ಊಟಿಸುತ್ತಿದೆ

ಅನುವಾದಗಳು [29]

ಕೀಟಾಗಿರಿ ಸುತ್ತ

ಕೀಟಾಗಿರಿ ಸುತ್ತ

1. ರಾತ್ರಿ ವೇಳೆಯ ಆಹಾರ ಸೇವನೆ ಬಿಡುವಿಕೆಯಲ್ಲಿ ಭಿಕ್ಷುಗಳಿಗೆ ಇಷ್ಟವಿಲ್ಲದಿರುವಿಕೆ

ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಕಾಶಿಯಲ್ಲಿ ದೊಡ್ಡದಾದ ಭಿಕ್ಷು ಸಮೂಹದೊಂದಿಗೆ ಪ್ರವಾಸ ಮಾಡುತ್ತಿದ್ದರು. ಆಗ ಭಗವಾನರು ಭಿಕ್ಷುಗಳನ್ನು ಕುರಿತು ಹೀಗೆ ಹೇಳಿದರು- ಭಿಕ್ಷುಗಳೇ, ನಾನು ರಾತ್ರಿ ವೇಳೆಯಲ್ಲಿ ಆಹಾರವನ್ನು ಸೇವಿಸುವುದಿಲ್ಲ. ಭಿಕ್ಷುಗಳೇ, ನಾನು ರಾತ್ರಿ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳುವುದಿಲ್ಲವಾದ್ದರಿಂದ, ನಾನು ಆರೋಗ್ಯದಿಂದಿರುವುದು ತಿಳಿದುಬಂದಿದೆ ಮತ್ತು ರೋಗರುಜಿನಗಳಿಲ್ಲದಿರುವುದು ಉತ್ಸಾಹದೊಂದಿಗೆ ಹಗುರವಾಗಿರುವಿಕೆ ಹಾಗೂ ಶಕ್ತಿ, ಅಲ್ಲದೆ ಸೌಖ್ಯದಿಂದಿರುವಿಕೆಯೂ ಕಂಡುಬಂದಿದೆ. ಭಿಕ್ಷುಗಳೇ, ನೀವುಗಳು ಕೂಡ ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳಬೇಡಿ. ನೀವುಗಳು ಕೂಡ ರಾತ್ರಿಯ ವೇಳೆ ಆಹಾರವನ್ನು ತೆಗೆದುಕೊಳ್ಳುವುದಿಲ್ಲದವರಾದರೆ, ಆರೋಗ್ಯದಿಂದಿರುವಿಕೆಯು, ರೋಗರುಚಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹಗುರವಾಗಿರುವಿಕೆಯೂ, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬರುವುದು.119 ಹಾಗೇ ಆಗಲಿ ಭಂತೆ ಎಂದು ಆ ಭಿಕ್ಷುಗಳು ಭಗವಾನರಿಗೆ ಉತ್ತರ ನೀಡಿದರು. ಆನಂತರದಲ್ಲಿ ಭಗವಾನರು ಕಾಶಿಯಲ್ಲಿ ಪ್ರವಾಸ ಮಾಡುತ್ತಾ ಸ್ವಲ್ಪ ಸಮಯದಲ್ಲಿ ಕೀಟಾಗಿರಿ ಎಂಬ ಕಾಶಿಯ ಪ್ರದೇಶದ ಪಟ್ಟಣಕ್ಕೆ ಬಂದು ತಲುಪಿದರು. ಆಗ ಭಗವಾನರು ಕಾಶೀ ಪ್ರದೇಶದ ಕೀಟಾಗಿರಿ ಪಟ್ಟಣದಲ್ಲಿ ತಂಗಿದ್ದರು.

2. ಆ ಒಂದು ಸಮಯದಲ್ಲಿ ಅಸ್ಸಜಿ ಮತ್ತು ಪುನಬ್ಬಸುಕ ಎಂಬ ಹೆಸರಿನ ಭಿಕ್ಷುಗಳು ಕೀಟಾಗಿರಿಯಲ್ಲಿ ವಾಸಮಾಡುತ್ತಿದ್ದರು.120 ಕೆಲವುಮಂದಿ ಭಿಕ್ಷುಗಳು ಆ ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳ ಬಳಿಗೆ ಬಂದರು; ಬಳಿಗೆ ಬಂದನಂತರ ಅಸ್ಸಜಿ ಮತ್ತು ಪುನಬ್ಬಸುಕರಿಗೆ ಭಿಕ್ಷುಗಳು ಹೀಗೆ ಹೇಳಿದರು- ಆಯುಷ್ಮಂತರುಗಳೇ, ಭಗವಾನರು ರಾತ್ರಿಯ ವೇಳೆ ಆಹಾರವನ್ನು ತೆಗೆದುಕೊಳ್ಳುವುದಿಲ್ಲ, ಅಂತೆಯೇ ಭಿಕ್ಷು ಸಮೂಹವೂ ಕೂಡ. ಆಯುಷ್ಮಂತರುಗಳೇ, ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳದಿರುವುದರಿಂದಾಗಿ ಅವರುಗಳು ಆರೋಗ್ಯದಿಂದಿರುವಿಕೆಯು ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹರುಗವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬಂದಿದೆ. ಆಯುಷ್ಮಂತರುಗಳೇ, ಬನ್ನಿ ನೀವುಗಳು ಕೂಡ ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳಬೇಡಿ. ಆಗ ನೀವುಗಳು ಕೂಡ ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳುವುದಿಲ್ಲದವರಾದರೆ ಆರೋಗ್ಯದಿಂದಿರುವಿಕೆಯು ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹರುಗವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬರುವುದು ಎಂದು. ಹೀಗೆ ಹೇಳಿದ ಮೇಲೆ, ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳು ಆ ಭಿಕ್ಷುಗಳಿಗೆ ಹೀಗೆ ಹೇಳಿದರು- ಆಯುಷ್ಮಂತರುಗಳೇ, ನಾವುಗಳು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ ಹಗಲಿನಲ್ಲೂ ಹಾಗೂ ಅವೇಳೆಯಲ್ಲೂ ಆಹಾರ ತೆಗೆದುಕೊಳ್ಳುತ್ತೇವೆ. ಹಗಲಿನಲ್ಲೂ ಹಾಗೂ ಅವೇಳೆಯಲ್ಲೂ ಆಹಾರ ತೆಗೆದುಕೊಳ್ಳುವೆವು. ಅಲ್ಲದೆ ನಾವುಗಳು ಕೂಡ ಆರೋಗ್ಯದಿಂದಿರುವಿಕೆ, ರೋಗರುಜಿನಗಳಿಲ್ಲದಿರುವಿಕೆ, ಉತ್ಸಾಹದಿಂದ ಹರುಗವಾಗಿರುವಿಕೆ, ಶಕ್ತಿ ಮತ್ತು ಸೌಖ್ಯದಿಂದಿರುವಿಕೆ ಕಂಡುಕೊಂಡಿದ್ದೇವೆ. ಆದ್ದರಿಂದಾಗಿ ನಾವುಗಳು ಈಗ ಕಾಣುವ ಮತ್ತು ಸಿಗುವುದನ್ನು ಬಿಟ್ಟು, ಈ ಸಮಯದಲ್ಲಿ ಸಿಗದಿರುವಂತಹುದನ್ನು ಪಡೆಯಲು ಹೋಗಬೇಕು ಯಾಕೆ? ಹಾಗಾಗಿ ನಾವುಗಳು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ ಹಗಲಿನಲ್ಲಿಯೂ ಮತ್ತು ಅವೇಳೆಯಲ್ಲಿಯೂ ಆಹಾರವನ್ನು ತೆಗೆದುಕೊಳ್ಳುತ್ತೇವೆ.

ಆ ಭಿಕ್ಷುಗಳು ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳನ್ನು ಅರಿತುಕೊಳ್ಳುವಂತೆ ಮಾಡಲು ಸಾಧ್ಯವಾಗದೇ ಹೋದಾಗ ಅವರುಗಳು ಭಗವಾನರೆಲ್ಲಿದ್ದರೋ ಅಲ್ಲಿಗೆ ಬಂದರು; ಬಳಿಗೆ ಬಂದನಂತರ ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಹೀಗೆ ಒಂದೆಡೆ ಕುಳಿತ ಆ ಭಿಕ್ಷುಗಳು ಭಗವಾನರಿಗೆ ಹೀಗೆ ಹೇಳಿದರು- ಇಲ್ಲಿ ನಾವುಗಳು, ಭಂತೇ, ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳ ಬಳಿಗೆ ಹೋಗಿದ್ದೆವು. ಬಳಿಗೆ ಹೋದ ನಂತರ ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳಿಗೆ ನಾವು ಹೀಗೆ ಹೇಳಿದೆವು- ಆಯುಷ್ಮಂತರುಗಳೇ, ಭಗವಾನರು ರಾತ್ರಿಯ ವೇಳೆ ಆಹಾರವನ್ನು ತೆಗೆದುಕೊಳ್ಳುವುದಿಲ್ಲ, ಅಂತೆಯೇ ಭಿಕ್ಷು ಸಮೂಹವೂ ಕೂಡ. ಆಯುಷ್ಮಂತರುಗಳೇ, ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳದಿರುವುದರಿಂದಾಗಿ ಅವರುಗಳು ಆರೋಗ್ಯದಿಂದಿರುವಿಕೆಯು ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹರುಗವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬಂದಿದೆ. ಆಯುಷ್ಮಂತರುಗಳೇ, ಬನ್ನಿ, ನೀವುಗಳು ಕೂಡ ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳಬೇಡಿ. ಆಗ ನೀವುಗಳು ಕೂಡ ರಾತ್ರಿಯ ವೇಳೆಯಲ್ಲಿ ಆಹಾರವನ್ನು ತೆಗೆದುಕೊಳ್ಳುವುದಿಲ್ಲದವರಾದರೆ ಆರೋಗ್ಯದಿಂದಿರುವಿಕೆಯು ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹರುಗವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬರುವುದು. ಹೀಗೆ ಹೇಳಿದ ಮೇಲೆ, ಭಂತೆ, ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳು ಆ ಭಿಕ್ಷುಗಳು ನಮಗೆ ಹೀಗೆ ಹೇಳಿದರು- ಆಯುಷ್ಮಂತರುಗಳೇ, ನಾವುಗಳು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ ಹಗಲಿನಲ್ಲೂ ಹಾಗೂ ಅವೇಳೆಯಲ್ಲೂ ಆಹಾರ ತೆಗೆದುಕೊಳ್ಳುತ್ತೇವೆ. ಹಗಲಿನಲ್ಲೂ ಹಾಗೂ ಅವೇಳೆಯಲ್ಲೂ ಆಹಾರ ತೆಗೆದುಕೊಳ್ಳುವೆವು. ಅಲ್ಲದೆ ನಾವುಗಳು ಕೂಡ ಆರೋಗ್ಯದಿಂದಿರುವಿಕೆ, ರೋಗರುಜಿನಗಳಿಲ್ಲದಿರುವಿಕೆ, ಉತ್ಸಾಹದಿಂದ ಹರುಗವಾಗಿರುವಿಕೆ, ಶಕ್ತಿ ಮತ್ತು ಸೌಖ್ಯದಿಂದಿರುವಿಕೆ ಕಂಡುಕೊಂಡಿದ್ದೇವೆ. ಆದ್ದರಿಂದಾಗಿ ನಾವುಗಳು ಈಗ ಕಾಣುವ ಮತ್ತು ಸಿಗುವುದನ್ನು ಬಿಟ್ಟು, ಈ ಸಮಯದಲ್ಲಿ ಸಿಗದಿರುವಂತಹುದನ್ನು ಪಡೆಯಲು ಹೋಗಬೇಕು ಯಾಕೆ? ಹಾಗಾಗಿ ನಾವುಗಳು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ ಹಗಲಿನಲ್ಲಿಯೂ ಮತ್ತು ಅವೇಳೆಯಲ್ಲಿಯೂ ಆಹಾರವನ್ನು ತೆಗೆದುಕೊಳ್ಳುತ್ತೇವೆ ಎಂದು. ಭಂತೆ, ನಾವುಗಳು ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳನ್ನು ಈ ವಿಷಯದಲ್ಲಿ ಒಪ್ಪಿಸಲು ಆಗಲಿಲ್ಲ. ಆದ್ದರಿಂದಾಗಿ ನಾವುಗಳು ಭಗವಾನರಲ್ಲಿ ಈ ವಿಷಯವನ್ನು ತಂದು ಹೇಳುತ್ತಿದ್ದೇವೆ ಎಂದು.

3. ಆಗ ಭಗವಾನರು ಮತ್ತೋಬ್ಬ ಭಿಕ್ಷುವನ್ನು ಕರೆದರು- ನೀನು ಬಾ ಇಲ್ಲಿ ಭಿಕ್ಷು, ನಾನು ಹೇಳಿದೆನೆಂದು ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳನ್ನು ಕರೆದು ತಾ- ಗುರುಗಳು ಆಯುಷ್ಮಂತನನ್ನು ಕರೆಯುತ್ತಿದ್ದಾರೆ ಎಂದು. ಹಾಗೆ ಆಗಲಿ ಭಂತೆ ಎಂದು ಆ ಭಿಕ್ಷುವು ಭಗವಾನರಿಗೆ ಉತ್ತರ ನೀಡಿದ ನಂತರ ಎಲ್ಲಿ ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳಿದ್ದರೋ ಅಲ್ಲಿಗೆ ಬಂದನು; ಬಂದನಂತರ ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳಿಗೆ ಹೀಗೆ ಹೇಳಿದನು- ಆಯುಷ್ಮಂತರುಗಳೇ ಗುರುಗಳು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು. ಹಾಗೇ ಆಗಲಿ ಆಯುಷ್ಮಂತನೇ ಎಂದು ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳು ಆ ಭಿಕ್ಷುವಿಗೆ ಉತ್ತರ ನೀಡಿದ ನಂತರ ಎಲ್ಲಿ ಭಗವಾನರಿದ್ದರೋ ಅಲ್ಲಿಗೆ ಬಂದರು. ಬಂದನಂತರ ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ಹೀಗೆ ಒಂದೆಡೆ ಕುಳಿತ ಅಸ್ಸಜಿ ಮತ್ತು ಪುನಬ್ಬಸುಕ ಭಿಕ್ಷುಗಳನ್ನು ಕುರಿತು ಭಗವಾನರು ಹೀಗೆ ಹೇಳಿದರು- ಭಿಕ್ಷುಗಳೇ, ಇದು ನಿಜವೇ, ಅಂದರೆ ಬಹಳ ಮಂದಿ ಭಿಕ್ಷುಗಳು ನಿಮ್ಮಲ್ಲಿಗೆ ಬಂದು ಹೀಗೆ ಹೇಳಿದರೆಂಬುದು- ಆಯುಷ್ಮಂತರುಗಳೇ, ಭಗವಾನರು ರಾತ್ರಿಯ ವೇಳೆಯಲ್ಲಿ ಊಟವನ್ನು ಮಾಡುವುದಿಲ್ಲ ಹಾಗೆಯೇ ಭಿಕ್ಷು ಸಮೂಹವೂ ಕೂಡ. ಆಯುಷ್ಮಂತರುಗಳೇ, ಹಾಗೆ ಅವರುಗಳು ರಾತ್ರಿಯ ವೇಳೆಯ ಊಟವನ್ನು ಮಾಡದಿರುವುದರಿಂದಾಗಿ ಆರೋಗ್ಯದಿಂದಿರುವಿಕೆಯು ಕಂಡುಬಂದಿದೆ. ಹಾಗೆ ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹಗುರವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬಂದಿದೆ ಎಂದು. ಬನ್ನಿ, ಆಯುಷ್ಮಂತರುಗಳೇ, ನೀವುಗಳೂ ಕೂಡ ರಾತ್ರಿಯ ವೇಳೆಯ ಊಟವನ್ನು ಮಾಡಬೇಡಿ. ಆಯುಷ್ಮಂತರುಗಳೇ, ನೀವುಗಳೂ ಕೂಡ ರಾತ್ರಿಯ ವೇಳೆಯ ಊಟವನ್ನು ಮಾಡಿದಿರುವುದರಿಂದ ಆರೋಗ್ಯದಿಂದಿರುವಿಕೆಯು ಕಂಡುಬರುವುದು, ಹಾಗೆ ರೋಗರುಜಿನಗಳಿಲ್ಲದಿರುವಿಕೆಯು, ಉತ್ಸಾಹದಿಂದ ಹಗುರವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯೂ ಕಂಡುಬರುವುದು ಎಂದು. ಭಿಕ್ಷುಗಳೇ ಹೀಗೆ ಹೇಳಿದ ಮೇಲೆ ನೀವುಗಳು ಆ ಭಿಕ್ಷುಗಳಿಗೆ ಹೀಗೆ ಹೆಳಿದ್ದು ನಿಜವೇ- ಆಯುಷ್ಮಂತರುಗಳೇ, ನಾವುಗಳು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ, ಹಗಲಿನಲ್ಲೂ ಮತ್ತು ಅವೇಳೆಯಲ್ಲೂ ಊಟ ಮಾಡುತ್ತೇವೆ. ಹಾಗೆ ನಾವು ಸಂಜೆಯಲ್ಲೂ, ಬೆಳಗಿನ ಸಮಯದಲ್ಲೂ, ಹಗಲಿನಲ್ಲೂ ಮತ್ತು ಅವೇಳೆಯಲ್ಲೂ ಊಟ ಮಾಡಿದರೂ ಆರೋಗ್ಯದಿಂದಿರುವಿಕೆಯು ಕಂಡುಬಂದಿದೆ, ರೋಗರುಜಿನಗಳಿಲ್ಲದಿರುವಿಕೆಯು ಉತ್ಸಾಹದಿಂದ ಹಗುರವಾಗಿರುವಿಕೆಯು, ಶಕ್ತಿ ಮತ್ತು ಸೌಖ್ಯದಿಂದಿರುವಿಕೆಯು ಕಂಡುಬಂದಿದೆ ಎಂದು, ನಾವು ಈಗ ಕಾಣುವ ಮತ್ತು ಸಿಗುವುದನ್ನು ಬಿಟ್ಟು ಈ ಸಮಯದಲ್ಲಿ ಸಿಗದಿರುವಂತಹುದನ್ನು ಪಡೆಯಲು ಹೋಗಬೇಕು ಏಕೆ? ಹಾಗಾಗಿ ನಾವು ಸಂಜೆಯಲ್ಲಿ, ಬೆಳಗಿನ ಸಮಯದಲ್ಲಿ, ಹಗಲಿನಲ್ಲಿ ಮತ್ತು ಅವೇಳೆಯಲ್ಲೂ ಊಟ ಮಾಡುತ್ತೇವೆ ಎಂದು.

ಹೌದು ಭಂತೆ.

4. ಭಿಕ್ಷುಗಳೇ, ಈ ರೀತಿಯಾಗಿ ನನ್ನಿಂದ ತಿಳಿಸಲ್ಪಟ್ಟಿರುವ ಧರ್ಮವನ್ನು ಅರಿತಿಲ್ಲವೇನು- ಯಾರೊಬ್ಬ ಮನುಷ್ಯನು ಯಾವರೀತಿಯ ಅನುಭವವನ್ನು ಅನುಭವಿಸಿದರೂ, ಅದು ಸುಖವಾಗಿರಬಹುದು ಅಥವಾ ದುಃಖವಾಗಿರಬಹುದು, ಅಥವಾ ಸುಖವೂ ಅಲ್ಲದ, ದುಃಖವೂ ಅಲ್ಲದ್ದಾಗಿರಬಹುದು. ಆತನಲ್ಲಿ ಅಕುಶಲದ ಸ್ಥಿತಿಗಳು ಕಡಿಮೆಯಾಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು.121

ಇಲ್ಲ ಭಂತೆ.

ಭಿಕ್ಷುಗಳೇ, ನೀವುಗಳು ನನ್ನಿಂದ ಈ ರೀತಿಯಾಗಿ ತಿಳಿಹೇಳಲ್ಪಟ್ಟಿರುವ ಧಮ್ಮವನ್ನು ಅರಿತಿಲ್ಲವೇನು? ಇಲ್ಲಿ ಯಾರೊಬ್ಬನು ಒಂದು ಬಗೆಯ ಸುಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆತನಲ್ಲಿ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವುವು122 ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವುವು. ಆದರೆ ಇಲ್ಲಿ ಯಾರೊಬ್ಬನು ಒಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆತನಲ್ಲಿ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುವವು. ಆದರೆ ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆತನಲ್ಲಿ ಅಕುಶಲದ ಸ್ಥಿತಿಗಳು ಕಡಿಮೆಯಾಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು, ಇಲ್ಲಿ ಯಾರೊಬ್ಬನು ಒಂದು ಬಗೆಯ ಸುಖವೂ ಅಲ್ಲದ ದುಃಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ ಆತನಲ್ಲಿ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆ ಆಗುತ್ತಾ ಹೋಗುವವು. ಆದರೆ ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆತನಲ್ಲಿ ಅಕುಶಲದ ಸ್ಥಿತಿಗಳು ಕಡಿಮೆ ಆಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವುದು ಎಂದು.

ಹೌದು ಭಂತೆ.

5. ಭಿಕ್ಷುಗಳೇ, ಒಳ್ಳೆಯದು. ಭಿಕ್ಷುಗಳೇ ಒಂದು ವೇಳೆ ಇದನ್ನು ನಾನು ಪ್ರಜ್ಞೆಯಿಂದ ಅರ್ಥ ಮಾಡಿಕೊಳ್ಳದೇ ಇದ್ದಾಗ ವೃದ್ಧಿಪಡಿಸಿಕೊಳ್ಳದಿದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಒಂದು ಬಗೆಯ ಸುಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುವವು ಎಂಬುದಾಗಿ, ನಾನು ತಿಳಿಯದವನಾಗಿ ಈ ಬಗೆಯ ಸುಖದ ಅನುಭವಗಳನ್ನು ತೊಡೆದುಹಾಕಿ ಎಂದು ಹೇಳಬಹುದೋ ಹಾಗೂ ನನ್ನ ಈ ರೀತಿಯ ವರ್ತನೆ, ಭಿಕ್ಷುಗಳೇ, ಸರಿಯಾಗಿರುವುದೋ? ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥಮಾಡಿಕೊಂಡಿರುವುದರಿಂದ, ನೋಡಿರುವುದರಿಂದ, ತಿಳಿದಿರುವುದರಿಂದ, ಸಾಕ್ಷಾತ್ಕರಿಸಿಕೊಂಡಿರುವುದರಿಂದ, ಗ್ರಹಿಸುವುದರಿಂದ- ಇಲ್ಲಿ ಯಾರೊಬ್ಬನು ಒಂದು ಬಗೆಯ ಸುಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುವವು ಎಂಬುದಾಗಿ ನಾನು ತಿಳಿದವನಾಗಿ ಈ ಬಗೆಯ ಸುಖದ ಅನುಭವಗಳನ್ನು ತೊಡೆದುಹಾಕಿ ಎಂದು ಹೇಳುತ್ತೇನೆ. ಭಿಕ್ಷುಗಳೇ, ಒಂದುವೇಳೆ, ನಾನು ಇದನ್ನು ಪ್ರಜ್ಞೆಯಿಂದ ಅರ್ಥಮಾಡಿಕೊಳ್ಳದೇ ಇದ್ದಾಗ, ವೃದ್ಧಿಪಡಿಸಿಕೊಳ್ಳದಿದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ಸುಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಈ ಬಗೆಯ ಸುಖದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳಬಹುದು; ಹಾಗೂ ನನ್ನ ಈ ರೀತಿಯ ವರ್ತನೆ, ಭಿಕ್ಷುಗಳೇ, ಸರಿಯಾಗಿರುವುದೇ ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥಮಾಡಿಕೊಂಡು ನೋಡಿ, ತಿಳಿದು, ಸಾಕ್ಷಾತ್ಕರಿಸಿಕೊಂಡು, ಗ್ರಹಿಸಿ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ಸುಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಈ ಬಗೆಯ ಸುಖದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳುತ್ತೇನೆ.

6. ಭಿಕ್ಷುಗಳೇ, ಒಂದುವೇಳೆ ನಾನು ಇದನ್ನು ಪ್ರಜ್ಞೆಯಿಂದ ಅರ್ಥಮಾಡಿಕೊಳ್ಳದೇ ಇದ್ದಾಗ, ವೃದ್ಧಿಪಡಿಸಿಕೊಳ್ಳದೇ ಇದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಒಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಎಂದು. ಹೀಗೆ ನಾನು ತಿಳಿಯದವನಾಗಿ ಈ ಒಂದು ಬಗೆಯ ದುಃಖದ ಅನುಭವವನ್ನು ತೊಡೆದುಹಾಕಬೇಕು ಎಂದು ಹೇಳಬಹುದು, ಹಾಗೂ ನನ್ನ ಈ ರೀತಿಯ ವರ್ತನೆ, ಭಿಕ್ಷುಗಳೇ ಸರಿಯಾಗಿರುವುದೆ? ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥಮಾಡಿಕೊಂಡು, ನೋಡಿ, ತಿಳಿದು, ಸಾಕ್ಷಾತ್ಕರಿಸಿಕೊಂಡು, ಗ್ರಹಿಸಿ- ಇಲ್ಲಿ ಯಾರೊಬ್ಬನು ಈ ಒಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಈ ಬಗೆಯ ದುಃಖದ ಅನುಭವಗಳನ್ನು ತೊಡೆದು ಹಾಕಿ ಎಂದು ಹೇಳುತ್ತೇನೆ. ಭಿಕ್ಷುಗಳೇ, ಒಂದುವೇಳೆ ನಾನು ಇದನ್ನು ಪ್ರಜ್ಞೆಯಿಂದ ಅರ್ಥಮಾಡಿಕೊಳ್ಳದೇ ಇದ್ದಾಗ, ವೃದ್ಧಿಪಡಿಸಿಕೊಳ್ಳದೇ ಇದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಈ ಬಗೆಯ ದುಃಖದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳಬಹುದು ಹಾಗೂ ನನ್ನ ಈ ರೀತಿಯ ವರ್ತನೆ, ಭಿಕ್ಷುಗಳೇ, ಸರಿಯೆನಿಸುವುದೇ? ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥ ಮಾಡಿಕೊಂಡು, ನೋಡಿ, ತಿಳಿದು, ಸಾಕ್ಷಾತ್ಕರಿಸಿಕೊಂಡು, ಗ್ರಹಿಸಿ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು, ಆದ್ದರಿಂದಾಗಿ ನಾನು ಈ ಬೇರೊಂದು ಬಗೆಯ ದುಃಖದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳುತ್ತೇನೆ.

7. ಭಿಕ್ಷುಗಳೇ, ಒಂದುವೇಳೆ, ನಾನು ಇದನ್ನು ಪ್ರಜ್ಞೆಯಿಂದ ಅರ್ಥಮಾಡಿಕೊಳ್ಳದೇ ಇದ್ದಾಗ, ವೃದ್ಧಿಪಡಿಸಿಕೊಳ್ಳದೇ ಇದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಒಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಎಂದು. ಹೀಗೆ ನಾನು ತಿಳಿಯದವನಾಗಿ ಈ ಒಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ತೊಡೆದುಹಾಕಬೇಕು ಎಂದು ಹೇಳಬಹುದು, ಹಾಗು ನನ್ನ ಈ ರೀತಿಯ ವರ್ತನೆ, ಭಿಕ್ಷುಗಳೇ, ಸರಿಯಾಗಿರುವುದೇ? ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥಮಾಡಿಕೊಂಡು ನೋಡಿ, ತಿಳಿದು, ಸಾಕ್ಷಾತ್ಕರಿಸಿಕೊಂಡು, ಗ್ರಹಿಸಿ- ಇಲ್ಲಿ ಯಾರೊಬ್ಬನು ಈ ಒಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಈ ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವಗಳನ್ನು ತೊಡೆದುಹಾಕಿ ಎಂದು ಹೇಳುತ್ತೇನೆ. ಭಿಕ್ಷುಗಳೇ, ಒಂದುವೇಳೆ ನಾನು ಇದನ್ನು ಪ್ರಜ್ಞೆಯಿಂದ ಅರ್ಥಮಾಡಿಕೊಳ್ಳದೇ ಇದ್ದಾಗ, ವೃದ್ಧಿಪಡಿಸಿಕೊಳ್ಳದೇ ಇದ್ದಾಗ, ನೋಡದಿದ್ದಾಗ, ತಿಳಿಯದಿದ್ದಾಗ, ಸಾಕ್ಷಾತ್ಕರಿಸಿಕೊಳ್ಳದಿದ್ದಾಗ, ಗ್ರಹಿಸದೇ ಇದ್ದಾಗ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಎಂದು. ಆದ್ದರಿಂದ ನಾನು ಈ ಬೇರೊಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳಬಹುದು, ಹಾಗು ನನ್ನ ಈ ರೀತಿಯ ವರ್ತನೆ ಭಿಕ್ಷುಗಳೇ, ಸರಿಯೆನಿಸಬಹುದೇ? ಎಂದು.

ಇಲ್ಲ ಭಂತೆ.

ಹಾಗಲ್ಲದೆ ಭಿಕ್ಷುಗಳೇ, ಇವುಗಳನ್ನು ನಾನು ಪ್ರಜ್ಞೆಯಿಂದ ಅರ್ಥಮಾಡಿಕೊಂಡು, ನೋಡಿ, ತಿಳಿದು, ಸಾಕ್ಷಾತ್ಕರಿಸಿಕೊಂಡು, ಗ್ರಹಿಸಿ- ಇಲ್ಲಿ ಯಾರೊಬ್ಬನು ಬೇರೊಂದು ಬಗೆಯ ದುಃಖವೂ ಅಲ್ಲದ ಸುಖವೂ ಅಲ್ಲದ ಅನುಭವವನ್ನು ಅನುಭವಿಸುತ್ತಾ ಇದ್ದರೆ, ಆಗ ಅಕುಶಲದ ಸ್ಥಿತಿಗಳು ಹೆಚ್ಚುತ್ತಾ ಹೋಗುವವು ಮತ್ತು ಕುಶಲದ ಸ್ಥಿತಿಗಳು ಕಡಿಮೆಯಾಗುತ್ತಾ ಹೋಗುವವು ಎಂದು. ಆದ್ದರಿಂದಾಗಿ ನಾನು ಬೇರೊಂದು ಬಗೆಯ ದುಃಖವೂ ಅಲ್ಲದ, ಸುಖವೂ ಅಲ್ಲದ ಅನುಭವಗಳನ್ನು ಪಡೆದುಕೊಳ್ಳುತ್ತಾ ಜೀವಿಸಿರಿ ಎಂದು ಹೇಳುತ್ತೇನೆ.

2. ಜಾಗ್ರತೆಯಿಂದ ಮಾಡಬೇಕಾದ್ದು, ಮಾಡಬೇಕಾಗಿಲ್ಲದ್ದು

8. ಭಿಕ್ಷುಗಳೇ, ಎಲ್ಲ ಭಿಕ್ಷುಗಳನ್ನೊಳಗೂಡಿಸಿ ಜಾಗ್ರತೆಯಿಂದ ಮಾಡುವಂತಹುದು (ಇನ್ನೂ ಇದೆ) ಎಂದು ನಾನು ಹೇಳುವುದಿಲ್ಲ; ಆದರೆ ಭಿಕ್ಷುಗಳೇ, ಎಲ್ಲ ಭಿಕ್ಷುಗಳನ್ನೊಳಗೂಡಿಸಿ ಜಾಗ್ರತೆಯಿಂದ ಮಾಡುವಂತಹುದು ಇಲ್ಲ ಎಂದೂ ನಾನು ಹೇಳುವುದಿಲ್ಲ. ಭಿಕ್ಷುಗಳೇ, ಯಾವ ಭಿಕ್ಷುಗಳು ಅರಹಂತರೂ, ಆಸವಗಳಿಲ್ಲದವರೂ, ಜೀವಿತವನ್ನು ಜೀವಿಸಿದವರು, ಮಾಡುವುದನ್ನು ಮಾಡಿ ಮುಗಿಸಿದವರು, ಭಾರವನ್ನು ಇಳಿಸಿದವರು, ತಮ್ಮ ಗುರಿಯನ್ನು ಸಾಧಿಸಿದವರು, ಆಗುವಿಕೆಯ ಬಂಧನವನ್ನು ಸಂಪೂರ್ಣವಾಗಿ ನಾಶ ಮಾಡಿದವರು, ಸರಿಯಾದ ಗಂಭೀರವಾದ ಜ್ಞಾನದಿಂದ ಬಿಡುಗಡೆ ಹೊಂದಿದವರು, ಭಿಕ್ಷುಗಳೇ, ಈ ರೀತಿಯ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇಲ್ಲ ಎಂದು ಹೇಳುತ್ತೇನೆ. ಅದಕ್ಕೇನು ಕಾರಣ? ಅವರಿಂದ ಜಾಗೃತೆಯಿಂದ (ಆಗಲೇ) ಮಾಡಲ್ಪಟ್ಟಿದೆ. ಅಜಾಗೃತರಾಗಲು ಇವರಿಂದ ಅಸಾಧ್ಯ ಭಿಕ್ಷುಗಳೇ, ಯಾವ ಭಿಕ್ಷುಗಳು ಕಲಿಯುವವರಾಗಿರುವವರೂ, ಸಂಪೂರ್ಣತೆಯನ್ನು ಸಾಧಿಸಿದವರೂ, ಆದರೆ ಯಾರು ಬಂಧನಗಳಿಂದ ಮುಕ್ತವಾದ ಅನುತ್ತರವಾದ ಯೋಗಕ್ಷೇಮವನ್ನು ಸಾಧಿಸಲು ಜೀವಿಸುತ್ತಿರುವವರೂ, ಭಿಕ್ಷುಗಳೇ, ಆ ರೀತಿಯ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು (ಇನ್ನೂ ಇದೆ) ಎಂದು ಹೇಳುತ್ತೇನೆ. ಅದಕ್ಕೇನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ ಜಾಗವನ್ನು ನೋಡುವವನಾಗಿದ್ದಾಗಲೇ, ಕಲ್ಯಾಣಮಿತ್ರರೊಂದಿಗೆ ಸೇರುವವನಾಗಿರುವಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವನಾಗಿರುವಾಗಲೇ- ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿ ರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆ ತಾನೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗೃತೆಯ ಫಲವನ್ನು ತಿಳಿದವನಾಗಿ ಈ ಜಾಗೃತೆಯಿಂದ ಮಾಡುವಂತಹುದ್ದು (ಇನ್ನೂ ಇದೆ) ಎಂದು ನಾನು ಹೇಳುತ್ತೇನೆ.

9. ಭಿಕ್ಷುಗಳೇ, ಏಳು ರೀತಿಯ ವ್ಯಕ್ತಿಗಳು ಲೋಕದಲ್ಲಿ ಜೀವಿಸುತ್ತಿದ್ದಾರೆ. ಯಾವ ಏಳು? (ನಾಮ-ರೂಪ) ಎರಡೂ ರೀತಿಯಿಂದಲೂ ವಿಮುಕ್ತಿ ಹೊಂದಿದವ, ಪ್ರಜ್ಞೆಯಿಂದ ವಿಮುಕ್ತಿ ಹೊಂದಿದವ (ಶರೀರ ಮುಖಾಂತರ) ಅಂತಿಮ ಗುರಿಯನ್ನು ಸಾಧಿಸಿದವ, (ತಪ್ಪು) ದೃಷ್ಟಿಯನ್ನು ಗೆದ್ದವ, ಶ್ರದ್ಧೆಯಿಂದ ವಿಮುಕ್ತಿ ಹೊಂದಿದವ, ಧಮ್ಮಾನುಸಾರವಾಗಿ ಪ್ರಯತ್ನಿಸುವವ, ಶ್ರದ್ಧೆಯ ಅನುಸಾರವಾಗಿ ಪ್ರಯತ್ನಿಸುವವ.

ಭಿಕ್ಷುಗಳೇ, ಯಾವ ರೀತಿಯ ವ್ಯಕ್ತಿ ಎರಡೂ ರೀತಿಯಿಂದಲೂ ವಿಮುಕ್ತಿ ಹೊಂದಿದವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ರೂಪವನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅಪರೂಪವಾಗಿರುವವೋ ಅವುಗಳನ್ನು ಶರೀರದಿಂದ (ರೂಪ ಶರೀರ ಮತ್ತು ಮಾನಸಿಕ ಶರೀರದಿಂದ) ಗ್ರಹಿಸಿ ಪ್ರಜ್ಞೆಯಿಂದ ನೋಡಿ ಆಸವಗಳನ್ನು ಸಂಪೂರ್ಣವಾಗಿ ನಾಶಮಾಡಿದವನಾಗುತ್ತಾನೆ. ಭಿಕ್ಷುಗಳೇ, ಎರಡೂ ರೀತಿಯಿಂದಲೂ ವಿಮುಕ್ತಿ ಹೊಂದಿದವನು ಎಂದು ಕರೆಯಲ್ಪಡುತ್ತಾನೆ.123 ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇಲ್ಲ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಅವನಿಂದ ಜಾಗೃತೆಯಿಂದ ಮಾಡಲ್ಪಟ್ಟಿದೆ. ಅವನು ಅಜಾಗೃತನಾಗಲು ಅಸಾಧ್ಯ.

ಭಿಕ್ಷುಗಳೇ, ಯಾವ ರೀತಿಯ ವ್ಯಕ್ತಿ ಪ್ರಜ್ಞೆಯಿಂದ ವಿಮುಕ್ತಿ ಹೊಂದಿದವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು, ರೂಪವನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅರೂಪವಾಗಿರುವವೋ ಅವುಗಳನ್ನು ಶರೀರದಿಂದ (ರೂಪಶರೀರ-ಮಾನಸಿಕ ಶರೀರದಿಂದ) ಗ್ರಹಿಸದೇ ಇರುತ್ತಾನೆ. ಆದರೂ ಪ್ರಜ್ಞೆಯಿಂದ ನೋಡಿ ಆಸವಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಾನೆ. ಭಿಕ್ಷುಗಳೇ, ಇವನು ಪ್ರಜ್ಞೆಯಿಂದ ವಿಮುಕ್ತಿ ಹೊಂದಿದವನು ಎಂದು ಕರೆಯಲ್ಪಡುತ್ತಾನೆ.124 ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವುದು ಇಲ್ಲ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಅವನಿಂದ ಜಾಗೃತೆಯಿಂದ ಮಾಡಲ್ಪಟ್ಟಿದೆ. ಅವನು ಅಜಾಗೃತನಾಗಲು ಅಸಾಧ್ಯ.

ಭಿಕ್ಷುಗಳೇ, ಯಾವ ರೀತಿಯ ವ್ಯಕ್ತಿ ಶರೀರ ಮುಖಾಂತರ ಅಂತಿಮ ಗುರಿಯನ್ನು ಸಾಧಿಸಿದವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ರೂಪವನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅರೂಪವಾಗಿರುವವೋ ಅವುಗಳನ್ನು ಶರೀರದಿಂದ (ರೂಪ-ಮಾನಸಿಕ ಶರೀರದಿಂದ) ಗ್ರಹಿಸಿ ಪ್ರಜ್ಞೆಯಿಂದ ನೋಡಿ ಕೆಲವು ಆಸವಗಳನ್ನು ನಾಶಮಾಡಿದವನಾಗುತ್ತಾನೆ. ಭಿಕ್ಷುಗಳೇ, ಇವನು ಶರೀರ ಮುಖಾಂತರ ಅಂತಿಮ ಗುರಿಯನ್ನು ಸಾಧಿಸಿದವ ಎಂದು ಕರೆಯಲ್ಪಡುತ್ತಾನೆ. ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ-ಜಾಗವನ್ನು ಹುಡುಕುವವನಾಗಿದ್ದಾಗಲೆ, ಕಲ್ಯಾಣ ಮಿತ್ರರೊಂದಿಗೆ ಸೇರುವವನಾಗಿದ್ದಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವನಾಗಿದ್ದಾಗಲೆ ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆ ತಾನೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗ್ರತೆಯ ಫಲವನ್ನು ತಿಳಿದವನಾಗಿ ಭಿಕ್ಷುಗಳಿಗೆ ಈ ಜಾಗ್ರತೆಯಿಂದ ಮಾಡುವಂತಹುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ.

ಭಿಕ್ಷುಗಳೇ, ಯಾವರೀತಿಯ ವ್ಯಕ್ತಿ ತಪ್ಪು ದೃಷ್ಟಿಯನ್ನು ಗೆದ್ದವನು? ಇಲ್ಲ ಒಬ್ಬ ವ್ಯಕ್ತಿಯು ರೂಪವನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅರೂಪವಾಗುವವೋ ಅವುಗಳನ್ನು ಶರೀರದಿಂದ (ರೂಪ ಶರೀರ-ಮಾನಸಿಕ ಶರೀರ) ಗ್ರಹಿಸದೇ ಇರುತ್ತಾರೆ. ಆದರೂ ಪ್ರಜ್ಞೆಯಿಂದ ನೋಡಿ ಕೆಲವು ಆಸವಗಳನ್ನು ನಾಶಮಾಡಿದವನಾಗುತ್ತಾನೆ. ತಥಾಗತರಿಂದ ಬೋಧಿಸಲ್ಪಟ್ಟ ಧಮ್ಮಗಳು ಅವನಿಂದ ಸಂಪೂರ್ಣವಾಗಿ ಪ್ರಜ್ಞೆಯಿಂದ ನೀಡಲ್ಪಟ್ಟಿವೆ ಮತ್ತು ಸಂಪೂರ್ಣವಾಗಿ ಅನುಸರಿಸಲ್ಪಟ್ಟಿವೆ. ಭಿಕ್ಷುಗಳೇ, ಇವನು ತಪ್ಪು ದೃಷ್ಟಿಯನ್ನು ಗೆದ್ದವನು ಎಂದು ಕರೆಯಲ್ಪಡುತ್ತಾನೆ. ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ- ಜಾಗವನ್ನು ಹುಡುಕುವವನಾಗಿದ್ದಾಗಲೆ, ಕಲ್ಯಾಣ ಮಿತ್ರರೊಂದಿಗೆ ಸೇರುವವನಾಗಿದ್ದಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವನಾಗಿದ್ದಾಗಲೇ- ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿ ರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆತಾನೆ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗ್ರತೆಯ ಫಲವನ್ನು ತಿಳಿದವನಾಗಿ ಈ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ.

ಭಿಕ್ಷುಗಳೇ, ಯಾವ ರೀತಿಯ ವ್ಯಕ್ತಿ ಶ್ರದ್ಧೆಯಿಂದ ವಿಮುಕ್ತಿ ಹೊಂದಿದವನು? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯ ರೂಪಗಳನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅರೂಪವಾಗಿರುವವೊ ಅವುಗಳನ್ನು ಶರೀರದಿಂದ (ರೂಪ ಕಾಯ-ನಾಮ ಕಾಯ) ಗ್ರಹಿಸದೆ ಇರುತ್ತಾನೆ. ಆದರೂ ಪ್ರಜ್ಞೆಯಿಂದ ನೋಡಿ ಕೆಲವೊಂದು ಆಸವಗಳನ್ನು ಸಂಪೂರ್ಣವಾಗಿ ನಾಶಮಾಡಿದವನಾಗುತ್ತಾನೆ, ತಥಾಗತರಲ್ಲಿ ಅವನ ಶ್ರದ್ಧೆಯು ನೆಲೆಗೊಂಡಿದೆ.125 ಅದು ನಿಷ್ಕಪಟವಾದದ್ದು ಮತ್ತು ಸ್ಥಾಪಿಸಲ್ಪಟ್ಟದ್ದು. ಭಿಕ್ಷುಗಳೇ, ಇವನು ಶ್ರದ್ಧೆಯಿಂದ ವಿಮುಕ್ತಿ ಹೊಂದಿದ ವ್ಯಕ್ತಿ ಎಂದು ಕರೆಯಲ್ಪಡುತ್ತಾನೆ. ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ ಜಾಗವನ್ನು ಹುಡುಕುವವನಾಗಿದ್ದಾಗಲೆ, ಕಲ್ಯಾಣ ಮಿತ್ರರೊಮದಿಗೆ ಸೇರುವವನಾಗಿದ್ದಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವನಾಗಿದ್ದಾಗಲೇ- ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿ ರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆ ತಾನೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗೃತೆಯ ಫಲವನ್ನು ತಿಳಿದವನಾಗಿ ಈ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ.

ಭಿಕ್ಷುಗಳೇ, ಯಾವರೀತಿಯ ವ್ಯಕ್ತಿ ಧಮ್ಮಾನುಸಾರವಾಗಿ ಪ್ರಯತ್ನಿಸುವವ? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ರೂಪಗಳನ್ನು ಅತಿಕ್ರಮಿಸಿ ಯಾವ ಶಾಂತ ಸ್ಥಿತಿಗಳು ಅರೂಪವಾಗಿರುವವೋ ಅವುಗಳನ್ನು ಶರೀರದಿಂದ (ರೂಪ ಕಾಯ-ನಾಮ ಕಾಯ) ಗ್ರಹಿಸದೇ ಇರುತ್ತಾನೆ. ಆದರೂ ಪ್ರಜ್ಞೆಯಿಂದ ನೋಡಿ ಕೆಲವೊಂದು ಆಸವಗಳನ್ನು ಸಂಪೂರ್ಣವಾಗಿ ನಾಶಮಾಡಿದವನಾಗುತ್ತಾನೆ. ಅವನಲ್ಲಿ ಈ ಸ್ಥಿತಿಗಳು ಇದ್ದರೂ ಕೂಡ ಅವುಗಳೆಂದರೆ-ಶ್ರದ್ಧೆ-ಇಂದ್ರಿಯ, ಪ್ರಯತ್ನ-ಇಂದ್ರಿಯ, ಜಾಗ್ರತೆ-ಇಂದ್ರಿಯ, ಸಮಾಧಿ-ಇಂದ್ರಿಯ, ಪ್ರಜ್ಞೆ-ಇಂದ್ರಿಯ, ತಥಾಗತರಿಂದ ಹೇಳಲ್ಪಟ್ಟ ಧಮ್ಮಗಳು ಅವನ ಪ್ರಜ್ಞೆಯಿಂದ ಮಿತವಾಗಿ ಸಮ್ಮತಿಸಲ್ಪಟ್ಟಿವೆ. ಭಿಕ್ಷುಗಳೇ, ಇವನು ಧಮ್ಮಾನುಸಾರವಾಗಿ ಪ್ರಯತ್ನಿಸುವವ ಎಂದು ಕರೆಯಲ್ಪಡುತ್ತಾನೆ.126 ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗ್ರತೆಯಿಂದ ಮಾಡುವುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ಅದಕ್ಕೆನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ ಜಾಗವನ್ನು ಹುಡುಕುವವನಾಗಿದ್ದಾಗಲೇ, ಕಲ್ಯಾಣಮಿತ್ರರೊಂದಿಗೆ ಸೇರುವವನಾಗಿದ್ದಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವ ನಾಗಿದ್ದಾಗಲೆ- ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿ ರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆ ತಾನೇ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗ್ರತೆಯ ಫಲವನ್ನು ತಿಳಿದವನಾಗಿ ಈ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ.

ಭಿಕ್ಷುಗಳೇ, ಯಾವ ರೀತಿಯ ವ್ಯಕ್ತಿ ಶ್ರದ್ಧೆಯ ಅನುಸಾರವಾಗಿ ಪ್ರಯತ್ನಿಸುವವ? ಭಿಕ್ಷುಗಳೇ, ಇಲ್ಲಿ ಒಬ್ಬ ವ್ಯಕ್ತಿಯು ರೂಪಗಳನ್ನು ಅತಿಕ್ರಮಿಸಿ ಯಾವ ಶಾಂತಸ್ಥಿತಿಗಳು ಅರೂಪವಾಗಿರುವವನೋ ಅವುಗಳನ್ನು ಶರೀರದಿಂದ (ರೂಪಕಾಯ-ನಾಮಕಾಯ) ಗ್ರಹಿಸದೇ ಇರುತ್ತಾನೆ. ಆದರೂ ಪ್ರಜ್ಞೆಯಿಂದ ನೋಡಿ ಕೆಲವೊಂದು ಆಸವಗಳನ್ನು ಸಂಪೂರ್ಣವಾಗಿ ನಾಶಮಾಡಿದವನಾಗುತ್ತಾನೆ. ಒಂದುವೇಳೆ ಅವನಿಗೆ ತಥಾಗತರಲ್ಲಿ ಸಾಕಷ್ಟು ಶ್ರದ್ಧೆ ಇದ್ದರೆ ಮತ್ತು ಸಾಕಷ್ಟು ಗೌರವವಿದ್ದರೆ ಅವನು ಈ ಸ್ಥಿತಿಗಳನ್ನು ಹೊಂದುತ್ತಾನೆ. ಶ್ರದ್ಧೆ-ಇಂದ್ರಿಯ, ಪ್ರಯತ್ನ-ಇಂದ್ರಿಯ, ಜಾಗ್ರತಿ-ಇಂದ್ರಿಯ, ಸಮಾಧಿ-ಇಂದ್ರಿಯ ಮತ್ತು ಪ್ರಜ್ಞೆ-ಇಂದ್ರಿಯ. ಭಿಕ್ಷುಗಳೇ, ಇವನು ಶ್ರದ್ಧೆಯ ಅನುಸಾರವಾಗಿ ಪ್ರಯತ್ನಿಸುವ ವ್ಯಕ್ತಿ ಎಂದು ಕರೆಯಲ್ಪಡುತ್ತಾನೆ. ಭಿಕ್ಷುಗಳೇ, ಇಂತಹ ಭಿಕ್ಷುಗಳಿಗೆ ಜಾಗ್ರತೆಯಿಂದ ಮಾಡುವುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ಅದಕ್ಕೇನು ಕಾರಣ? ಈ ಆಯುಷ್ಮಂತನು ಸರಿಯಾದ ಇರುವ ಜಾಗವನ್ನು ಹುಡುಕುವವನಾಗಿದ್ದಾಗಲೆ, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವನಾಗಿದ್ದಾಗಲೆ- ಯಾವ ಕಾರಣಕ್ಕಾಗಿ ಕುಲಪುತ್ರನು ಬ್ರಹ್ಮಚರ್ಯದ ಅನುತ್ತರವಾದ ಗುರಿಯನ್ನು ಸಾಧಿಸಲು ಸರಿ ರೀತಿಯಲ್ಲಿಯೇ ಮನೆ ಬಿಟ್ಟು ಮನೆ ಇಲ್ಲದವನಾಗಿ ಪಬ್ಬಜಿತನಾಗುತ್ತಾನೆಯೋ ಅದನ್ನು ಇಲ್ಲಿಯೇ ಈಗಲೇ ತನಗೆ ತಾನೆ ಉತ್ಕೃಷ್ಟವಾದ ಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡು ಸಾಧಿಸಿದವನಾಗಿ ಅದರಲ್ಲಿ ನೆಲೆಗೊಳ್ಳಬಹುದು! ಭಿಕ್ಷುಗಳೇ, ಈ ಜಾಗ್ರತಿಯ ಫಲವನ್ನು ತಿಳಿದವನಾಗಿ ಈ ಭಿಕ್ಷುಗಳಿಗೆ ಜಾಗೃತೆಯಿಂದ ಮಾಡುವಂತಹುದು ಇನ್ನೂ ಇದೆ ಎಂದು ನಾನು ಹೇಳುತ್ತೇನೆ.

ಗಂಭೀರ-ಜ್ಞಾನ-ಗಳಿಸುವಿಕೆ ಕ್ರಮೇಣವಾಗಿ ಮಾರ್ಗಕ್ಕನುಸಾರವಾಗಿ ನಡೆಯುವುದರಿಂದ ಆಗಿಬರುತ್ತದೆ

10. ಭಿಕ್ಷುಗಳೇ, ಗಂಭೀರ-ಜ್ಞಾನ-ಗಳಿಸುವಿಕೆ ನೇರವಾಗಿ ಬರುತ್ತದೆಂದು ನಾನು ಹೇಳುವುದಿಲ್ಲ; ಭಿಕ್ಷುಗಳೇ, ಆದರೂ ಗಂಭೀರ-ಜ್ಞಾನ-ಗಳಿಸುವಿಕೆ ಕ್ರಮೇಣವಾಗಿ ಕಲಿಯುವುದರಿಂದ, ಕ್ರಮೇಣವಾಗಿ (ಪ್ರಯತ್ನ) ಮಾಡುವುದರಿಂದ ಮತ್ತು ಕ್ರಮೇಣವಾಗಿ ಮಾರ್ಗಕ್ಕನುಸಾರವಾಗಿ ನಡೆಯುವುದರಿಂದ ಆಗಿಬರುತ್ತದೆ. ಭಿಕ್ಷುಗಳೇ, ಹೇಗೆ ಕ್ರಮೇಣವಾಗಿ ಕಲಿಯುವುದರಿಂದ, ಕ್ರಮೇಣವಾಗಿ ಮಾಡುವುದರಿಂದ ಮತ್ತು ಕ್ರಮೇಣವಾಗಿ ಮಾರ್ಗಕ್ಕನುಸಾರವಾಗಿ ನಡೆಯುವುದರಿಂದ ಗಂಭೀರ-ಜ್ಞಾನ-ಗಳಿಸುವಿಕೆ ಆಗಿಬರುತ್ತದೆ? ಇಲ್ಲಿ ಭಿಕ್ಷುಗಳೇ, ಶ್ರದ್ಧೆಯುಳ್ಳವನು (ಗುರುವಿನ) ಹತ್ತಿರಕ್ಕೆ ತಲುಪುತ್ತಾನೆ, ಹತ್ತಿರಕ್ಕೆ ಬಂದು ಹತ್ತಿರದಲ್ಲೇ ಕುಳಿತುಕೊಳ್ಳುತ್ತಾನೆ. ಹತ್ತಿರದಲ್ಲಿ ಕುಳಿತು ಕಿವಿಗೊಡುತ್ತಾನೆ. ಕಿವಿಗೊಟ್ಟು ಧಮ್ಮವನ್ನು ಕೇಳುತ್ತಾನೆ, ಧಮ್ಮವನ್ನು ಕೇಳಿದವನಾಗಿ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ, ನೆನಪಿಟ್ಟ ಧಮ್ಮಗಳ ಅರ್ಥವನ್ನು ಪರೀಕ್ಷಿಸುತ್ತಾನೆ; ಧಮ್ಮಗಳ ಅರ್ಥವನ್ನು ಪರೀಕ್ಷಿಸಿ ಸಮ್ಮತಿಸುತ್ತಾನೆ, ಅವುಗಳ ಸಮ್ಮತಿಯಿಂದ (ಧಮರ್ಾಚರಣೆಯಲ್ಲಿ) ಅಪೇಕ್ಷೆ ಉಂಟಾಗುತ್ತದೆ, ಈ ಅಪೇಕ್ಷೆಯಿಂದ ಪ್ರಯತ್ನಿಸುತ್ತಾನೆ, ಪ್ರಯತ್ನಿಸಿದವನಾಗಿ ಅದನ್ನು ತುಲನೆ ಮಾಡುತ್ತಾನೆ, ತುಲನೆ ಮಾಡಿದವನಾಗಿ ವಿಶೇಷ ಪ್ರಯತ್ನ ಮಾಡುತ್ತಾನೆ, ವಿಶೇಷ ಪ್ರಯತ್ನ ಮಾಡಿದ್ದರಿಂದಾಗಿ (ಮಾನಸಿಕ) ಶರೀರದಿಂದ ಪರಮ ಸತ್ಯವನ್ನೇ ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಅಲ್ಲದೆ ಪ್ರಜ್ಞೆಯಿಂದ ಅದನ್ನು ಆಳವಾಗಿ ಪರೀಕ್ಷಿಸಿ ಕಂಡುಕೊಳ್ಳುತ್ತಾನೆ.127 ಭಿಕ್ಷುಗಳೇ, ಆದರೆ ಆ ಶ್ರದ್ಧೆ ಇರದೆ ಹೋಗಿದ್ದರೆ,128 ಭಿಕ್ಷುಗಳೇ, ಅವನು (ಗುರುವಿನ) ಹತ್ತಿರಕ್ಕೆ ತಲುಪುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ, ಹತ್ತಿರದಲ್ಲೇ ಕುಳಿತುಕೊಳ್ಳುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ ಕಿವಿಗೊಡುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ, ಧಮ್ಮವನ್ನು ಕೇಳುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ, ಅರ್ಥವನ್ನು ಪರೀಕ್ಷಿಸುತ್ತಿರಲಿಲ್ಲ; ಅದರಿಂದ, ಭಿಕ್ಷುಗಳೇ, ಧರ್ಮದ ಅರ್ಥವನ್ನು ಪರೀಕ್ಷಿಸಿ ಸಮ್ಮತಿಸುತ್ತಿರಲಿಲ್ಲ; ಅದರಿಂದ, ಭಿಕ್ಷುಗಳೇ (ಧಮರ್ಾಚರಣೆಯಲ್ಲಿ) ಅಪೇಕ್ಷೆ ಉಂಟಾಗುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ, ಪ್ರಯತ್ನ ಇರುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ, ತುಲನೆ ಇರುತ್ತಿರಲಿಲ್ಲ; ಅದರಿಂದ ಭಿಕ್ಷುಗಳೇ ವಿಶೇಷ ಪ್ರಯತ್ನ ಮಾಡುತ್ತಿರಲಿಲ್ಲ. ಭಿಕ್ಷುಗಲೇ, ನೀವು ತಪ್ಪು ದಾರಿಯಲ್ಲಿದ್ದೀರಿ, ಭಿಕ್ಷುಗಳೇ, ನೀವು ಅಸತ್ಯದ ದಾರಿಯಲ್ಲಿದ್ದೀರಿ. ಭಿಕ್ಷುಗಳೇ, ಮೂರ್ಖರು ಈ ಧಮ್ಮ ಮತ್ತು ವಿನಯದಿಂದ ಎಷ್ಟು ದೂರ ಹೋಗಿದ್ದೀರಿ?

11. ಭಿಕ್ಷುಗಳೇ, ನಾಲ್ಕು ವಿಧದ ವಿವರಣೆ ಇದೆ. ಅದನ್ನು ಪಠಿಸಿದಾಗ ಜ್ಞಾನಿ ಪುರುಷನು ಅದರ ಅರ್ಥವನ್ನು ಕೂಡಲೇ ಪ್ರಜ್ಞೆಯಿಂದ ತಿಳಿದುಕೊಳ್ಳುತ್ತಾನೆ. ಭಿಕ್ಷುಗಳೇ, ನಿಮಗಾಗಿ ನಾನು ಪಠಿಸುತ್ತೇನೆ, ನೀವು ನನ್ನಿಂದ ತಿಳಿದುಕೊಳ್ಳುವಿರಿ129 ಎಂದು.

ಭಂತೆ, ನಾವು ಯಾರು, ಯಾರು ಈ ಧಮ್ಮವನ್ನು ತಿಳಿದವರು? ಎಂದು.

ಭಿಕ್ಷುಗಳೇ, ಒಬ್ಬ ಗುರುವು ಕೂಡ ಪ್ರಾಪಂಚಿಕ ವಸ್ತುಗಳ ಮೇಲೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾನೆ (ಅಂದರೆ ಬುದ್ಧರ ಅನುಯಾಯಿ ಹೊರತು) ಅವನು ಪ್ರಾಪಂಚಿಕ ವಸ್ತುಗಳ ವಾರಸುದಾರನು ಮತ್ತು ಆ ಪ್ರಾಪಂಚಿಕ ವಸ್ತುಗಳೊಡನೆ ಜೀವಿಸುತ್ತಾನೆ- ಅವನಿಗೂ ಕೂಡ ಏಕೆ ಈ ತರಹದ ಚೌಕಾಶಿ ಮತ್ತು ಕೊಸರಾಡುವಿಕೆ ಅನ್ವಯಿಸುವುದಿಲ್ಲ- ಅವರು (ಅನುಯಾಯಿಗಳು) ಇದನ್ನು ಅಥವಾ ಅದನ್ನು ಅವರು ಇಚ್ಛಿಸಿದಂತೆ ಮತ್ತು ಇಚ್ಛೆ ಮಾಡಿರದಂತೆ ಮಾಡುತ್ತಾರೆ ಅಥವಾ ಮಾಡುವುದಿಲ್ಲ ಎಂದು, ಭಿಕ್ಷುಗಳೇ, ಇವೆಲ್ಲವನ್ನೂ ಬಿಟ್ಟು ಪ್ರಾಪಂಚಿಕ ವಿಷಯಗಳಿಂದ ದೂರವಿರುವ ತಥಾಗತರೊಂದಿಗೆ ಇದರ ಸಂಬಂಧವೇನು? ಭಿಕ್ಷುಗಳೇ, ಯಾವ ಶಿಷ್ಯನಿಗೆ ಗುರುವಿನ ಶಾಸನದಲ್ಲಿ ಶ್ರದ್ಧೆ ಇದೆಯೋ ಮತ್ತು ಅದರೊಂದಿಗೆ ಇರುತ್ತಾನೊ ಅದು ಒಂದು ತತ್ವವಾಗುತ್ತದೆ- ನನ್ನ ಗುರುಗಳು ಭಗವಾನರು, ನಾನು ಅವರ ಶಿಷ್ಯ; ಭಗವಾನರು ತಿಳಿದವರು, ನಾನು ತಿಳಿದವನಲ್ಲ ಎಂದು. ಭಿಕ್ಷುಗಳೇ, ಯಾವ ಶಿಷ್ಯನಿಗೆ ಗುರುವಿನ ಶಾಸನದಲ್ಲಿ ಶ್ರದ್ಧೆ ಇದೆಯೋ ಮತ್ತು ಅದರೊಂದಿಗೆ ಇರುತ್ತಾನೊ ಅವನಿಗೆ ಗುರುವಿನ ಉಪದೇಶ ಮುಂದಿನ ಬೆಳವಣಿಗೆಯಾಗುತ್ತದೆ ಮತ್ತು ಶಕ್ತಿಯನ್ನು ಕೊಡುತ್ತದೆ.130 ಭಿಕ್ಷುಗಳೇ, ಯಾವ ಶಿಷ್ಯನಿಗೆ ಗುರುವಿನ ಶಾಸನದಲ್ಲಿ ಶ್ರದ್ಧೆ ಇದೆಯೋ ಮತ್ತು ಅದರೊಂದಿಗೆ ಇರುತ್ತಾನೊ ಅದು ಒಂದು ತತ್ವ ಆಗುತ್ತದೆ- ಯಾವುದರಿಂದ ಇಲ್ಲಿಯವರೆಗೆ ಗೆಲ್ಲದಿರುವುದನ್ನು ಮನುಷ್ಯ ಬಲದಿಂದ, ಮನುಷ್ಯ ಶಕ್ತಿಯಿಂದ, ಪ್ರಯತ್ನದಿಂದ ಗೆಲ್ಲಬಹುದೋ; ಒಂದುವೇಳೆ ಆ ಶಕ್ತಿಯ ಸುಳಿ ನನ್ನಲ್ಲಿ ಉಂಟಾಗುತ್ತಿದ್ದರೆ, ಕೇವಲ ಚರ್ಮ, ನರ, ಎಲುಬು ನನ್ನಲ್ಲಿ ಉಳಿದರೂ ಸರಿ ಮತ್ತು ನನ್ನ ಶರೀರದ ಮಾಂಸ ರಕ್ತಗಳು ಒಣಗಿ ಹೋದರೂ ಸರಿ, ನಾನು ಅದನ್ನು ಸಂತೋಷದಿಂದಲೇ ನೆರವೇರಿಸುತ್ತೇನೆ ಎಂದು. ಭಿಕ್ಷುಗಳೇ, ಯಾವ ಶಿಷ್ಯನಿಗೆ ಗುರುವಿನ ಶಾಸನದಲ್ಲಿ ಶ್ರದ್ಧೆ ಇದೆಯೋ ಮತ್ತು ಅದರೊಂದಿಗೆ ಇರುತ್ತಾನೆಯೋ ಎರಡು ಫಲಗಳನ್ನು ನಿರೀಕ್ಷಿಸಬಹುದು- ಇಲ್ಲಿಯೇ ಈಗಲೇ ಗಂಭೀರ-ಜ್ಞಾನ ಅಥವಾ ಏನಾದರೂ ಮರುಹುಟ್ಟಿಗೆ ಉಪಾದಿ ಇದ್ದರೆ ಅನಗಾಮಿ ಸ್ಥಿತಿ ಎಂದು.

ಹೀಗೆ ಭಗವಾನರು ನುಡಿದರು. ಸ್ಫೂರ್ತಿಗೊಂಡ ಆ ಭಿಕ್ಷುಗಳು ಭಗವಾನರ ಮಾತಿಗ ಸಂತೋಷಗೊಂಡರು.

ಇಲ್ಲಿಗೆ ಕೀಟಾಗಿರಿ ಸುತ್ತ ಮುಗಿಯಿತು

ಟಿಪ್ಪಣಿಗಳು [4]