೆಯುತ್ತಾನೆ- ‘ನಾನು ಮಾತ್ರ ಶೀಲವಂತ, ಕಲ್ಯಾಣದಾಯಕನಾದವನು. ಆದರೆ ಉಳಿದ ಇತರ ಭಿಕ್ಷುಗಳು ದುಶ್ಶೀಲರು, ಪಾಪದಾಯಕರಾದವರು’ ಎಂದು. ಅವನು ಈ ಶೀಲಸಂಪನ್ನತೆಯಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುವುದಿಲ್ಲ. ಯತ್ನಶೀಲನಾಗುವುದಿಲ್ಲ, ಅದಲ್ಲದೆ ಅವನು ಉದಾಸೀನನಾಗುತ್ತಾನೆ, ಅಸಡ್ಡೆವುಳ್ಳವನಾಗುತ್ತಾನೆ. ಬ್ರಾಹ್ಮಣ ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು ತೊಗಟೆ ಭಾಗವನ್ನು ಗಮನಿಸಿದೆ ಮುಂದುವರೆದು, ಚಿಗುರಿರುವ ರೆಂಬೆಗಳನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟು ಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ. ಬ್ರಾಹ್ಮಣ, ಈ ಉಪಮೆಯ ರೀತಿಯಿಂದಾಗಿ ಆ ಮನುಷ್ಯನನ್ನು ಹೀಗೆ ಕರೆಯುತ್ತೇನೆ.
4. ಸಮಾಧಿ ಸಂಪನ್ನತೆಯ ಪರಿಪೂರ್ಣ ಸಿದ್ಧಿಯ ಸಾರ ದಿಂಡಿನ ಮೂರನೆಯ ಉಪಮೆ
9. “ಆದರೆ ಬ್ರಾಹ್ಮಣ, ಇಲ್ಲಿ ಒಬ್ಬಾನೊಬ್ಬ ಮನುಷ್ಯನು ಶ್ರದ್ಧಾವಂತನಾಗಿ ಮನೆಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ. ಅವನು ರೀತಿಯಾಗಿ ಶ್ರಮಣನಾಗಿರುವುದರಿಂದ ಲಾಭ, ಗೌರವ, ಕೀರ್ತಿ ಲಭಿಸುತ್ತವೆ. ಅವನು ಈ ಎಲ್ಲ ಲಾಭ, ಗೌರವ ಕೀರ್ತಿಗಳನ್ನು ಪಡೆದದ್ದರಿಂದ ತೃಪ್ತನಾಗುವುದಿಲ್ಲ. ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ, ಅದಲ್ಲದೇ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಶೀಲಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಶೀಲಸಂಪನ್ನತೆಯನ್ನು ಪಡೆದೆನೆಂದು ತೃಪ್ತನಾಗುತ್ತಾನೆ. ಆದರೆ ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಶೀಲಸಂಪನ್ನತೆಯಿಂದಾಗಿ ತಾನು ಮರೆಯುವುದಿಲ್ಲ. ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಶೀಲಸಂಪನ್ನತೆಯಿಂದಾಗಿ ಅವುಗಳಿಗಿಂತಲೂ ಮೀರಿದ ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ, ಅದಲ್ಲದೇ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಸಮಾಧಿ ಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ತೃಪ್ತನಾಗುತ್ತಾನೆ, ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುತ್ತಾನೆ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ತಾನು ಮೆರೆಯುತ್ತಾನೆ. ಇತರರನ್ನು ಹೀಗಳೆಯುತ್ತಾನೆ- ‘ನಾನು ಮಾತ್ರ ಸಮಚಿತ್ತನು, ಏಕಾಗ್ರಚಿತ್ತನು, ಆದರೆ ಉಳಿದ ಇತರ ಭಿಕ್ಷುಗಳು ಚಂಚಲಚಿತ್ತರು, ವಿಭ್ರಾಂತಚಿತ್ತರು; ಎಂದು. ಅವನು ಈ ಸಮಾಧಿಸಂಪನ್ನತೆಯಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲದ ಇತರ ಧರ್ಮವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುವುದಿಲ್ಲ, ಯತ್ನಶೀಲನಾಗುವುದಿಲ್ಲ. ಅದಲ್ಲದೇ ಅವನು ಉದಾಸೀನನಾಗುತ್ತಾನೆ, ಅಸಡ್ಡೆವುಳ್ಳವನಾಗುತ್ತಾನೆ. ಬ್ರಾಹ್ಮಣ, ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ ದೊಡ್ಡದಾದ, ದೃಢವಾದ, ಹಿರಿದಾದ, ದಿಂಡುಳ್ಳ ಮರವನ್ನು ಹುಡುಕುತ್ತ ಆ ದಿಂಡನ್ನು ಗಮನಿಸದೇ ಮುಂದುವರೆದು, ಮರದ ಮೆದು ಭಾಗವನ್ನು ಗಮನಿಸದೇ ಮುಂದುವರೆದು ತೊಗಟೆ ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ. ಬ್ರಾಹ್ಮಣ, ಈ ಉಪಮೆಯ ರೀತಿಯಿಂದಾಗಿ ಈ ಮನುಷ್ಯನನ್ನು ಹೀಗೆ ಕರೆಯುತ್ತೇನೆ.
5. ಜ್ಞಾನ ದರ್ಶನದ ಪರಿಪೂರ್ಣ ಸಿದ್ಧಿಯ ಸಾರ ದಿಂಡಿನ ನಾಲ್ಕನೆಯ ಉಪಮೆ
10. “ಆದರೆ ಬ್ರಾಹ್ಮಣ, ಇಲ್ಲಿ ಒಬ್ಬಾನೊಬ್ಬ ಮನುಷ್ಯನು ಶ್ರದ್ಧಾವಂತನಾಗಿ ಮನೆಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ. ಅವನು ಈ ರೀತಿಯಾಗಿ ಶ್ರಮಣನಾಗಿರುವುದರಿಂದ ಲಾಭ, ಗೌರವ, ಕೀರ್ತಿ ಲಭಿಸುತ್ತವೆ. ಅವನು ಈ ಎಲ್ಲ ಲಾಭ, ಗೌರವ, ಕೀರ್ತಿಗಳನ್ನು ಪಡೆದದ್ದರಿಂದ ತೃಪ್ತನಾಗುವುದಿಲ್ಲ. ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ತಾನು ಮೆರೆಯುವುದಿಲ್ಲ. ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಲಾಬ, ಗೌರವ, ಕೀರ್ತಿಗಳಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ, ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ, ಅವನು ಶೀಲಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಈ ಶೀಲಸಂಪನ್ನತೆಯಿಂದಾಗಿ ತೃಪ್ತನಾಗುತ್ತಾನೆ. ಆದರೆ ಸಂಕಲ್ಪಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಶೀಲಸಂಪನ್ನತೆಯನ್ನು ಪಡೆದದ್ದರಿಂದ ತಾನು ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಶೀಲಸಂಪನ್ನತೆಯಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ. ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಸಮಾಧಿ ಸಂಪನ್ನತೆಯನ್ನು ಪಡೆಯುತ್ತಾನೆ, ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ತೃಪ್ತನಾಗುತ್ತಾನೆ. ಆದರೆ ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ತಾನು ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ. ಅದಲ್ಲದೇ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಜ್ಞಾನ ದರ್ಶನವನ್ನು ಪಡೆಯುತ್ತಾನೆ. ಅವನು ಈ ಜ್ಞಾನ ದರ್ಶನದಿಂದ ತೃಪ್ತನಾಗುತ್ತಾನೆ, ಸಂಕಲ್ಪಿಸಿದ್ದು ಸಿದ್ಧಿಸಿತು ಎಂದು ತಿಳಿಯುತ್ತಾನೆ, ಅವನು ಈ ಜ್ಞಾನದರ್ಶನ ಪಡೆದಿದ್ದರಿಂದ ತಾನು ಮೆರೆಯುತ್ತಾನೆ, ಇತರರನ್ನು ಹೀಗಳೆಯುತ್ತಾನೆ- ‘ನಾನು ಮಾತ್ರ ಅರಿತುಕೊಂಡು, ಕಂಡುಕೊಂಡು ಜೀವಿಸುತ್ತೇನೆ, ಆದರೆ ಉಳಿದ ಇತರ ಭಿಕ್ಷುಗಳು ಅರಿಯದೇ ಕಂಡುಕೊಳ್ಳದೇ ಜೀವಿಸುತ್ತಾರೆ’ ಎಂದು. ಅವನು ಈ ಜ್ಞಾನ ದರ್ಶನದಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುವುದಿಲ್ಲ. ಯತ್ನಶೀಲನಾಗುವುದಿಲ್ಲ, ಅದಲ್ಲದೆ ಅವನು ಉದಾಸೀನನಾಗುತ್ತಾನೆ, ಅಸಡ್ಡೆವುಳ್ಳವನಾಗುತ್ತಾನೆ. ಬ್ರಾಹ್ಮಣ, ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನು ಗಮನಿಸದೇ ಮುಂದುವರೆದು, ಮರದ ಮೆದು ಭಾಗವನ್ನು ಕಡಿದುಕೊಂಡವನಾಗಿ ಇವುಗಳೇ ಮರದ ಸಾರವಾದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ. ಆದ್ದರಿಂದ ಅವನು ಮರದ ದಿಂಡಿನಿಂದ, ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆಯಲಾಗುವುದಿಲ್ಲ ಬ್ರಾಹ್ಮಣ. ಈ ಉಪಮೆಯ ಈ ರೀತಿಯಿಂದಾಗಿ ಈ ಮನುಷ್ಯನನ್ನು ಹೀಗೆ ಕರೆಯುತ್ತೇನೆ.
6. ಜ್ಞಾನದರ್ಶನಕ್ಕಿಂತಲೂ ಮಿಗಿಲಾದ ಧರ್ಮ
11. “ಬ್ರಾಹ್ಮಣ, ಇಲ್ಲಿ ಒಬ್ಬಾನೊಬ್ಬ ಮನುಷ್ಯ ಶ್ರದ್ಧಾವಂತನಾಗಿ ಮನೆಬಿಟ್ಟು ಮನೆ ಇಲ್ಲದವನಾಗಿ ಶ್ರಮಣನಾಗುತ್ತಾನೆ. ‘ಹುಟ್ಟಿನಿಂದ, ಮುಪ್ಪಿನಿಂದ, ಮರಣದಿಂದ, ಶೋಕದಿಂದ, ಕ್ರಂದನದಿಂದ, ಶಾರೀರಿಕ ವೇದನೆಯಿಂದ, ಮಾನಸಿಕ ವೇದನೆಯಿಂದ, ಕಳವಳದಿಂದ ಮುತ್ತಿಗೆ ಹಾಕಲ್ಪಟ್ಟಿದ್ದೇನೆ. ದುಃಖದಿಂದ ಮುತ್ತಿಗೆ ಹಾಕಲ್ಪಟ್ಟಿದ್ದೇನೆ, ದುಃಖಮಯನಾಗಿದ್ದೇನೆ. ಹೀಗಿರುವಂತಹ ಈ ದುಃಖದ ರಾಶಿಯನ್ನು ಪರಿಪೂರ್ಣವಾಗಿ ಅಂತ್ಯಗೊಳಿಸುವುದನ್ನು ತೋರಿಸಬಹುದು’ ಎಂದು. ಅವನು ಈ ರೀತಿಯಾಗಿ ಶ್ರಮಣನಾಗಿರುವುದರಿಂದ ಲಾಭ, ಗೌರವ, ಕೀರ್ತಿ ಲಭಿಸುತ್ತವೆ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ತೃಪ್ತನಾಗುವುದಿಲ್ಲ. ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿ ಪಡೆದದ್ದರಿಂದ ತಾನು ಮೆರೆಯುವುದಿಲ್ಲ. ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಲಾಭ, ಗೌರವ, ಕೀರ್ತಿಗಳಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ. ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಶೀಲಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಈ ಶೀಲಸಂಪನ್ನತೆಯನ್ನು ಪಡೆದಿದ್ದರಿಂದಾಗಿ ತೃಪ್ತನಾಗುತ್ತಾನೆ, ಆದರೆ ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಶೀಲಸಂಪನ್ನತೆಯಿಂದಗಿ ತಾನು ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಶೀಲಸಂಪನ್ನತೆಯಿಂದಾಗಿ ಅವುಗಳನ್ನು ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ. ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಸಮಾಧಿಸಂಪನ್ನತೆಯನ್ನು ಪಡೆಯುತ್ತಾನೆ. ಅವನು ಈ ಸಮಾಧಿ ಸಂಪನ್ನತೆಯನ್ನು ಪಡೆದದ್ದರಿಂದ ತೃಪ್ತನಾಗುತ್ತಾನೆ. ಆದರೆ ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ತಾನು ಮೆರೆಯುವುದಿಲ್ಲ. ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಸಮಾಧಿ ಸಂಪನ್ನತೆಯಿಂದಾಗಿ ಅವುಗಳಿಗೂ ಮೀರಿದ ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ, ಅದಲ್ಲದೆ ಅವನು ಉದಾಸೀನನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ. ಅವನು ಜ್ಞಾನದರ್ಶನವನ್ನು ಪಡೆಯುತ್ತಾನೆ. ಅವನು ಈ ಜ್ಞಾನದರ್ಶನವನ್ನು ಪಡೆದಿದ್ದರಿಂದಾಗಿ ತೃಪ್ತನಾಗುತ್ತಾನೆ. ಆದರೆ ಸಂಕಲ್ಪಿಸಿದ್ದು ಪರಿಪೂರ್ಣವಾಗಿ ಸಿದ್ಧಿಸಿತು ಎಂದು ತಿಳಿಯುವುದಿಲ್ಲ. ಅವನು ಈ ಜ್ಞಾನದರ್ಶನದಿಂದಾಗಿ ಮೆರೆಯುವುದಿಲ್ಲ, ಇತರರನ್ನು ಹೀಗಳೆಯುವುದಿಲ್ಲ. ಅವನು ಈ ಜ್ಞಾನ ದರ್ಶನದಿಂದಾಗಿ ಅವುಗಳಿಗೂ ಮೀರಿದ, ಅವುಗಳಿಗಿಂತಲೂ ಮಿಗಿಲಾದ ಇತರ ಧರ್ಮ ವಿಷಯಗಳನ್ನು ಸಾಧಿಸುವ ಬಗ್ಗೆ ಗಮನಹರಿಸುತ್ತಾನೆ, ಯತ್ನಶೀಲನಾಗುತ್ತಾನೆ, ಅದಲ್ಲದೆ ಅವನು ಉದಾಸೀನಾಗುವುದಿಲ್ಲ, ಅಸಡ್ಡೆವುಳ್ಳವನಾಗುವುದಿಲ್ಲ.
12. “ಬ್ರಾಹ್ಮಣ, ಯಾವ ಯಾವ ಧರ್ಮ ವಿಷಯಗಳು ಜ್ಞಾನ ದರ್ಶನಕ್ಕಿಂತಲೂ ಮೀರಿದುದು, ಮಿಗಿಲಾದುದು? ಬ್ರಾಹ್ಮಣ, ಇಲ್ಲಿ ಒಬ್ಬ ಭಿಕ್ಷುವು ಕಾಮವನ್ನು ದಾಟಿದವನಾಗಿ ಅಕುಶಲ ಧರ್ಮವನ್ನು ದಾಟಿದವನಾಗಿ, ಸವಿತರ್ಕನಾಗಿ, ಸವಿಚಾರನಾಗಿ, ಏಕಾಂತದಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ ನಾನು ಹೇಳುತ್ತೇನೆ, ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.57
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ ಆಂತರಿಕ ಸ್ಥೈರ್ಯ ಮತ್ತು ಮನಸ್ಸಿನ ಏಕೋಭಾವದಿಂದ ಸಮಾಧಿಯಿಂದಾಗಿ ವಿತರ್ಕಗಳಿಲ್ಲದ, ವಿಚಾರಗಳಿಲ್ಲದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಎರಡನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮ ವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ಆನಂದವನ್ನು ಮರೆಯಾಗಿಸಿ ಉಪೇಕ್ಖಾ (ಸಮಚಿತ್ತತೆ)ದಲ್ಲಿ ನೆಲೆಗೊಳ್ಳಬಹುದು. ಎಚ್ಚರಿಕೆಯಿಂದಲೂ ಮತ್ತು ಸರಿಯಾದ ಅರಿವಿನಿಂದಲೂ ಕಾಯದಿಮದ ಸುಖವನ್ನು ಅನುಭವಿಸಬಹುದು. ಯಾವ ಆರ್ಯರು ಅದನ್ನು ‘ಉಪೇಕ್ಷೆಯ ಎಚ್ಚರಿಕೆಯಲ್ಲಿ ಸುಖದಿಂದ ವಿಹರಿಸುತ್ತಾನೆ’ ಎಂದು ಹೇಳುತ್ತಾರೋ ಆ ಸಮಾಧಿಯ ಮುರನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನ ದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ಸುಖವನ್ನು ಬಿಟ್ಟವನಾಗಿ ದುಃಖವನ್ನು ಬಿಟ್ಟವನಾಗಿ ಈಗಾಗಲೇ ಮಾನಸಿಕ ಉಬ್ಬು-ತಗ್ಗುಗಳು ಅಸ್ತಂಗತವಾಗಿ ದುಃಖವೂ ಅಲ್ಲದ ಸುಖವೂ ಅಲ್ಲದ ಉಪೇಕ್ಖಾದಿಂದ ಉಂಟಾದ ಪರಿಶುದ್ಧ ಎಚ್ಚರ ಸ್ಥಿತಿಯಾದ ಸಮಾಧಿಯ ನಾಲ್ಕನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನ ದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ರೂಪದ ಗುರುತಿಸುವಿಕೆಯನ್ನು ಅತಿಕ್ರಮಿಸಿ ರೂಪ ಸಂಘಟನೆಯ ಗುರುತಿಸುವಿಕೆಯನ್ನು ಅಸ್ತಂಗಮಿಸಿ ನಾನಾ ವಿಧದ ಗುರುತಿಸುವಿಕೆಗಳನ್ನು ಆಲೋಚಿಸದೆ, ‘ಅನಂತ ಆಕಾಶ’ವೆಮದು ಅಕಾಸಾನಞ್ಚಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ಅಕಾಸನಞ್ಚಾಯತನ ಸ್ಥಿತಿ ಪೂರ್ಣವಾಗಿ ಅತಿಕ್ರಮಿಸಿ ‘ಅನಂತ ವಿಞ್ಞಾನ’ವೆಂದು ವಿಞ್ಞಾನಞ್ಚಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ, ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ವಿಞ್ಞಾನಞ್ಚಾಯತನ ಸ್ಥಿತಿ ಪೂರ್ಣವಾಗಿ ಅತಿಕ್ರಮಿಸಿ ‘ಏನೂ ಇಲ್ಲ’ ಎಂದು ಅಕಿಞ್ಚಞ್ಞಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ ನಾನು ಹೇಳುತ್ತೇನೆ ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಒಬ್ಬ ಭಿಕ್ಷುವು ಅಕಿಞ್ಚಞ್ಞಾಯತನ ಸ್ಥಿತಿ ಪೂರ್ಣವಾಗಿ ಅತಿಕ್ರಮಿಸಿ ನೇವಸಞ್ಞಾನಾಸಞ್ಞಾಯತನ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಗಿಲಾದ ಧರ್ಮವಿಷಯ.
“ಅಲ್ಲದೇ ಮತ್ತೆ ಬ್ರಾಹ್ಮಣ, ಯಾವ ಭಿಕ್ಷುವು ನೇವಸಞ್ಞಾನಾಸಞ್ಞಾಯತನ ಸ್ಥಿತಿ ಪೂರ್ಣವಾಗಿ ಅತಿಕ್ರಮಿಸಿ ಸಞ್ಞಾವೇದನೆಗಳನ್ನು ನಿರೋಧಿಸಿದ ಸ್ಥಿತಿ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಪ್ರಜ್ಞೆಯನ್ನು ಕಂಡುಕೊಂಡವನಾಗಿ ಆಸವಗಳನ್ನು ಪೂರ್ಣವಾಗಿ ಕ್ಷಯಿಸಿದವನಾಗುತ್ತಾನೆ. ಬ್ರಾಹ್ಮಣ, ನಾನು ಹೇಳುತ್ತೇನೆ, ಇದೇ ಜ್ಞಾನದರ್ಶನಕ್ಕಿಂತ ಮೀರಿದ, ಮಿಗಿಲಾದ ಧರ್ಮವಿಷಯ.
13. “ಬ್ರಾಹ್ಮಣ, ಇದು ಹೇಗೆಂದರೆ ಒಬ್ಬನು ಮರದ ದಿಂಡನ್ನು ಗುರಿಯಾಗಿಟ್ಟುಕೊಂಡು, ಮರದ ದಿಂಡಿಗಾಗಿ ಹುಡುಕಿಕೊಂಡು, ಮರದ ದಿಂಡಿಗಾಗಿ ಅಲೆದಾಡುತ್ತ, ದೊಡ್ಡದಾದ, ದೃಢವಾದ, ಹಿರಿದಾದ ದಿಂಡುಳ್ಳ ಮರವನ್ನು ಹುಡುಕುತ್ತ, ಆ ದಿಂಡನ್ನೇ ಕಡಿದುಕೊಂಡವನಾಗಿ ಇದೇ ಮರದ ಸಾರದ ದಿಂಡು ಎಂದು ಪಡೆದುಕೊಂಡಿದ್ದೇನೆಂದು ತಿಳಿದು ಹೊರಟುಹೋಗುತ್ತಾನೆ.
“ಆದ್ದರಿಂದ ಅವನು ಮರದ ದಿಂಡಿನಿಂದ, ಯಾವ ಒಳ್ಳೆಯದನ್ನು ಪಡೆಯಬಹುದೋ ಅದನ್ನು ಅವನು ಪಡೆದುಕೊಳ್ಳುತ್ತಾನೆ, ಬ್ರಾಹ್ಮಣ ಈ ಉಪಮೆಯ ರೀತಿಯಿಂದಾಗಿ ಆ ಮನುಷ್ಯನನ್ನು ಹೀಗೆ ಕರೆಯುತ್ತೇನೆ.
14. “ಆದ್ದರಿಂದ ಬ್ರಾಹ್ಮಣ, ಈ ಬ್ರಹ್ಮಚಾರಿಯ ಜೀವನವು ಲಾಭ, ಗೌರವ, ಕೀರ್ತಿಗಳ ಹಿತಾನುಕೂಲಕ್ಕಾಗಿ ಅಲ್ಲ, ಶೀಲಸಂಪನ್ನತೆಯ ಹಿತಾನುಕೂಲಕ್ಕಾಗಿ ಅಲ್ಲ, ಸಮಾಧಿ ಸಂಪನ್ನತೆಯ ಹಿತಾನುಕೂಲಕ್ಕಾಗಿ ಅಲ್ಲ, ಜ್ಞಾನದರ್ಶನದ ಹಿತಾನುಕೂಲಕ್ಕಾಗಿ ಅಲ್ಲ. ಬ್ರಾಹ್ಮಣ, ಅಚಲವಾದ ಚಿತ್ತವಿಮುಕ್ತಿಗಾಗಿ, ಅದೇ ಇದರ ಗುರಿ. ಬ್ರಾಹ್ಮಣ, ಬ್ರಹ್ಮಚರಿಯ ಇದೇ ಮರದ ಸಾರದ ದಿಂಡು, ಇದೇ ಸಾಧನೆಯ ಉತ್ತುಂಗ” ಎಂದು.
15. ಹೀಗೆ ಹೇಳಿದ ಮೇಲೆ ಬ್ರಾಹ್ಮಣ ಪಿಂಗಲಕೊಚ್ಚ ಭಗವಾನರಿಗೆ ಹೀಗೆ ಹೇಳಿದನು- “ಅದ್ಭುತವಾದದ್ದು ಪೂಜ್ಯ ಗೌತಮರೇ, ಅದ್ಭುತವಾದದ್ದು ಪೂಜ್ಯ ಗೌತಮರೇ. ಇದು ಹೇಗೆಂದರೆ, ವಿಪರೀತವಾಗಿರುವುದನ್ನು ಸರಿಪಡಿಸಿಕೊಳ್ಳುವಂತೆ, ಅಥವಾ ಮುಚ್ಚಿಹೋಗಿರುವುದನ್ನು ತೆರೆದಿಟ್ಟಂತೆ ಅಥವಾ ದಾರಿತಪ್ಪಿದವನಿಗೆ ದಾರಿ ತೋರಿಸಿದಂತೆ ಅಥವಾ ಕತ್ತಲಿನಲ್ಲಿ ಎಣ್ಣೆ ದೀಪವನ್ನು ಹಿಡಿದಿಟ್ಟು ಕಣ್ಣಿರುವವರು ರೂಪಾಕಾರಗಳನ್ನು ನೋಡಲು ಸಾಧ್ಯವಾಗಲಿ ಎಂದು. ಅದೇರೀತಿಯಲ್ಲಿ ಪೂಜ್ಯ ಗೌತಮರಿಂದ ಅನೇಕ ಪ್ರಕಾರವಾಗಿ ಈ ಧರ್ಮವು ಪ್ರಕಾಶಿಲ್ಪಟ್ಟಿದೆ. ಆದ್ದರಿಂದ ನಾನು ಪೂಜ್ಯ ಗೌತಮರಿಗೆ, ಧರ್ಮಕೆ ಮತ್ತು ಸಂಘಕ್ಕೆ ಶರಣು ಹೋಗುತ್ತೇನೆ. ಪೂಜ್ಯ ಗೌತಮರು ನನ್ನನ್ನು ಉಪಾಸಕನೆಂದು ಇಂದಿನಿಂದ ನನ್ನ ಜೀವ ಇರುವವರೆಗೆ ಶರಣು ಬಂದವನು ಎಂದು ಪರಗಣಿಸಲಿ” ಎಂದು.
ಇಲ್ಲಿಗೆ ಚೂಲಸಾರೋಪಮ ಸುತ್ತ ಮುಗಿಯಿತು.
ಮೂರನೆಯ ವರ್ಗ
ಮೋಲಿಯಪುಗ್ಗ, ಅರಿಟ್ಠ, ಅಂಧವನ, ಪುಣ್ಣ, ಆಹಾರ ಸೂತ್ರಗಳು, ಹುಡುಕುವಿಕೆ, ಕಣ್ಣೀರು, ದೊಡ್ಡ ಆನೆ, ದಿಂಡಿನ ಉಪಮೆ, ಪಿಂಗಲಕೊಚ್ಛ ಸೂತ್ರಗಳು ಈ ವರ್ಗದಲ್ಲಿವೆ.
ಟಿಪ್ಪಣಿಗಳು [4]
English
Việt Ngữ