ಅಟ್ಠಕನಾಗರ ಸುತ್ತ
1. ದಸಮ ಗೃಹಸ್ಥನ ಪ್ರಶ್ನೆ
ಹೀಗೆ ನಾನು ಕೇಳಿದ್ದೇನೆ. ಒಂದುಸಲ ಆಯುಷ್ಮಂತ ಆನಂದ ವೈಶಾಲಿಯ ಬೇಲುವ ಗ್ರಾಮದಲ್ಲಿ ತಂಗಿದ್ದರು. ಆ ಒಂದು ಸಮಯದಲ್ಲಿ ಅಟ್ಠಕ ನಗರದ ದಸಮ ಎಂಬ ಗ್ರಹಸ್ಥನು ಯಾವುದೋ ಕಾರ್ಯದ ನಿಮಿತ್ತವಾಗಿ ಪಾಟಲಿಪುತ್ರಕ್ಕೆ ಬಂದಿದ್ದನು. ಆಗ ಅಟ್ಠಕ ನಗರದ ಗೃಹಸ್ಥ ದಸಮನು ಕುಕ್ಕುಟಾರಾಮ ವಿಹಾರದಲ್ಲಿದ್ದ ಬೇರೊಬ್ಬ ಭಿಕ್ಷುವಿನಲ್ಲಿಗೆ ಬಂದನು; ಆ ಭಿಕ್ಷುವಿನ ಬಳಿಗೆ ಬಂದು ನಮಿಸಿ ಒಂದೆಡೆ ಕುಳಿತನು. ಒಂದೆಡೆ ಕುಳಿತ ಅಟ್ಠಕ ನಗರದ ಗೃಹಸ್ಥ ದಸಮನು ಆ ಭಿಕ್ಷುವಿಗೆ ಹೀಗೆ ಹೇಳಿದನು- ಭಂತೆ, ಆಯುಷ್ಮಂತ ಆನಂದ ಈಗ ಎಲ್ಲಿ ತಂಗಿದ್ದಾರೆ? ನಾನು ಆಯುಷ್ಮಂತ ಆನಂದರನ್ನು ಕಾಣುವ ಇಚ್ಛೆಯುಳ್ಳವನಾಗಿದ್ದೇನೆ.
ಗೃಹಸ್ಥನೇ, ಆಯುಷ್ಮಂತ ಆನಂದ ವೈಶಾಲಿಯ ಬೇಲುವ ಗ್ರಾಮದಲ್ಲಿ ತಂಗಿದ್ದಾರೆ.
ಆನಂತರದಲ್ಲಿ ಅಟ್ಠಕ ನಗರದ ಗೃಹಸ್ಥ ದಸಮನು ಪಾಟಲಿಪುತ್ರದಲ್ಲಿನ ಕಾರ್ಯವನ್ನು ಮುಗಿಸಿಕೊಂಡು ವೈಶಾಲಿಯ ಬೇಲುವ ಗ್ರಾಮಕ್ಕೆ ಬಂದು ಆಯುಷ್ಮಂತ ಆನಂದರು ಎಲ್ಲಿದ್ದರೋ ಅಲ್ಲಿಗೆ ಬಂದನು ಸಮೀಪಕ್ಕೆ ಬಂದ ನಂತರ ಆಯುಷ್ಮಂತ ಆನಂದರಿಗೆ ನಮಿಸಿ ಒಂದೆಡೆ ಕುಳಿತನು.
2. ಒಂದೆಡೆ ಕುಳಿತ ಅಟ್ಠಕ ನಗರದ ಗೃಹಸ್ಥ ದಸಮನು ಆಯುಷ್ಮಂತ ಆನಂದರಿಗೆ ಹೀಗೆ ಹೇಳಿದನು- ಭಂತೆ ಆನಂದ, ಆ ತಿಳಿದಂತಹ ದರ್ಶಿಸಿದಂತಹ ಅರಹಂತರಾದ ಸಮ್ಮಾಸಂಬುದ್ಧರಾದ ಭಗವಾನರಿಂದ ಒಂದು ಧರ್ಮ ವಿಷಯವು ತಿಳಿಸಲ್ಪಟ್ಟಿದೆಯೇ, ಅದರಿಂದಾಗಿ ಒಬ್ಬ ಭಿಕ್ಷು ಎಚ್ಚರಿಕೆಯಿಂದ ನಿರಂತರವಾಗಿ ನಿಧರ್ಾರಿತವಾಗಿ ಜೀವಿಸಿದ್ದೇ ಆದರೆ ಬಂಧನಕ್ಕೊಳಗಾದ ಮನಸ್ಸು ಬಂಧನದಿಂದ ವಿಮೋಚನೆ ಪಡೆಯುತ್ತದೆ, ಪೂರ್ಣವಾಗಿ ಕ್ಷಯಿಸದ ಆಸವಗಳು ಕ್ಷಯಿಸಿ ಹೋಗುತ್ತವೆ, ಇನ್ನು ದೊರಕದಿರುವ ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ?12
ಗೃಹಸ್ಥನೇ, ಹೌದು ಇದೆ. ಆ ತಿಳಿದಂತಹ ದರ್ಶಿಸಿದಂತಹ ಅರಹಂತರಾದ ಸಮ್ಮಾಸಂಬುದ್ಧರಾದ ಭಗವಾನರಿಂದ ಒಂದು ಧರ್ಮ ವಿಷಯವು ತಿಳಿಸಲ್ಪಟ್ಟಿದೆ, ಅದರಿಂದಾಗಿ ಒಬ್ಬ ಭಿಕ್ಷುವು ಎಚ್ಚರಿಕೆಯಿಂದ ಜೀವಿಸಿದ್ದೇ ಆದರೆ ಬಂಧನಕ್ಕೊಳಗಾದ ಮನಸ್ಸು ಬಂಧನದಿಂದ ವಿಮೋಚನೆ ಪಡೆಯುತ್ತದೆ. ಪೂರ್ಣವಾಗಿ ಕ್ಷಯಿಸದ ಆಸವಗಳು ಕ್ಷಯಿಸಿ ಹೋಗುತ್ತವೆ. ಇನ್ನು ದೊರಕದಿರುವ ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಭಂತೇ, ಆನಂದ, ಯಾವುದದು ಆ ತಿಳಿದಂತಹ ದರ್ಶಿಸಿದಂತಹ ಅರಹಂತರಾದ ಸಮ್ಮಾಸಂಬುದ್ಧರಾದ ಭಗವಾನರಿಂದ ಒಂದು ಧರ್ಮ ವಿಷಯವು ತಿಳಿಸಲ್ಪಟ್ಟಿದೆ. ಅದರಿಂದಾಗಿ ಒಬ್ಬ ಭಿಕ್ಷುವು ಎಚ್ಚರಿಕೆಯಿಂದ ನಿರಂತರವಾಗಿ ನಿಧರ್ಾರಿತವಾಗಿ ಜೀವಿಸಿದ್ದೇ ಆದರೆ ಬಂಧನಕ್ಕೊಳಗಾದ ಮನಸ್ಸು ಬಂಧನದಿಂದ ವಿಮೋಚನೆ ಪಡೆಯುತ್ತದೆ, ಪೂರ್ಣವಾಗಿ ಕ್ಷಯಿಸದ ಆಸವಗಳು ಕ್ಷಯಿಸಿ ಹೋಗುತ್ತವೆ. ಇನ್ನು ದೊರಕದಿರುವ ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ ಎಂದು?
2. ಆಯುಷ್ಮಂತ ಆನಂದರು ನೀಡಿದ ಪ್ರಶ್ನೆಗಳ ಉತ್ತರ
3. ಗೃಹಸ್ಥನೇ, ಇಲ್ಲಿ ಭಿಕ್ಷುವು ಕಾಮವನ್ನು ದಾಟಿದವನಾಗಿ, ಅಕುಶಲ ಧರ್ಮಗಳನ್ನು ದಾಟಿದವನಾಗಿ ಸವಿತರ್ಕನಾಗಿ ಸವಿಚಾರನಾಗಿ ಏಕಾಂತತೆಯಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಸಮಾಧಿಯ ಮೊದಲ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಸಮಾಧಿಯ ಮೊದಲನೆಯ ಹಂತವು ಯೋಜಿಸಿದಂತಾಗಿದೆ ಮತ್ತು ಮತ್ತು ನೆರವೇರಿಸಿದಂತಾಗಿದೆ.13 ಆದರೆ ಯಾವುದು ಯೋಜಿಸಿರುವುದೋ ಮತ್ತು ನೆರವೇರಿಸಿದಂತಿರುವುದೋ ಅದು ಅಶಾಶ್ವತವು ಹಾಗು ಅದು ನಿಂತು ಹೋಗಲು ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಈ ನಂಬಿಕೆಯಲ್ಲಿ ನೆಲೆನಿಂತು, ಆಸವಗಳು ಕ್ಷಯಿಸಿದ ಸ್ಥಿತಿಯನ್ನು ಪಡೆದುಕೊಳ್ಳುತ್ತಾನೆ.14 ಒಂದುವೇಳೆ ಅವನು ಆಸವಗಳನ್ನು ಕ್ಷಯಿಸಿದ ಸ್ಥಿತಿ ಪಡೆಯಲಾಗದಿದ್ದರೆ ಆಗ ಇದರಿಂದಾಗಿ, ಈ ಧಮ್ಮ ಸಾಮೀಪ್ಯದಿಂದಾಗಿ,15 ಈ ಧಮ್ಮದಲ್ಲಿ ಸಂತೋಷಪಡೆದಿದ್ದರಿಂದಾಗಿ, ಕೆಳಗಿನ ಸ್ಥಿತಿಗಳಿಗೆ ಅಂಟಿಕೊಂಡಂತಹ ಐದುಬಗೆಯ ಸಂಕೋಲೆಗಳನ್ನು ನಾಶಮಾಡಿದವನಾಗಿ ತನ್ನಷ್ಟಕ್ಕೆ ತಾನೇ ಮೇಲೇರಿದವನಾಗಿ ಅಲ್ಲಿಯೇ ನಿವರ್ಾಣವನ್ನು ಪಡೆದವನಾಗಿ, ಆ ಲೋಕದಿಂದ ಹಿಂತಿರುಗಿ ಬರದವನಾಗುತ್ತಾನೆ, ಗೃಹಸ್ಥನೇ ಇದು ಈ ಒಂದು ಧರ್ಮ ವಿಷಯ ತಿಳಿದಂತಹ ದರ್ಶಿಸಿದಂತಹ ಅರಹಂತರಾದ ಸಮ್ಮಾಸಂಬುದ್ಧರಾದ ಭಗವಾನರಿಂದ ತಿಳಿಸಲ್ಪಟ್ಟಿದೆ. ಅದರಿಂದಾಗಿ ಒಬ್ಬ ಭಿಕ್ಷುವು ಎಚ್ಚರಿಕೆಯಿಂದ ನಿರಂತರವಾಗಿ ನಿಧರ್ಾರಿತವಾಗಿ ಜೀವಿಸಿದ್ದೇ ಆದರೆ ಬಂಧನಕ್ಕೊಳಗಾದ ಮನಸ್ಸು ಬಂಧನದಿಂದ ವಿಮೋಚನೆ ಪಡೆಯುತ್ತದೆ, ಪೂರ್ಣವಾಗಿ ಕ್ಷಯಿಸದ ಆಸವಗಳು ಕ್ಷಯಿಸಿಹೋಗುತ್ತವೆ, ಇನ್ನು ದೊರಕದಿರುವ ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
4. ಅಲ್ಲದೆ ಮತ್ತೆ ಗೃಹಸ್ಥನೇ, ಭಿಕ್ಷುವು, ವಿತರ್ಕ ವಿಚಾರಗಳನ್ನು ಉಪಶಮನಗೊಳಿಸಿ, ಆಂತರಿಕ ಸ್ಥೈರ್ಯ... ಪುನರುಚ್ಚರಿಸಿ... ಸಮಾಧಿಯ ಎರಡನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ. ಸಮಾಧಿಯ ಈ ಎರಡನೆಯ ಹಂತವು ಯೋಜಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ... ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ ಗೃಹಸ್ಥನೆ, ಭಿಕ್ಷುವು ಆನಂದವನ್ನು ಮರೆಯಾಗಿಸಿ... ಪುನರುಚ್ಚರಿಸಿ... ಸಮಾಧಿಯ ಮೂರನೆಯ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಸಮಾಧಿಯ ಈ ಮೂರನೆಯ ಹಂತವು ಯೋಜಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ... ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ, ಗೃಹಸ್ಥನೆ, ಭಿಕ್ಷುವು ಸುಖವನ್ನು ಬಿಟ್ಟವನಾಗಿ... ಪುನರುಚ್ಚರಿಸಿ... ಸಮಾಧಿಯ ನಾಲ್ಕನೇ ಹಂತವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಸಮಾಧಿಯ ಈ ನಾಲ್ಕನೆಯ ಹಂತವು ಯೋಜಿಸಲಾಗಿದೆ ಮತ್ತು ನೆರವೇರಿಸಿದಂತಾಗಿದೆ... ಪುನರುಚ್ಚರಿಸಿ... ಅತ್ಯನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ, ಗೃಹಸ್ಥನೇ, ಭಿಕ್ಷುವು ಮೈತ್ರಿಯಿಂದ ಕೂಡಿದ ಮನಸ್ಸನ್ನು ಒಂದು ದಿಕ್ಕಿನ ಕಡೆ ಪೂರ್ಣವಾಗಿ ಹರಡಿ ನೆಲೆಗೊಳ್ಳುತ್ತಾನೆ. ಹಾಗೆಯೇ ಎರಡನೇ ದಿಕ್ಕಿನ ಕಡೆ, ಹಾಗೆಯೇ ಮೂರನೇ ದಿಕ್ಕಿನ ಕಡೆ ಹಾಗೆಯೇ ನಾಲ್ಕನೇ ದಿಕ್ಕಿನ ಕಡೆ, ಹಾಗೆಯೇ ಮೇಲೂ, ಕೆಳಗೂ, ಸುತ್ತೆಲ್ಲವೂ ಎಲ್ಲೆಡೆಯೂ ತಾನು ಸೇರಿದಂತೆ ಎಲ್ಲಕಡೆಗೂ ಎಲ್ಲವನ್ನೂ ಒಳಗೊಂಡಿರುವ ಪೂರ್ಣ ಲೋಕವನ್ನು ವಿಪುಲವಾದ ತುಂಬಿ ತುಳುಕುವ ಅಳತೆಗೆ ನಿಲುಕದ ವೈರ ತೊರೆದ ಹಗೆತನವಿಲ್ಲದ ಮೈತ್ರಿಯಿಂದ ಕೂಡಿದ ಮನಸ್ಸನ್ನು ಎಲ್ಲಕಡೆ ಹರಡಿ ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಈ ಮೈತ್ರಿಯಿಂದ ಕೂಡಿದ ಮನಸ್ಸಿನ ವಿಮುಕ್ತ ಸ್ತಿತಿಯು ಯೋಜಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ. ಆದರೆ ಯಾವುದು ಯೋಜಿಸಿರುವಂತಹುದೊ ಮತ್ತು ನೆರವೇರಿಸಿರುವುದೊ ಅದು ಅಶಾಶ್ವತವೂ ಹಾಗು ಅದು ನಿಂತು ಹೋಗಲೂ ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಅಲ್ಲಿಯೇ ನೆಲೆ ನಿಂತು ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ ಗೃಹಸ್ಥನೇ, ಭಿಕ್ಷುವು ಕರುಣೆಯಿಂದ ಕೂಡಿದ ಮನಸ್ಸನ್ನು... ಪುನರುಚ್ಚರಿಸಿ... ಮುದಿತೆಯಿಂದ ಕೂಡಿದ ಮನಸ್ಸನ್ನು... ಪುನರುಚ್ಚರಿಸಿ... ಸಮಚಿತ್ತತೆಯಿಂದ ಕೂಡಿದ ಮನಸ್ಸನ್ನು ಒಂದು ದಿಕ್ಕಿನ ಕಡೆ ಪೂರ್ಣವಾಗೆಲ್ಲ ಹರಡುತ್ತಾನೆ. ಹಾಗೆಯೇ ಎರಡನೇ ದಿಕ್ಕಿನ ಕಡೆ, ಹಾಗೆಯೇ ಮೂರನೇ ದಿಕ್ಕಿನ ಕಡೆ ಹಾಗೆಯೇ, ನಾಲ್ಕನೇ ದಿಕ್ಕಿನ ಕಡೆ, ಹಾಗೆಯೇ ಮೇಲೂ, ಕೆಳಗೂ, ಸುತ್ತೆಲ್ಲವೂ, ಎಲ್ಲೆಡೆಯೂ, ತಾನು ಸೇರಿದಂತೆ ಎಲ್ಲಕಡೆಗೂ ಎಲ್ಲವನ್ನೂ ಒಳಗೊಂಡಿರುವ ಪೂರ್ಣ ಲೋಕವನ್ನು ವಿಪುಲವಾದ ತುಂಬಿ ತುಳುಕುವ ಅಳತೆಗೆ ನಿಲುಕದ ವೈರತೊರೆದ ಹಗೆತನವಿಲ್ಲದ, ಸಮಚಿತ್ತತೆಯಿಂದ ಕೂಡಿದ ಮನಸ್ಸನ್ನು ಎಲ್ಲಕಡೆ ಹರಡಿ ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಸಮಚಿತ್ತತೆಯಿಂದ ಕೂಡಿದ ಮನಸ್ಸಿನ ವಿಮುಕ್ತ ಸ್ಥಿತಿಯು ಯೋಚಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ. ಆದರೆ ಯಾವುದು ಯೋಜಿಸಿರುವಂತಹುದೋ ಮತ್ತು ನೆರವೇರಿಸಿರುವುದೋ ಅದು ಅಶಾಶ್ವತವೂ ಹಾಗು ಅದು ನಿಂತು ಹೋಗಲೂ ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಅಲ್ಲಿಯೇ ನೆಲೆನಿಂತು... ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ, ಗೃಹಸ್ಥನೇ, ಆ ಭಿಕ್ಷುವು, ಎಲ್ಲಾ ರೂಪದ ಗುರುತುಗಳನ್ನು ಉಪಕ್ರಮಿಸಿ, ಘರ್ಷಣೆಯಿಂದಾಗುವ ಗುರುತುಗಳನ್ನು ಅಸ್ತಮಿಸಿ, ಬೇರೆ ಬೇರೆ ಗುರುತುಗಳನ್ನು ಆಲೋಚಿಸದೆ, ಆಕಾಶ ಅನಂತವೆಂದು-ಆಕಾಸಾನಂಚಾಯತನ ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಈ ಅಕಾಸಾನಂಚಾಯತನ ಸಿದ್ಧಿಯು ಯೋಚಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ. ಆದರೆ ಯಾವುದು ಯೊಚಿಸಿರುವಂತಹುದೊ ಮತ್ತು ನೆರವೇರಿಸಿರುವುದೊ ಅದು ಅಶಾಶ್ವತವೂ ಹಾಗು ಅದು ನಿಂತುಹೋಗಲೂ ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಅಲ್ಲಿಯೇ ನೆಲೆನಿಂತು... ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ, ಗೃಹಸ್ಥನೇ, ಆ ಭಿಕ್ಷುವು, ಎಲ್ಲಾ ಅಕಾಸಾನಂಚಾಯತನವನ್ನು ಉಪಕ್ರಮಿಸಿ ಅನಂತ ವಿಞ್ಞಾಣವೆಮದು ವಿಞ್ಞಾಣಂಚಾಯತನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಈ ವಿಞ್ಞಾಣಂಚಾಯತನ ಸಿದ್ಧಿಯು ಯೋಜಿಸಿರುವಂತಹುದೊ ಮತ್ತು ನೆರವೇರಿಸಿದಂತಾಗಿದೆ. ಆದರೆ ಯಾವುದು ಯೋಜಿಸಿರುವಂತಹುದೊ ಮತ್ತು ನೆರವೇರಿಸಿರುವುದೊ ಅದು ಅಶಾಶ್ವತವೂ ಹಾಗು ಅದು ನಿಂತುಹೋಗಲೂ ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಅಲ್ಲಿಯೇ ನೆಲೆನಿಂತು... ಪುನರುಚ್ಚರಿಸಿ... ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ.
ಅಲ್ಲದೆ ಮತ್ತೆ ಗೃಹಸ್ಥನೇ, ಆ ಭಿಕ್ಷುವು ಎಲ್ಲಾ ವಿಞ್ಞಾಣಂಚಾಯತನವನ್ನು ಉಪಕ್ರಮಿಸಿ ಏನೂ ಇಲ್ಲವೆಂದು ಅಕಿಂಚಞ್ಞಾಯತನವನ್ನು ಸಾಧಿಸಿಕೊಂಡು ನೆಲೆಗೊಳ್ಳುತ್ತಾನೆ. ಅವನು ಹೀಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುತ್ತಾನೆ- ಈ ಅಕಿಂಚಞ್ಞಾಯತನ ಸಿದ್ಧಿಯು ಯೋಜಿಸಿದಂತಾಗಿದೆ ಮತ್ತು ನೆರವೇರಿಸಿದಂತಾಗಿದೆ. ಆದರೆ ಯಾವುದು ಯೋಜಿಸಿರುವಂತಹುದೊ ಮತ್ತು ನೆರವೇರಿಸಿರುವುದೊ ಅದು ಅಶಾಶ್ವತವೂ ಹಾಗು ಅದು ನಿಂತುಹೋಗಲೂ ಸಾಧ್ಯವಿದೆ ಎಂದು ಅವನು ತಿಳಿಯುತ್ತಾನೆ. ಅವನು ಈ ನಂಬಿಕೆಯಲ್ಲಿ ನೆಲೆನಿಂತು, ಆಸವಗಳನ್ನು ಕ್ಷಯಿಸಿದ ಸ್ಥಿತಿಯನ್ನು ಪಡೆದುಕೊಳ್ಳುತ್ತಾನೆ. ಒಂದುವೇಳೆ ಅವನು ಆಸವಗಳನ್ನು ಕ್ಷಯಿಸಿದ ಸ್ಥಿತಿ ಪಡೆಯಲಾಗದಿದ್ದರೆ, ಆಗ ಇದರಿಂದಾಗಿ, ಈ ಧಮ್ಮ ಸಾಮಿಪ್ಯದಿಂದಾಗಿ, ಈ ಧಮ್ಮದಲ್ಲಿ ಸಂತೋಷ ಪಡೆದಿದ್ದರಿಂದಾಗಿ, ಕೆಳಗಿನ ಸ್ಥಿತಿಗಳಿಗೆ ಅಂಟಿಕೊಂಡಂತಹ ಐದುಬಗೆಯ ಸಂಕೋಲೆಗಳನ್ನು ನಾಶಮಾಡಿದವನಾಗಿ, ತನ್ನಷ್ಟಕ್ಕೆ ತಾನೇ ಮೇಲೇರಿದವನಾಗಿ ಅಲ್ಲಿಯೇ ನಿವರ್ಾಣವನ್ನು ಪಡೆದವನಾಗಿ ಆ ಲೋಕದಿಂದ ಹಿಂತಿರುಗಿ ಬರದವನಾಗುತ್ತಾನೆ. ಗೃಹಸ್ಥನೇ, ಇದು ಈ ಒಂದು ಧರ್ಮ ವಿಷಯ ತಿಳಿದಂತಹ ದರ್ಶಿಸಿದಂತಹ ಅರಹಂತರಾದ, ಸಮ್ಮಾಸಂಬುದ್ಧರಾದ ಭಗವಾನರಿಂದ ತಿಳಿಸಲ್ಪಟ್ಟಿದೆ. ಅದರಿಂದಾಗಿ ಒಬ್ಬ ಭಿಕ್ಷುವು ಎಚ್ಚರಿಕೆಯಿಂದ ನಿರಂತರವಾಗಿ ನಿಧರ್ಾರಿತವಾಗಿ ಜೀವಿಸಿದ್ದೇ ಆದರೆ ಬಂಧನಕ್ಕೊಳಗಾದ ಮನಸ್ಸು ಬಂಧನದಿಂದ ವಿಮೋಚನೆ ಪಡೆಯುತ್ತದೆ. ಪೂರ್ಣವಾಗಿ ಕ್ಷಯಿಸಿದ ಆಸವಗಳು ಕ್ಷಯಿಸಿ ಹೋಗುತ್ತವೆ. ಇನ್ನು ದೊರಕದಿರುವ ಅತ್ಯುನ್ನತವಾದ ಯೋಗಕ್ಷೇಮವು ಸಾಧಿಸಿಬರುತ್ತದೆ16 ಎಂದು.
3. ಗೃಹಸ್ಥ ದಸಮನ ಪ್ರಸನ್ನತೆ
5. ಹೀಗೆ ಹೇಳಿದ ಮೇಲೆ ಅಟ್ಠಕನಗರದ ಗೃಹಸ್ಥ ದಸಮನು ಆಯುಷ್ಮಂತ ಆನಂದರಿಗೆ ಹೀಗೆ ಹೇಳಿದನು- ಅದು ಹೇಗೆಂದರೆ ಭಂತೆ, ಆನಂದರೆ, ಯಾರೊಬ್ಬ ಮನುಷ್ಯನು ಅಡಗಿಸಿಟ್ಟಿರುವ ನಿಧಿಗಾಗಿ ಒಂದು ದಾರಿ ಹುಡುಕಲು ಆಶಿಸಿದಾಗ, ಅದೇ ಸಮಯಕ್ಕೆ ನಿಧಿಯಲ್ಲಿಗೆ ಹೋಗುವ ಹನ್ನೊಂದು ದಾರಿಗಳು ಸಿಕ್ಕಿದಂತೆ ಆಯಿತು.17 ಅದೇರೀತಿಯಲ್ಲಿ, ಭಂತೇ. ನಾನು ಒಂದೇ ಒಂದು ಅಮರತ್ವದ ಕಡೆ ಒಯ್ಯುವ ಬಾಗಿಲನ್ನು ಆಶಿಸಿ ಬಂದೆ, ಆದರೆ ಇದೇ ಸಮಯದಲ್ಲಿ ಅಮರತ್ವದ ಕಡೆ ಒಯ್ಯುವ ಹನ್ನೊಂದು ಬಾಗಿಲುಗಳು ಒದಗಿಬಂದವು. ಅದು ಹೇಗೆಂದರೆ, ಭಂತೇ ಒಬ್ಬ ಮನುಷ್ಯನ ಮನೆಗೆ ಹನ್ನೊಂದು ಬಾಗಿಲುಗಳಿದ್ದರೆ, ಒಂದುವೇಳೆ ಮನೆಗೆ ಬೆಂಕಿ ಬಿದ್ದಾಗ, ಅವನು ತನ್ನನ್ನು ತಾನು ಒಂದಲ್ಲಾ ಒಂದು ಬಾಗಿಲಿನಿಂದ ಸುರಕ್ಷತೆ ಮಾಡಿಕೊಳ್ಳಬಹುದು. ಅದೇರೀತಿಯಲ್ಲಿಯೇ ನಾನೂ ಕೂಡ. ಭಂತೇ, ಈ ಹನ್ನೊಂದು ಅಮರತ್ವದ ಬಾಗಿಲಿನಿಂದಾಗಿ ಒಂದಲ್ಲಾ ಒಂದು ಬಾಗಲಿನಿಂದ ನನ್ನನ್ನು ನಾನು ಸುರಕ್ಷತೆ ಮಾಡಿಕೊಳ್ಳಬಹುದು. ಭಂತೇ, ಈಗ ಬೇರೆಯ ಮತಾವಲಂಬಿಗಳು ಅವರ ಗುರುವಿಗೆ ಗುರುಕಾಣಿಕೆ ನೀಡಲು ಬಯಸುವವರು, ಹಾಗಿರುವಾಗ ನಾನು ಏಕೆ ಆಯುಷ್ಮಂತ ಆನಂದರಿಗೆ ಗೌರವಾರ್ಪಣೆ ಮಾಡಬಾರದು ಎಂದು.
ಆಗ ಅಟ್ಠಕನಗರದ ಗೃಹಸ್ಥ ದಸಮನು ಪಾಟಲಿಪುತ್ರ ಮತ್ತು ವೈಶಾಲಿಯ ಎಲ್ಲಾ ಭಿಕ್ಷು ಸಮೂಹವನ್ನು ಒಂದೆಡೆಗೆ ಆಮಂತ್ರಿಸಿ, ಯಥೇಚ್ಛವಾದ ಭಕ್ಷ್ಯ ಭೋಜ್ಯಗಳಿಂದ ಅಹಾರದಾನ ನೀಡಿ ಮತ್ತು ಒಬ್ಬೊಬ್ಬ ಭಿಕ್ಷುವಿಗೂ ಒಂದು ಜೊತೆ ಬಟ್ಟೆ ದಾನ ನೀಡಿ ಸಂತೃಪ್ತಿಗೊಳಿಸಿದನು ಮತ್ತು ಆಯುಷ್ಮಂತ ಆನಂದರಿಗೆ ಮೂರು ಜೊತೆ ಚೀವರ ದಾನ ನೀಡಿದುದಲ್ಲದೆ, ಆಯುಷ್ಮಂತ ಆನಂದರಿಗೆ ಐದು ನೂರು ನಾಣ್ಯಗಳ18 ಖರ್ಚಿನಿಂದ ಉಳಿಯಲು ಒಂದು ಮನೆ ಕಟ್ಟಿಸಿಕೊಟ್ಟನು.
ಟಿಪ್ಪಣಿಗಳು [4]
English
Việt Ngữ